-ಇಸ್ರೇಲ್ ಜತೆ ಉತ್ತಮ ಸಂಬಂಧ ಸ್ಥಾಪಿಸುವ ಪ್ರಸ್ತಾಪ
-ನಮ್ಮ ತತ್ವಕ್ಕೆ ವಿರುದ್ಧವಾದ ಒಪ್ಪಂದ ಸೇರಲ್ಲ: ಖ್ವಾಜಾ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಅಬ್ರಹಾಂ ಒಪ್ಪಂದಕ್ಕೆ ಸೇರುವಂತೆ ಪಾಕಿಸ್ತಾನ ಸೇರಿದಂತೆ ಹಲವು ಅರಬ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸಿದೆ. ಪಾಕ್‌ನ ಈ ನಡೆಯಿಂದ ಟ್ರಂಪ್‌ಗೆ ಭಾರೀ ಮುಖಭಂಗವಾಗಿದೆ.ಪಾಕಿಸ್ತಾನ, ಸೌದಿ ಅರೇಬಿಯಾ, ಕತಾರ್, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್ ದೇಶಗಳಿಗೆ ಅಬ್ರಹಾಂ ಒಪ್ಪಂದಕ್ಕೆ ಸೇರುವಂತೆ ಟ್ರಂಪ್ ಒತ್ತಾಯಿಸಿದ್ದರು. ‘ಎಲ್ಲಾ ದೇಶಗಳು ತಕ್ಷಣವೇ ಅಬ್ರಹಾಂ ಒಪ್ಪಂದಗಳಿಗೆ ಸಹಿ ಹಾಕಬೇಕೆಂದು ನಾನು ಕಡ್ಡಾಯವಾಗಿ ವಿನಂತಿಸುತ್ತಿದ್ದೇನೆ. ಇರಾನ್ ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರೆ, ಈ ದೇಶಗಳು ಸಹ ಈ ಅಸಾಮಾನ್ಯ ವಿಶ್ವ ಒಕ್ಕೂಟದ ಭಾಗವಾಗುವುದು ಗೌರವವಾಗಿದೆ’ ಎಂದು ಟ್ರುತ್‌ನಲ್ಲಿ ಆಗ್ರಹಿಸಿದ್ದರು.
==
2020ರಲ್ಲಿ ಸ್ವತಃ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜೊತೆ ಅರಬ್ ದೇಶಗಳ ಸಂಬಂಧ ಸುಧಾರಣೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಪರಸ್ಪರ ದ್ವೇಷ ತೊರೆದು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧ ಪುನಸ್ಥಾಪನೆಯ ಉದ್ದೇಶ ಇದಕ್ಕಿತ್ತು. ಮೊದಲ ಹಂತದಲ್ಲಿ ಇದಕ್ಕೆ ಯುಎಇ, ಬಹ್ರೈನ್, ಮೊರಾಕ್ಕೊ, ಸುಡಾನ್ ಸಹಿ ಹಾಕಿದ್ದವು. ಇದಕ್ಕೆ ಉಳಿದ ದೇಶಗಳು ಕೂಡಾ ಸಹಿ ಹಾಕಬೇಕು ಎಂಬುದು ಟ್ರಂಪ್ ಒತ್ತಾಯ.
ಅಬ್ರಹಾಂ ಹೆಸರಿನ ಹಿನ್ನೆಲೆ?
==
1. ಪ್ಯಾಲೆಸ್ತೀನ್‌ಗೆ ಬೆಂಬಲ:
2. ಧಾರ್ಮಿಕ ನಿಲುವು: ಪಾಕಿಸ್ತಾನ ಮುಸ್ಲಿಂ ರಾಷ್ಟ್ರಗಳ ಬಾಸ್ ಆಗಲು ಯತ್ನಿಸುತ್ತಿದೆ. ಅದರ ಧಾರ್ಮಿಕ ಮತ್ತು ಸೈದ್ಧಾಂತಿಕ ನಿಲುವುಗಳಿಗೆ ಇಸ್ರೇಲ್ ವಿರುದ್ಧವಾಗಿದೆ.
3. ಆಂತರಿಕ ರಾಜಕೀಯ: ಇಸ್ರೇಲ್‌ನೊಂದಿಗೆ ಸಂಬಂಧ ಬೆಳೆಸಿದರೆ ದೇಶದಲ್ಲಿ ದೊಡ್ಡ ಪ್ರತಿಭಟನೆಗಳು ಮತ್ತು ಧಾರ್ಮಿಕ ಸಂಘಟನೆಗಳ ವಿರೋಧ ಎದುರಾಗುವ ಸಾಧ್ಯತೆ ಇದೆ.4. ಪಾಸ್‌ಪೋರ್ಟ್ ನಿಯಮ: ಪಾಕಿಸ್ತಾನ ಪಾಸ್‌ಪೋರ್ಟ್‌ನಲ್ಲಿ ಸ್ಪಷ್ಟವಾಗಿ ‘ಇಸ್ರೇಲ್ ಪ್ರಯಾಣಕ್ಕೆ ಮಾನ್ಯವಲ್ಲ’ ಎಂದು ಬರೆಯಲಾಗಿದೆ. ಇದು ಅದರ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತದೆ.