ಭಾರತ ವಿರೋಧಿ ಕೃತ್ಯಕ್ಕೆ ಖಲಿಸ್ತಾನಿಗಳಿಂದ ತನ್ನ ನೆಲೆ ಬಳಕೆ : ಒಪ್ಪಿದ ಕೆನಡಾ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 05:30 AM IST
ಕೆನಡಾ | Kannada Prabha

ಸಾರಾಂಶ

ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ.

 ಒಟ್ಟಾವಾ: ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ. ಕೆನಡಾದ ಕೆನಡಿಯನ್ ಸೆಕ್ಯೂರಿಟಿ ಇಂಟಲಿಜೆನ್ಸ್ ಸರ್ವೀಸ್‌ ( ಸಿಎಸ್‌ಐಎಸ್‌) ಭಾರತದ ವಿರುದ್ಧ ಖಲಿಸ್ತಾನಿಗಳ ಕುತಂತ್ರವನ್ನು ಕೊನೆಗೂ ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. 

ಏಜೆನ್ಸಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಕೆನಡಾದೊಳಗೆ ವಿದೇಶಿ ಹಸ್ತಕ್ಷೇಪ, ಉಗ್ರಗಾಮಿ ಚಟುವಟಿಕೆಯ ಬಗ್ಗೆ ಕಳವಳಕಾರಿ ಅಂಶಗಳು ಬಯಲು ಮಾಡಿದ್ದು, ‘ ಖಲಿಸ್ತಾನಿ ಉಗ್ರಗಾಮಿಗಳು ಭಾರತದಲ್ಲಿ ಹಿಂಸಾಚಾರ ಬಿತ್ತರಿಸಲು, ನಿಧಿ ಸಂಗ್ರಹಣೆಯಂತಹ ಯೋಜನೆಗಳಿಗೆ ಕೆನಡಾವನ್ನುನೆಲೆಯಾಗಿ ಬಳಸುತ್ತಿದೆ’ ಎಂದಿದೆ. ಈ ಮೂಲಕ ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ಸುರಕ್ಷಿತ ತಾಣ ಎನ್ನುವುದು ಬಹಿರಂಗವಾಗಿದೆ.. ಇನ್ನು ಕೆನಡಾ ಖಲಿಸ್ತಾನಿಗಳ ವಿರುದ್ಧ ಉಗ್ರವಾದ ಎಂಬ ಪದವನ್ನು ಅಧಿಕೃತವಾಗಿ ಬಳಸಿದ್ದು, ಇದೇ ಮೊದಲು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ
ಭಾರತದ ಮಹಾ ದಿಗ್ವಿಜಯ ಯುರೋಪ್‌ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್‌