ಸುದ್ದಿ ಓದುವಾಗ ಇಸ್ರೇಲ್‌ ದಾಳಿಗೆ ಬೆಚ್ಚಿ ಒಡಿದ ನಿರೂಪಕಿ!

KannadaprabhaNewsNetwork |  
Published : Jul 17, 2025, 12:30 AM IST
ಸಿರಿಯಾ | Kannada Prabha

ಸಾರಾಂಶ

ಇಸ್ರೇಲ್‌ ಬುಧವಾರ ಸಿರಿಯಾ ರಾಜಧಾನಿ ಮೇಲೆ ವಾಯುದಾಳಿ ಮಾಡಿದಾಗ, ಸ್ಫೋಟದ ಶಬ್ದಕ್ಕೆ ಬೆಚ್ಚಿದ ಟೀವಿ ಸುದ್ದಿವಾಚಕಿ, ನೇರಪ್ರಸಾರದ ವೇಳೆಯೇ ಓಡಿ ಹೋದ ಪ್ರಸಂಗ ನಡೆದಿದೆ.

ಡಮಾಸ್ಕಸ್: ಇಸ್ರೇಲ್‌ ಬುಧವಾರ ಸಿರಿಯಾ ರಾಜಧಾನಿ ಮೇಲೆ ವಾಯುದಾಳಿ ಮಾಡಿದಾಗ, ಸ್ಫೋಟದ ಶಬ್ದಕ್ಕೆ ಬೆಚ್ಚಿದ ಟೀವಿ ಸುದ್ದಿವಾಚಕಿ, ನೇರಪ್ರಸಾರದ ವೇಳೆಯೇ ಓಡಿ ಹೋದ ಪ್ರಸಂಗ ನಡೆದಿದೆ.

ಇಸ್ರೇಲಿ ಸಚಿವ ಇಸ್ರೇಲ್‌ ಕಾಟ್ಜ್‌ ವಿಡಿಯೋ ಹಂಚಿಕೊಂಡು,‘ಹಿಂದೆ ನೀಡಿದ್ದ ಎಚ್ಚರಿಕೆ ಅಂತ್ಯವಾಗಿದೆ. ಈಗ ಭೀಕರ ದಾಳಿಯ ಆರಂಭ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ತಿಂಗಳು ಇರಾನ್‌ನ ಮಾಧ್ಯಮ ಕಚೇರಿ ಮೇಲೆ ಇಸ್ರೇಲ್‌ ದಾಳಿ ಮಾಡಿದಾಗಳೂ ಅಲ್ಲಿನ ವಾರ್ತಾವಾಚಕಿ ಓಡಿ ಹೋಗಿದ್ದರು.

==

ಸಿರಿಯಾ ರಾಜಧಾನಿ ಡಮಾಸ್ಕಸ್‌ ಮೇಲೆ ಇಸ್ರೇಲ್‌ ದಾಳಿ

ಡಮಾಸ್ಕಸ್‌: ಮಧ್ಯ ಪ್ರಾಚ್ಯ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಕಡಿಮೆಯಾಗುವ ಹಾಗೇ ಕಾಣಿಸುತ್ತಿಲ್ಲ. ಬುಧವಾರ ಇಸ್ರೇಲಿ ಪಡೆಗಳು ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಅಲ್ಲಿನ ರಕ್ಷಣಾ ಸಚಿವಾಲಯದ ಎದುರೇ ವಾಯುದಾಳಿ ಮಾಡಿವೆ.ಸಿರಿಯಾದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಡ್ರೂಜ್‌ ಎಂಬ ಮುಸ್ಲಿಂ ಒಳಗಿನ ಸಣ್ಣ ಪಂಗಡವೊಂದು ಪ್ರತಿಭಟಿಸುತ್ತಿದೆ. ಸರ್ಕಾರದೊಂದಿಗೆ ಕದನವಿರಾಮ ವಿಫಲವಾದ ಬೆನ್ನಲ್ಲೇ ಅದು ದಾಳಿ ಮಾಡುತ್ತಿದೆ. ಹೀಗಾಗಿ ಈ ಡ್ರೂಜ್‌ ಪಡೆಗೆ ಬೆಂಬಲವಾಗಿ ಇಸ್ರೇಲ್‌ ಸಿರಿಯಾ ಸರ್ಕಾರದ ಮೇಲೆ ದಾಳಿ ಮಾಡಿದೆ.

ಡ್ರೂಜ್ ಧಾರ್ಮಿಕ ಪಂಥವು 10ನೇ ಶತಮಾನದ ಶಿಯಾ ಇಸ್ಲಾಂನ ಒಂದು ಶಾಖೆಯಾದ ಇಸ್ಮಾಯಿಲಿಸಂನ ಒಂದು ಪಂಗಡವಾಗಿ ಪ್ರಾರಂಭವಾಯಿತು. ವಿಶ್ವಾದ್ಯಂತ 10 ಲಕ್ಷ ಜನರಿದ್ದು, ಅದರಲ್ಲಿ ಅರ್ಧ ಸಿರಿಯಾದಲ್ಲಿದ್ದಾರೆ. ಇಸ್ರೇಲ್‌ನಲ್ಲಿಯೂ ಸಹ ಈ ಪಂಗಡದವರಿದ್ದಾರೆ.

==

ಇಸ್ರೇಲ್‌: ಬೆಂಬಲ ಹಿಂಪಡೆದ ಮಿತ್ರಪಕ್ಷ; ನೆತನ್ಯಾಹು ಬಲ ಕುಸಿತ

ಟೆಲ್‌ ಅವೀವ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಲಿಕುಡ್‌ ಪಕ್ಷದ ಮಿತ್ರ ಯುನೈಟೆಡ್ ಟೋರಾ ಜುದಾಯಿಸಂ(ಯುಟಿಜೆ) ಪಾರ್ಟಿ ತನ್ನ ಬೆಂಬಲವನ್ನು ಹಿಂಪಡೆದಿದೆ. ಪರಿಣಾಮವಾಗಿ, ಸಂಸತ್ತಿನಲ್ಲಿ ನೆತನ್ಯಾಹು ಅವರ ಪಕ್ಷಕ್ಕಿದ್ದ ಬಹುಮತ ಈಗ ಇಲ್ಲವಾಗಿದೆ.ಅಲ್ಟ್ರಾ-ಆರ್ಥೊಡಾಕ್ಸ್‌ ಪಕ್ಷವೆಂದು ಗುರುತಿಸಿಕೊಂಡಿರುವ ಯುಟಿಜೆ, ತನ್ನ ಘಟಕಗಳಿಗೆ ವ್ಯಾಪಕ ಮಿಲಿಟರಿ ಕರಡು ವಿನಾಯಿತಿಗಳನ್ನು ನೀಡುವ ಉದ್ದೇಶಿತ ಕಾನೂನಿನ ಸುತ್ತಲಿನ ಭಿನ್ನಾಭಿಪ್ರಾಯಗಳ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.

PREV

Latest Stories

ಚು.ಆಯೋಗ ಬಿಜೆಪಿಯ ಚುನಾವಣಾ ಕಳ್ಳತನದ ಶಾಖೆ: ರಾಗಾ ವಾಗ್ದಾಳಿ
ಹಿಂದುಳಿದ ವರ್ಗಗಳ ಮೀಸಲು ಶೇ.42ಕ್ಕೆ ಹೆಚ್ಚಳ: ತೆಲಂಗಾಣ
ನಿವೃತ್ತಿ 10 ವರ್ಷ ಬಳಿಕ ಪೂರ್ಣ ಪಿಎಫ್‌ ಹಣ ಹಿಂಪಡೆವ ಚಾನ್ಸ್‌