- ದಂಪತಿಯ ಪ್ರೀತಿ, ಅಂಗಡಿಯಾತನ ಔದಾರ್ಯಕ್ಕೆ ಜನ ಜೈಕಾರ
ನಿವೃತ್ತಿ ಶಿಂಧೆ-ಶಾಂತಾಬಾಯಿ ದಂಪತಿ ಆಷಾಢ ಏಕಾದಶಿಯ ನಿಮಿತ್ತ ಪಂಢರಪುರಕ್ಕೆ ಪಾದಯಾತ್ರೆ ಹೊರಟಿದ್ದರು. ಮಾರ್ಗಮಧ್ಯದಲ್ಲಿ ಅವರಿಬ್ಬರು ಆಭರಣದಂಗಡಿ ಪ್ರವೇಶಿಸಿದಾಗ ಅಲ್ಲಿದ್ದವರು, ದಾನ ಕೇಳಲು ಬಂದಿರಬಹುದು ಎಂದು ಭಾವಿಸಿದರಾದರು. ಬಳಿಕ ಅವರು ಬಂದ ಉದ್ದೇಶ ತಿಳಿದು ಸಿಬ್ಬಂದಿಯೆಲ್ಲಾ ಗದ್ಗದಿತರಾದರು. ಈ ಬಗ್ಗೆ ಮಾತನಾಡಿದ ಅಂಗಡಿಯ ಮಾಲೀಕ, ‘ಆ ವೃದ್ಧ ದಂಪತಿ ತಮ್ಮ ಬಳಿಯಿದ್ದ 1120 ರು. ನೀಡಿ, ಮಂಗಳಸೂತ್ರ ಖರೀದಿಸಲು ಬಂದಿರುವುದಾಗಿ ಹೇಳಿದರು. ಇದನ್ನು ಕಂಡು ನಾನು ಬೆರಗಾದೆ. ಬಳಿಕ ಅವರಿಗೆ ಮಾಂಗಲ್ಯಸರ ನೀಡಿ, ಆಶೀರ್ವಾದದ ರೂಪದಲ್ಲಿ 20 ರು. ಪಡೆದೆ. ಆ ದಂಪತಿಯ ಮೊದಲ ಮಗ ಸಾವನ್ನಪ್ಪಿದ್ದು, 2ನೇ ಮಗ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಕುಟಂಬ ಕಷ್ಟದಲ್ಲಿದೆ’ ಎಂದರು.ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, 2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ನೆಟ್ಟಿಗರು, ಆ ದಂಪತಿಯ ಪ್ರೀತಿ ಮತ್ತು ಅಂಗಡಿಯವರ ಉದಾರತೆಯನ್ನು ಕೊಂಡಾಡುತ್ತಿದ್ದಾರೆ.