- ಇಂಡೋಪೆಸಿಫಿಕ್‌ನಲ್ಲಿ ಇಂಧನ ಭದ್ರತೆಗೆ ಆದ್ಯತೆ
ನವದೆಹಲಿ: ಭಾರತ, ಅಮೆರಿಕ ಸೇರಿ ನಾಲ್ಕು ರಾಷ್ಟ್ರಗಳನ್ನೊಳಗೊಂಡ ಕ್ವಾಡ್ ದೇಶಗಳ ಗುಂಪು ಅಪರೂಪದ ಖನಿಜಗಳು, ಇಂಧನ ಹಾಗೂ ಸಮುದ್ರ ಕಣ್ಗಾವಲು ಹೆಚ್ಚಳದ ಜತೆಗೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಸೇನಾ ಉಪಸ್ಥಿತಿಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂದರು ಮೂಲಸೌಲಭ್ಯ ಬಲವರ್ಧನೆ ಹಾಗೂ ಪ್ರಾದೇಶಿಕ ಭದ್ರತೆ ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಿವೆ.
ದಿಲ್ಲಿಯಲ್ಲಿ ಮಂಗಳವಾರ 4 ಕ್ವಾಡ್ ದೇಶಗಳ ವಿದೇಶಾಂಗ ಸಚಿವ ಸಭೆಯಲ್ಲಿ ಈ ಹೊಸ ಉಪಕ್ರಮಗಳನ್ನು ಘೋಷಿಸಲಾಯಿತು. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ, ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ತೋಶಿಮಿಟ್ಜು ಮೊಟೇಗಿ ನೀಡಿದ ಜಂಟಿ ಹೇಳಿಕೆಯಲ್ಲಿ, ನಾವು ಮುಕ್ತ-ಸ್ವತಂತ್ರ ಇಂಡೋ ಪೆಸಿಫಿಕ್‌ಗೆ ಬೆಂಬಲ ಪುನರುಚ್ಚರಿಸುತ್ತೇವೆ. ಇದು ಈ ಭಾಗದ ರಾಷ್ಟ್ರಗಳ ಸ್ವತಂತ್ರ ಹಾದಿ ನಿರ್ಧರಿಸುವ ಸಾಮರ್ಥ್ಯ ಬಲವರ್ಧನೆ ಹಾಗೂ ಪ್ರತಿರೋಧ ಬೆಳೆಸಲು ಅವಕಾಶ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಅನುಕೂಲಕರವಾದ ಯೋಜನೆ ಮುಂದುವರಿಸಲು, ಸಹಭಾಗಿತ್ವವೃದ್ಧಿಸಲು ನಾವು ಒಪ್ಪಿಗೆ ಸೂಚಿಸುತ್ತೇವೆ ಎಂದಿದ್ದಾರೆ.ಸಭೆಯಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕಿದೆ ಎಂದು ಆಗ್ರಹಿಸಿದ್ದು, ಹಡಗುಗಳಿಂದ ಟೋಲ್ ಸಂಗ್ರಹಿಸುವ ಇರಾನ್ ಕ್ರಮಕ್ಕೆ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಪೂರ್ವ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಸ್ಥಿತಿಗತಿ ಬಗ್ಗೆಯೂ ತೀವ್ರ ಕಳವಳ ವ್ಯಕ್ತವಾಯಿತು.==
ಅಪರೂಪದ ಖನಿಜ ಪೂರೈಕೆ ಬಗ್ಗೆ ಒಪ್ಪಂದ
ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ-ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ಕುರಿತ ಒಪ್ಪಂದಕ್ಕೆ ಸಹಿಹಾಕಿದ್ದಾರೆ.
--
1 ಸಮುದ್ರ ಕಣ್ಗಾವಲು: ಇಂಡೋ-ಪೆಸಿಫಿಕ್ ಸಮುದ್ರದಲ್ಲಿ ಕ್ವಾಡ್ ದೇಶಗಳ ನಡುವೆ ರಿಯಲ್ ಟೈಮ್ ಮಾಹಿತಿ ವಿನಿಮಯ.