ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ

KannadaprabhaNewsNetwork |  
Published : Jun 18, 2025, 11:49 PM ISTUpdated : Jun 18, 2025, 11:50 PM IST
ಮೋದಿ | Kannada Prabha

ಸಾರಾಂಶ

ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಗ್ರವಾದವನ್ನು ಹರುಡುವವರು ಮತ್ತು ಬೆಂಬಲಿಸುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿ7 ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

ಉಗ್ರ ಪೋಷಕರು, ಬೆಂಬಲಿಗರ ವಿರುದ್ಧ ಕ್ರಮಕ್ಕೆ ಜಾಗತಿಕ ನಾಯಕರಿಗೆ ಆಗ್ರಹಉಗ್ರವಾದ ಬೆಂಬಲಿಸುವವರಿಗೆ ಬಹುಮಾನ: ಅಮೆರಿಕ ವಿರುದ್ಧ ಪರೋಕ್ಷ ಟೀಕೆ

ಕಾನನಸ್ಕಿಸ್: ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಗ್ರವಾದವನ್ನು ಹರುಡುವವರು ಮತ್ತು ಬೆಂಬಲಿಸುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿ7 ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

‘ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ವಿಚಾರ ಮತ್ತು ನೀತಿ ಸ್ಪಷ್ಟವಾಗಿರಬೇಕು. ಯಾವುದೇ ದೇಶ ಉಗ್ರವಾದವನ್ನು ಬೆಂಬಲಿಸಿದಲ್ಲಿ, ಅದು ತಕ್ಕ ಬೆಲೆ ತೆರಬೇಕು’ ಎಂದ ಮೋದಿ, ‘ಒಂದು ಕಡೆ ನಮ್ಮ ಸ್ವಂತ ಆದ್ಯತೆಗಳಿಗೆ ಅನುಸಾರವಾಗಿ ನಿರ್ಬಂಧಗಳನ್ನು ವಿಧಿಸಲು ಮುಂದಾಗುತ್ತೇವೆ. ಮತ್ತೊಂದೆಡೆ, ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ದೇಶಗಳಿಗೆ ಬಹುಮಾನ ನೀಡಲಾಗುತ್ತದೆ’ ಎಂದರು. ಈ ಮೂಲಕ, ಭಾರತ ಸೇರಿದಂತೆ ವಿವಿಧ ದೇಶಗಳ ಆಮದಿನ ಮೇಲೆ ತೆರಿಗೆ ಹೇರಿದ ಮತ್ತುದುಗ್ರಪೋಷಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ಅವರನ್ನು ಔತಣಕ್ಕೆ ಆಹ್ವಾನಿಸಿದ ಅಮೆರಿಕದ ನಡೆಯನ್ನು ಕಟು ಶಬ್ದಗಳಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ, ಜಾಗತಿಕ ದಕ್ಷಿಣ(ಅಭಿವೃದ್ಧಿ ಹೊಂದುತ್ತಿರುವ) ದೇಶಗಳ ಕಳವಳ ಮತ್ತು ಆದ್ಯತೆಗಳ ಕಡೆಗೂ ಗಮನ ಹರಿಸುವಂತೆ ಕರೆ ನೀಡಿರುವ ಮೋದಿ, ಸುಸ್ಥಿರ ಯೋಜನೆಗಳ ಮೂಲಕ ಇಂಧನ ಭದ್ರತೆ ಸಾಧನೆ, ಎಐ ಕಳವಳಗಳ ನಿವಾರಣೆಯತ್ತ ಗಮನ ಹರಿಸುವಂತೆಯೂ ಸಲಹೆ ನೀಡಿದರು.

==

ನಾನು ನಿಮ್ಮಂತಾಗಲು ಪ್ರಯತ್ನಿಸುವೆ: ಮೋದಿಗೆ ಮೆಲೋನಿ

- ಜಿ7 ವೇಳೆ ಉಭಯ ನಾಯಕರ ಆತ್ಮೀಯ ಶುಭಾಶಯ ವಿನಿಮಯ

ಕಾನನಸ್ಕಿಸ್ (ಕೆನಡಾ): ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬುಧವಾರ ಜಿ-7 ಶೃಂಗದ ವೇಳೆ ಸ್ನೇಹಪರತೆ ಪ್ರದರ್ಶಿಸಿ ಗಮನ ಸೆಳೆದರು.ಮೋದಿ ಅವರನ್ನು ಮೆಲೋನಿ ಭೇಟಿ ಆಗಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಂತೆ, ನೀವು ಅತ್ಯುತ್ತಮರು, ನಾನು ನಿಮ್ಮಂತೆಯೇ ಆರಲು ಪ್ರಯತ್ನಿಸುತ್ತಿದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಮೋದಿ ಅವರು ನಗುತ್ತಾ ಇಟಲಿ ಪ್ರಧಾನಿಗೆ ‘ಹೆಬ್ಬೆರಳು ಎತ್ತಿ’ ಸನ್ನೆ ಮಾಡುತ್ತಿರುವುದು ಕಂಡುಬಂದಿತು. ಬಳಿಕ ಮೆಲೋನಿ ಅವರೂ ಮೋದಿಯತ್ತ ತೋರು ಬೆರಳು ಸನ್ನೆ ಮಾಡಿ ಚಟಾಕಿ ಹಾರಿಸಿದರು.

ಇನ್ನು ಮೆಲೋನಿ ಟ್ವೀಟ್ ಮಾಡಿ, ‘ಇಟಲಿ ಮತ್ತು ಭಾರತ, ಉತ್ತಮ ಸ್ನೇಹದಿಂದ ಸಂಬಂಧ ಹೊಂದಿವೆ’ ಎಂದಿದ್ದಾರೆ. ಮೋದಿ ಕೂಡ ‘ಇಟಲಿಯೊಂದಿಗಿನ ಭಾರತದ ಸ್ನೇಹವು ಬಲಗೊಳ್ಳುತ್ತಲೇ ಇರುತ್ತದೆ, ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ’ ಎಂದು ಬರೆದಿದ್ದಾರೆ.ಮ್ಯಾಕ್ರಾನ್ ಜತೆಗೂ ಚಟಾಕಿ:

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ, ‘ಇತ್ತೀಚಿನ ದಿನಗಳಲ್ಲಿ ನೀವು ಟ್ವಿಟರ್‌ನಲ್ಲಿ ಜಗಳವಾಡುತ್ತಿದ್ದೀರಿ’ ಎಂದು ಹೇಳಿದರು. ಈ ಮೂಲಕ ಇರಾನ್‌ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ಜಗಳ ಆಡಿದ್ದನ್ನು ಉಲ್ಲೇಖಿಸಿದರು. ಇದಕ್ಕೆ ಮ್ಯಾಕ್ರಾನ್‌ ನಗುತ್ತಲೇ ಉತ್ತರಿಸಿದರು.ಇದೇ ವೇಳೆ, ಇತರ ಜಿ7 ನಾಯಕರ ಜತೆಗೂ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ