ಶಾಪಿಂಗ್‌ ಚೀಲ ಹೊರಲೂ ಈಗ ಫ್ರೆಂಡ್‌ ಲಭ್ಯ!

KannadaprabhaNewsNetwork |  
Published : May 27, 2026, 02:00 AM IST
ಕ್ಯಾರಿಮೆನ್ | Kannada Prabha

ಸಾರಾಂಶ

ಶಾಪಿಂಗ್‌ ಮಾಡುವಾಗ ಕಂಡದ್ದೆಲ್ಲಾ ಬೇಕೆನಿಸುತ್ತದೆ. ಆದರೆ ಅಸಲಿ ತಲೆನೋವು ಶುರುವಾಗುವುದು ಅವುಗಳನ್ನು ತುಂಬಿದ ಚೀಲವನ್ನೆತ್ತಿಕೊಂಡು ತಿರುಗಬೇಕು ಎಂದು ನೆನಪಾದಾಗ. ರಸ್ತೆ ಬದಿ ಶಾಪಿಂಗ್‌ ವೇಳೆಯಂತೂ ಈ ಸಮಸ್ಯೆ ಇನ್ನೂ ಘೋರ. ಸಿಲ್ಲಿ ಅನ್ನಿಸಿದರೂ ಸೀರಿಯಸ್‌ ಆಗಿರುವ ಈ ಸಮಸ್ಯೆಗೆ ಪರಿಹಾರವಾಗಿ ಹುಟ್ಟಿಕೊಂಡಿರುವ ದೆಹಲಿ ಮೂಲದ ಸ್ಟಾರ್ಟ್‌ಅಪ್ ‘ಕ್ಯಾರಿಮೆನ್‌’, 149 ರು.ಗೆ ಚೀಲ ಹೊರುವವರನ್ನು ಒದಗಿಸುತ್ತಿದೆ!

ನೀವು ಖರೀದಿಸಿ, ನಾವು ಹೊರುತ್ತೇವೆ ಅಂದ ಸ್ಟಾರ್ಟ್‌ಅಪ್‌

ಚೀಲ ಎತ್ತಿಕೊಂಡು ಬೀದಿ-ಬೀದಿ ಸುತ್ತುತ್ತಾರೆ ಸಹಾಯಕರುನವದೆಹಲಿ: ಶಾಪಿಂಗ್‌ ಮಾಡುವಾಗ ಕಂಡದ್ದೆಲ್ಲಾ ಬೇಕೆನಿಸುತ್ತದೆ. ಆದರೆ ಅಸಲಿ ತಲೆನೋವು ಶುರುವಾಗುವುದು ಅವುಗಳನ್ನು ತುಂಬಿದ ಚೀಲವನ್ನೆತ್ತಿಕೊಂಡು ತಿರುಗಬೇಕು ಎಂದು ನೆನಪಾದಾಗ. ರಸ್ತೆ ಬದಿ ಶಾಪಿಂಗ್‌ ವೇಳೆಯಂತೂ ಈ ಸಮಸ್ಯೆ ಇನ್ನೂ ಘೋರ. ಸಿಲ್ಲಿ ಅನ್ನಿಸಿದರೂ ಸೀರಿಯಸ್‌ ಆಗಿರುವ ಈ ಸಮಸ್ಯೆಗೆ ಪರಿಹಾರವಾಗಿ ಹುಟ್ಟಿಕೊಂಡಿರುವ ದೆಹಲಿ ಮೂಲದ ಸ್ಟಾರ್ಟ್‌ಅಪ್ ‘ಕ್ಯಾರಿಮೆನ್‌’, 149 ರು.ಗೆ ಚೀಲ ಹೊರುವವರನ್ನು ಒದಗಿಸುತ್ತಿದೆ!

ಗಂಟೆಗೆ 149 ರು. ಪಾವತಿಸಿದರೆ, ಕ್ಯಾರಿಮೆನ್‌ ತರಬೇತಿ ಪಡೆದ ಸಹಾಯಕರನ್ನು ಕಳಿಸಿಕೊಡುತ್ತದೆ. ಇವರು ಚೀಲಗಳನ್ನು ಹೊರುವುದಷ್ಟೇ ಅಲ್ಲ, ನಿಮ್ಮೊಂದಿಗೆ ಬೀದಿ-ಬೀದಿ ಅಲಿಯುತ್ತಾರೆ. ಇವರು ಜತೆಯಲ್ಲಿದ್ದರೆ ರಸ್ತೆ ಬದಿ ಅಂಗಡಿಗಳಲ್ಲಿ ಚಾಟ್ಸ್‌ ತಿನ್ನಲು ಉದ್ದುದ್ದ ಸಾಲಲ್ಲಿ ನಿಲ್ಲುವ ಪ್ರಮೇಯವೂ ಬರದು. ಕಾರ್‌ ಅಥವಾ ಮೆಟ್ರೋ ಹತ್ತುವ ತನಕವೂ ಈ ಕ್ಯಾರಿಮೆನ್‌ಗಳು ಜತೆಗೆ ಬರುತ್ತಾರೆ. ಅಗತ್ಯವಿದ್ದಲ್ಲಿ ಮಕ್ಕಳನ್ನೆತ್ತಿಕೊಳ್ಳುವುದು ಅಥವಾ ಅವರ ಟ್ರಾಲಿ ತಳ್ಳಿಕೊಂಡು ಬರುವುದು, ಮೊಬೈಲ್‌ ಚಾರ್ಜ್‌ ಮಾಡುವುದು, ಕೊಡೆ ಹಿಡಿಯುವುದು, ಮಡಚಬಹುದಾದ ಆಸನಗಳನ್ನು ಹೊತ್ತು ಬರುವಂತಹ ಸೇವೆಗಳೂ ಲಭ್ಯವಿದ್ದು, ಇವುಗಳಿಗೆ ಹೆಚ್ಚುವರಿ ಶುಲ್ಕ ತಗುಲುತ್ತದೆ. ಇದು ಮಹಿಳೆಯರು ಮತ್ತು ವೃದ್ಧರಿಗೆ ಉಪಯುಕ್ತವಾಗಲಿದೆ.

ಈ ಬಗೆಗಿನ ಪೋಸ್ಟ್‌ಅನ್ನು ಎಕ್ಸ್‌ನಲ್ಲಿ ಕಂಡ ಜನ, ‘ಇನ್ನು ಮಾರ್ಕೆಟ್‌ಗೆ ಬಾ ಅಂತ ಅಮ್ಮ ತಲೆ ತಿನ್ನೋದಿಲ್ಲ’ ಎಂದರೆ, ಇನ್ನೂ ಕೆಲವರು, ‘ಶಾಪಿಂಗ್‌ ವೇಳೆ ಹೆಣ್ಮಕ್ಕಳು ಕೊಡುವ ಟಾರ್ಚರ್‌ ತಡೆಯಲೂ ಇವರಿಗೆ ತರಬೇತಿ ಕೊಡಬೇಕು’ ಎಂದು ಸಲಹೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಸಂಕಷ್ಟ ನಿವಾರಿಸಲು 3ಎಫ್‌ ಸೂತ್ರ
ತಮಿಳ್ನಾಡಲ್ಲಿ ಆಪರೇಷನ್‌ ವಿಷಲ್‌!