* ಹಳೆಯ ಶಸ್ತ್ರಾಸ್ತ್ರಗಳಿಂದ ಇಂದಿನ ಯುದ್ಧ ಗೆಲ್ಲಲಾಗಲ್ಲ: ಸಿಡಿಎಸ್
- ಇಂದಿನ ಯುದ್ಧಕ್ಕೆ ನಾಳಿನ ತಂತ್ರಜ್ಞಾನ ಅಗತ್ಯ: ರಕ್ಷಣಾ ಪಡೆ ಮುಖ್ಯಸ್ಥ- ವಿದೇಶಿ ಶಸ್ತ್ರಾಸ್ತ್ರಗಳ ಅವಲಂಬನೆಯಷ್ಟೇ ಸಾಲದು
==================ನವದೆಹಲಿ: ಆಪರೇಷನ್ ಸಿಂದೂರದ ಬಳಿಕ ಸೇನಾ ಸಾಮರ್ಥ್ಯದ ಮೆಚ್ಚುಗೆ ವ್ಯಕ್ತವಾಗುತ್ತಿರುವ ನಡುವೆ ‘ಹಳೆಯ ಶಸ್ತ್ರಾಸ್ತ್ರಗಳಿಂದ ಆಧುನಿಕ ಯುದ್ಧ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಭವಿಷ್ಯವನ್ನು ಕೇಂದ್ರೀಕರಿಸಿ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುವ ಅಗತ್ಯವಿದೆ’ ಎಂದು ರಕ್ಷಣಾ ಪಡೆ ಮುಖ್ಯಸ್ಥ ಜ. ಅನಿಲ್ ಚೌಹಾಣ್ ಅಭಿಪ್ರಾಯ ಪಟ್ಟರು.ದೆಹಲಿಯಲ್ಲಿ ನಡೆದ ರಕ್ಷಣಾ ಕಾರ್ಯಗಾರದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಸಿಡಿಎಸ್, ‘ನಿನ್ನೆಯ ಶಸ್ತ್ರಾಸ್ತ್ರಗಳು ಇಂದಿನ ಯುದ್ಧ ಗೆಲ್ಲಿಸುವುದಿಲ್ಲ. ಇಂದಿನ ಯುದ್ಧಕ್ಕೆ ನಾಳಿನ ತಂತ್ರಜ್ಞಾನದ ಅಗತ್ಯವಿದೆ. ನಮ್ಮ ಕಾರ್ಯಾಚರಣೆಗಳಿಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ಅವಲಂಬಿತವಾಗಿರಲು ಸಾಧ್ಯವಿಲ್ಲ. ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆ ನಮ್ಮ ಸಿದ್ಧತೆ ದುರ್ಬಲಗೊಳಿಸುತ್ತದೆ’ ಎಂದರು.
ಇಂದಿನ ಯುದ್ಧಗಳಲ್ಲಿ ಡ್ರೋನ್‌ಗಳ ಪಾತ್ರ ದೊಡ್ಡದು ಎಂದ ರಕ್ಷಣಾ ಪಡೆ ಮುಖ್ಯಸ್ಥ, ‘ಡ್ರೋನ್‌ಗಳು ಯುದ್ಧದಲ್ಲಿ ದೊಡ್ಡ ಬದಲಾವಣೆ ಬದಲಾವಣೆ ತರುತ್ತವೆ. ಸೇನೆಯು ಡ್ರೋನ್‌ಗಳನ್ನು ಯುದ್ಧದಲ್ಲಿ ಕ್ರಾಂತಿಕಾರಿಯಾಗಿ ಬಳಸುತ್ತಿದೆ. ಭಾರತಕ್ಕೆ ಯುಎವಿಗಳು ಮತ್ತು ಸಿ - ಯುಎಎಸ್ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಕಾರ್ಯತಂತ್ರವಿರಬೇಕು. ಅದು ಭವಿಷ್ಯದಲ್ಲಿ ಸಬಲೀಕರಣಕ್ಕೆ ಸಾಧ್ಯ’ ಎಂದರು.ಇದೇ ವೇಳೆ ಪಹಲ್ಗಾಂ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆಯ ಬಗ್ಗೆ ಮಾತನಾಡಿ ‘ಮೇ 10 ರಂದು ನಡೆದ ಆಪರೇಷನ್ ಸಿಂದೂರ ವೇಳೆಯಲ್ಲಿ ಪಾಕಿಸ್ತಾನ ಶಸ್ತ್ರಾಸ್ತ್ರ ರಹಿತ ಡ್ರೋನ್, ಹಾರಾಡುವ ಯುದ್ಧ ಸಾಮಾಗ್ರಿಗಳನ್ನು ಬಳಸಿಕೊಂಡಿತ್ತು. ಅವು ಭಾರತೀಯ ಮಿಲಿಟರಿ ಮತ್ತು ನಾಗರಿಕ ಮೂಲಸೌಕರ್ಯಕ್ಕೆ ಹಾನಿ ಮಾಡಿರಲಿಲ್ಲ. ಸೇನೆಯು ಚಲನಶೀಲ ಮತ್ತು ಚಲನಶೀಲ ರಹಿತ ಯುದ್ಧ ಸಾಮಾಗ್ರಿಗಳನ್ನು ಬಳಸುವ ಮೂಲಕ ಅವುಗಳನ್ನು ನಿಷ್ಕ್ರೀಯಗೊಳಿಸಿತು. ಆ ವೇಳೆ ಕೆಲವು ಡ್ರೋನ್‌ಗಳು ಹಾನಿಯಾಗದೆ ಚೇತರಿಸಿಕೊಂಡವು’ ಎಂದು ಹೇಳಿದರು.ಪಹಲ್ಗಾಂ ದಾಳಿ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದ ಉಗ್ರರು
-ಎನ್‌ಐಎ ತನಿಖೆ ವೇಳೆ ಪ್ರತ್ಯಕ್ಷದರ್ಶಿಯಿಂದ ಮಾಹಿತಿ-ಲಷ್ಕರ್ ಕಮಾಂಡರ್ ಸುಲೈಮಾನ್ ಕೂಡ ಕೃತ್ಯದಲ್ಲಿ ಭಾಗಿಶ್ರೀನಗರ: ಏ.22ರಂದು ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಕೊಂದ ಬಳಿಕ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಪಟ್ಟರು ಎಂಬ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.
ಸ್ಥಳೀಯ ಸೇವಾ ಪೂರೈಕೆದಾರನೊಬ್ಬ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಉಗ್ರರನ್ನು ಎದುರುಗೊಂಡ. ಆ ವೇಳೆ ಅವರು ಆಗಸದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದಾಗಿ ತನಿಖಾ ಸಂಸ್ಥೆಗೆ ಮಾಹಿತಿ ಒದಗಿಸಿದ್ದಾನೆ. ಈಗಾಗಲೇ ಎನ್‌ಐಎ ಬಂಧಿಸಿರುವ ಇಬ್ಬರು ಸ್ಥಳೀಯರು ಉಗ್ರರಿಗೆ ಅಗತ್ಯ ವ್ಯವಸ್ಥೆಗಳ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಉಗ್ರರ ವಸ್ತುಗಳನ್ನು ಇವರೇ ಕಾಯುತ್ತಿದ್ದರು ಎಂದೂ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾನೆ.ಪ್ರಕರಣದಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಸುಲೈಮಾನ್ ಕೂಡ ಸೇರಿದ್ದಾನೆ. ಈತ ಝಡ್ ಮೋರ್ಹ್ ಸುರಂಗ ನಿರ್ಮಾಣ ಸಂಸ್ಥೆಯ ಮೇಲಿನ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಇತರ 3 ಉಗ್ರ ಕೃತ್ಯಗಳ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.