ಆಂಧ್ರದ ಕಾಂಗ್ರೆಸ್ ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಅವರ ಪುತ್ರಿಯ ವಿವಾಹವನ್ನು ಬೆಂಗಳೂರಿನ ಯಲಹಂಕದಲ್ಲಿರುವ ಪ್ಯಾಲೇಸ್ನ ಬದಲು ಬೇರೆಡೆ ನಡೆಸಲು ನಿರ್ಧರಿಸಲಾಗಿದೆ. ಇಬ್ಬರ ಹೆಸರಲ್ಲೂ ಇರುವ ಈ ಮನೆಯಲ್ಲಿ ಮದುವೆಗೆ ಜಗನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಮರಾವತಿ: ಆಂಧ್ರದ ಕಾಂಗ್ರೆಸ್ ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಅವರ ಪುತ್ರಿಯ ವಿವಾಹವನ್ನು ಬೆಂಗಳೂರಿನ ಯಲಹಂಕದಲ್ಲಿರುವ ಪ್ಯಾಲೇಸ್ನ ಬದಲು ಬೇರೆಡೆ ನಡೆಸಲು ನಿರ್ಧರಿಸಲಾಗಿದೆ. ಇಬ್ಬರ ಹೆಸರಲ್ಲೂ ಇರುವ ಈ ಮನೆಯಲ್ಲಿ ಮದುವೆಗೆ ಜಗನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭದ್ರತೆಯ ಕಾರಣ ನೀಡಿ ಯಲಹಂಕ ಪ್ಯಾಲೇಸ್ನಲ್ಲಿ ಸೋದರಿಯ ಪುತ್ರಿ ಅಂಜಲಿ ಮದುವೆಗೆ ಅನುಮತಿ ನೀಡಲು ಜಗನ್ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಪುತ್ರಿ ಮತ್ತು ರಘುರಾಮ್ ರೆಡ್ಡಿ ಅವರ ವಿವಾಹವನ್ನು ವಿವಾದಗಳಿಂದ ದೂರವಿಡುವ ಉದ್ದೇಶದಿಂದ ಬೇರೆ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಶರ್ಮಿಳಾ ರೆಡ್ಡಿ ತಿಳಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಯಾವ ಪ್ರದೇಶ, ಯಾವ ಕಲ್ಯಾಣ ಮಂಟಪ ಎಂದು ಅವರು ಹೇಳಿಲ್ಲ.
ಯಲಹಂಕದ ಪ್ಯಾಲೇಸ್ ನಮ್ಮ ತಂದೆ ವಾಸಿಸುತ್ತಿದ್ದ ಮನೆ
ಯಲಹಂಕದ ಪ್ಯಾಲೇಸ್ ನಮ್ಮ ತಂದೆ ವಾಸಿಸುತ್ತಿದ್ದ ಮನೆ. ನಮ್ಮ ಮಕ್ಕಳೂ ಅಲ್ಲೇ ಬೆಳೆದಿದ್ದು. ಹೀಗಾಗಿ ಅಲ್ಲೇ ಸಂಪ್ರದಾಯದಂತೆ ಮದುವೆ ಆಗಬೇಕು ಎಂಬುದು ಮಗಳ ಆಸೆಯಾಗಿತ್ತು. ಆದರೆ ಅದಕ್ಕೆ ಅಡ್ಡಿ ಮಾಡಲಾಗಿದೆ. ಹೀಗಾಗಿ ತೊಂದರೆ ಇಲ್ಲದೆ ಮದುವೆ ನಡೆಯಲಿ ಎನ್ನುವ ಕಾರಣಕ್ಕೆ ಬೇರೆ ಪ್ರದೇಶದಲ್ಲಿ ಮದುವೆ ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಯಲಹಂಕದ ಪ್ಯಾಲೇಸ್ ಶೇ.100ರಷ್ಟು ತಮಗೇ ಸೇರಿದ್ದು ಎಂದು ಅವರು ಪ್ರತಿಪಾದಿಸಿದ್ದಾರೆ.
ಯಲಹಂಕದ ಪ್ಯಾಲೇಸ್ನಲ್ಲಿ ತಮ್ಮ ಪುತ್ರಿಯ ವಿವಾಹಕ್ಕೆ ಅವಕಾಶ ನಿರಾಕರಿಸಿರುವ ಜಗನ್ಮೋಹನ ರೆಡ್ಡಿ ಅವರ ನಡೆಗೆ ಶರ್ಮಿಳಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವತಃ ಅಂಜಲಿ ರೆಡ್ಡಿ ಅವರು ಜಗನ್ಮೋಹನ ರೆಡ್ಡಿ ಅವರನ್ನು ಕಂಸ ಮಾಮ ಎಂದು ಕರೆದಿದ್ದರು.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಬೆಂಗಳೂರಿನ ಯಲಹಂಕ ಪ್ಯಾಲೇಸ್ನಲ್ಲಿ ವಿವಾಹ ಆಯೋಜನೆ ಕುರಿತು ಆಂಧ್ರದ ಮಾಜಿ ಸಿಎಂ ಜಗನ್ ಹಾಗೂ ಅವರ ಸೋದರಿ ಶರ್ಮಿಳಾ ನಡುವೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ‘ಕನ್ನಡಪ್ರಭ’ ಅ.25ರಂದೇ ವರದಿ ಮಾಡಿತ್ತು.

