ಡೂಮ್ಸ್‌ ಡೇ ವಿಮಾನ ಪ್ರತ್ಯಕ್ಷ : ಅಮೆರಿಕ ರಣರಂಗಕ್ಕೆ?

KannadaprabhaNewsNetwork |  
Published : Jun 19, 2025, 11:48 PM ISTUpdated : Jun 20, 2025, 05:33 AM IST
ಅಮೆರಿಕ | Kannada Prabha

ಸಾರಾಂಶ

ಇಸ್ರೇಲ್‌ ಇರಾನ್‌ ಸಂಘರ್ಷ ಕೈಮೀರಿ ಹೋಗುತ್ತಿರುವ ಹೊತ್ತಿನಲ್ಲಿ, ಅಮೆರಿಕ ಕೂಡ ರಣರಂಗ ಪ್ರವೇಶ ಸಾಧ್ಯತೆ ದಟ್ಟವಾಗಿಸುವ ಬೆಳವಣಿಗೆಯೊಂದು ನಡೆದಿದೆ. ಅಣ್ವಸ್ತ್ರ ದಾಳಿ ಸಹಿಸಬಲ್ಲ ಅಮೆರಿಕದ ‘ಡೂಮ್ಸ್‌ಡೇ ವಿಮಾನ’ ಇದ್ದಕ್ಕಿದ್ದಂತೆ ಕಾರ್ಯಪ್ರವೃತ್ತವಾಗಿದ್ದು, ವಾಷಿಂಗ್ಟನ್‌ಗೆ ಬಂದಿಳಿದಿದೆ.

 ವಾಷಿಂಗ್ಟನ್‌: ಇಸ್ರೇಲ್‌- ಇರಾನ್‌ ಸಂಘರ್ಷ ಕೈಮೀರಿ ಹೋಗುತ್ತಿರುವ ಹೊತ್ತಿನಲ್ಲಿ, ಅಮೆರಿಕ ಕೂಡ ರಣರಂಗ ಪ್ರವೇಶ ಸಾಧ್ಯತೆ ದಟ್ಟವಾಗಿಸುವ ಬೆಳವಣಿಗೆಯೊಂದು ನಡೆದಿದೆ. ಅಣ್ವಸ್ತ್ರ ದಾಳಿ ಸಹಿಸಬಲ್ಲ ಅಮೆರಿಕದ ‘ಡೂಮ್ಸ್‌ಡೇ ವಿಮಾನ’ ಇದ್ದಕ್ಕಿದ್ದಂತೆ ಕಾರ್ಯಪ್ರವೃತ್ತವಾಗಿದ್ದು, ವಾಷಿಂಗ್ಟನ್‌ಗೆ ಬಂದಿಳಿದಿದೆ.

ಈ ಇ-4ಬಿ ರಾತ್ರಿ ನೈಟ್‌ವಾಚ್‌ (ರಾತ್ರಿ ಕಣ್ಗಾವಲು) ವಿಮಾನ ಲೂಸಿಯಾನದಲ್ಲಿರುವ ಬಾರ್ಕ್ಸ್‌ಡೇಲ್ ವಾಯುನೆಲೆಯಿಂದ ಮೇರಿಲ್ಯಾಂಡ್‌ನ ಆ್ಯಂಡ್ರ್ಯೂಸ್‌ ನೆಲೆಗೆ ಬಂದಿಳಿದಿದೆ. ಶರಣಾಗಲು ಒಪ್ಪಂದ ಇರಾನ್‌ಗೆ ಮುಂದಿನ ವಾರ ನಾನೇನು ಮಾಡುತ್ತೇನೋ ನನಗೇ ಗೊತ್ತಿಲ್ಲ ಎಂದು ಟ್ರಂಪ್‌ ಅಬ್ಬರಿಸಿದ ಮಾರನೇ ದಿನವೇ ಈ ವಿಮಾನ ಪ್ರತ್ಯಕ್ಷವಾಗಿದೆ. ಈ ಹಿಂದೆ ಇದನ್ನು 9/11ರಂದು ಅವಳಿ ಕಟ್ಟಡಗಳ ಮೇಲೆ ಉಗ್ರ ದಾಳಿ ನಡೆದಾಗ ಬಳಸಲಾಗಿತ್ತು. ಈಗ ಮತ್ತೆ ಇದು ಕಾಣಿಸಿಕೊಂಡಿರುವುದರಿಂದ ಯುದ್ಧದಲ್ಲಿ ಅಮೆರಿಕದ ಭಾಗವಹಿಸುವಿಕೆಯ ಚರ್ಚೆಗಳು ಜೋರಾಗಿವೆ.

ವಿಮಾನದ ವಿಶೇಷತೆ?:

ಅಣು ದಾಳಿ ಹಾಗೂ ಎಲೆಕ್ಟ್ರೋಮ್ಯಾಗ್ನೆಟಿಕ್‌ ಪಲ್ಸ್‌ಅನ್ನು ಸಹಿಸಲು ಶಕ್ತವಾಗಿರುವ ಈ ವಿಮಾನವನ್ನು ‘ಹಾರುವ ಪೆಂಟಗನ್‌’(ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ಎಂದೇ ಕರೆಯಲಾಗುತ್ತದೆ. ಕಾರಣ, ತುರ್ತು ಸಂದರ್ಭಗಳಲ್ಲಿ ಸೇನೆಯ ಸಂಚಾರಿ ಕಮಾಂಡ್‌ ಕೇಂದ್ರದಂತೆ ಇದು ಕೆಲಸ ಮಾಡುತ್ತದೆ. 67 ಉಪಗ್ರಹ ಡಿಶ್‌ಗಳು ಮತ್ತು ಆ್ಯಂಟೆನಾಗಳು ಇದರಲ್ಲಿದ್ದು, ಜಾಗತಿಕ ಸಂವಹನಕ್ಕೆ ಸಹಕಾರಿಯಾಗಿದೆ. 

ತುರ್ತು ಸಂದರ್ಭಗಳಲ್ಲಿ ದೇಶದ ಅಧ್ಯಕ್ಷರು, ರಕ್ಷಣಾ ಕಾರ್ಯದರ್ಶಿ ಮತ್ತು ಹಿರಿಯ ಮಿಲಿಟರಿ ನಾಯಕರ ನಡುವೆ ನಿರಂತರ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ವಿಮಾನದಲ್ಲಿ ಸಭಾ ಕೊಠಡಿ, ರಣತಂತ್ರ ಕೊಠಡಿ, ಸಂವಹನ ವಲಯ ಮತ್ತು ವಿಶ್ರಾಂತಿಗಾಗಿ 18 ಬಂಕ್‌ಗಳು ಇವೆ. ಹಾರುವಾಗಲೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿದ್ದು, ನಿರಂತರ 35 ತಾಸು ಹಾರಾಟ ನಡೆಸುವ ತಾಕತ್ತು ಹೊಂದಿದೆ.

PREV
Read more Articles on

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ