ಮಹಿಳಾ ವೈದ್ಯೆ ಮೇಲೆ ರೇಪ್‌, ಹತ್ಯೆ ನಡೆದ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ಬಂಧನ

KannadaprabhaNewsNetwork |  
Published : Sep 03, 2024, 01:46 AM ISTUpdated : Sep 03, 2024, 04:25 AM IST
ಸಂದೀಪ್‌ ಘೋಷ್‌ | Kannada Prabha

ಸಾರಾಂಶ

ಕೋಲ್ಕತಾದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿದೆ. ಈ ಪ್ರಕರಣದಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವ ಆರೋಪದ ಮೇಲೆ ಈ ಬಂಧನವಾಗಿದೆ.

ಕೋಲ್ಕತಾ: ಮಹಿಳಾ ವೈದ್ಯೆ ಮೇಲೆ ರೇಪ್‌, ಹತ್ಯೆ ನಡೆದ ಇಲ್ಲಿ ಆರ್.ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ರನ್ನು ಸಿಬಿಐ ಮಂಗಳವಾರ ಸಿಬಿಐ ಬಂಧಿಸಿದೆ. ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಪ್ರಕರಣದಲ್ಲಿ ಈ ಬಂಧನ ಮಾಡಲಾಗಿದೆ.

ವೈದ್ಯೆ ರೇಪ್‌ ಕೇಸಿನ ತನಿಖೆಯನ್ನು ಕೈಗೆತ್ತಿಕೊಂಡ ದಿನದಿಂದಲೂ ಸಿಬಿಐ ಘೋಷ್‌ರನ್ನು ವಿಚಾರಣೆ ನಡೆಸುತ್ತಿದೆ. ಸತತ 15 ದಿನವಾದ ಸೋಮವಾರವೂ ವಿಚಾರಣೆ ನಡೆಸಿ ಬಳಿಕ ಕೋಲ್ಕತಾದ ನಿಜಾಮ್ ಪ್ಯಾಲೆಸ್‌ನಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಬಂಧಿಸಿದೆ. ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಹಿಂದೆ ಉಪ ಅಧೀಕ್ಷರಾಗಿದ್ದ ಡಾ. ಅಖ್ತರ್‌ ಅಲಿ ಎನ್ನುವವರು ಸಂದೀಪ್ ಘೋಷ್ ವಿರುದ್ಧ ಹಣಕಾಸಿನ ಅವ್ಯವಹಾರ ಆರೋಪ ಮಾಡಿದ್ದರು.

ಅತ್ಯಾಚಾರ ವಿರೋಧಿ ಪ್ರತಿಭಟನೆ ವೇಳೆಯೇ ಲೈಂಗಿಕ ಕಿರುಕುಳ!

ಕೋಲ್ಕತಾ: ಆರ್‌ಜಿ ಕರ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ರೇಪ್‌ ಮತ್ತು ಕೊಲೆ ಪ್ರಕರಣ ಸಂಬಂಧ ನಡೆಸುತ್ತಿದ್ದ ಪ್ರತಿಭಟನೆ ವೇಳೆಯೇ ವೈದ್ಯಕೀಯ ಸಿಬ್ಬಂದಿಗೆ ಇಬ್ಬರು ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ನಡೆದಿದೆ.ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ, ಪ್ರತಿಭಟನಾಕಾರರಿಗೆ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸುವ ಮೂಲಕ ಕಿರುಕುಳ ನೀಡಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. ಆದರೆ ಆತ ಮಾನಸಿಕ ಅಸ್ವಸ್ಥ ಎನ್ನುವ ಕಾರಣ ನೀಡಿ ಕೆಲ ಹೊತ್ತಿನಲ್ಲೇ ಪೊಲೀಸರು ಆತನನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಇದೇ ರೀತಿ ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಕುಡಿದ ಅಮಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ರೇಪಿಸ್ಟ್‌ಗಳಿಗೆ ಗಲ್ಲು: ಇಂದು ಬಂಗಾಳ ಅಸೆಂಬ್ಲಿಯಲ್ಲಿ ಮಸೂದೆ

ಕೋಲ್ಕತಾ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಹೊಸ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯ 2 ದಿನಗಳ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಮಂಡಿಸಲಾಗುತ್ತದೆ. ಮಸೂದೆಗೆ ‘ಅಪರಾಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ’ ಎಂದು ಹೆಸರಿಸಲಾಗಿದೆಕಳೆದ ತಿಂಗಳು ಕೋಲ್ಕತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಡೆದಿತ್ತು. ಇದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆದಿವೆ. ಹೀಗಾಗಿ ಅತ್ಯಾಚಾರಿಗಳಿಗೆ ಗಲ್ಲು ವಿಧಿಸುವ ಮಸೂದೆ ಮಂಡನೆಗೆ ಮಮತಾ ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಮಂಗಳವಾರ ಹಾಗೂ ಬುಧೌವಾರ 2 ದಿನಗಳ ವಿಶೇಷ ಅಧಿವೇಶನ ಕರೆದಿದೆ.ಈಗಾಗಲೇ ಅತ್ಯಾಚಾರಿಗಳಿಗೆ ಗಲ್ಲು ವಿಧಿಸುವ ಕಾಯ್ದೆ ಜಾರಿಯಲ್ಲಿದೆ. ಆದರೆ ಹೊಸ ಕಾಯ್ದೆಗೂ ಪ್ರಸ್ತುತ ಇರುವ ಕಾಯ್ದೆಗೂ ಏನು ವ್ಯತ್ಯಾಸ ಎಂಬುದು ತಿಳಿದುಬಂದಿಲ್ಲ.

ಇಂದಿನಿಂದ 4 ದಿನ ಮೋದಿ ಬ್ರೂನೈ, ಸಿಂಗಾಪುರ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ ಬ್ರೂನೈ ಹಾಗೂ ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಹಾಗೂ ಬುಧವಾರ ಮೋದಿ ಬ್ರೂನೈನಲ್ಲಿರಲಿದ್ದಾರೆ. ಬುಧವಾರ ಸಂಜೆ ಹಾಗೂ ಗುರುವಾರ ಸಿಂಗಾಪುರದಲ್ಲಿ ಇರಲಿದ್ದಾರೆ. ಭಾರತ ಮತ್ತು ಬ್ರೂನೈ ನಡುವಿನ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಿ 40 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಮೋದಿ ಬ್ರೂನೈಗೆ ಭೇಟಿ ನೀಡಿಲಿದ್ದಾರೆ. ಇದು ಬ್ರೂನೈಗೆ ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿ. ಬಳಿಕ ಅವರು ಸಿಂಗಾಪುರದ ಪ್ರಧಾನಿ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ.

ಕಾನ್‌ಸ್ಟೇಬಲ್‌ ನೇಮಕಾತಿ: ದೈಹಿಕ ಪರೀಕ್ಷೆ ವೇಳೆ 11ಮಂದಿ ಆಕಾಂಕ್ಷಿಗಳ ಸಾವುರಾಂಚಿ: ಜಾರ್ಖಂಡ್‌ನಲ್ಲಿ ಅಬಕಾರಿ ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ನಡೆಯುತ್ತಿರುವ ದೈಹಿಕ ಪರೀಕ್ಷೆಯಲ್ಲಿ 11 ದಿನದಲ್ಲಿ 1 ಮಂದಿ ಕಾನ್‌ಸ್ಟೇಬಲ್‌ ಆಕಾಂಕ್ಷಿಗಳು ಮೃತಪಟ್ಟಿದ್ದಾರೆ. ಇನ್ನು ಕೆಲವರು ಪರೀಕ್ಷೆ ಬಳಿಕ ಬಳಲಿಕೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದ ಬಳುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಘಟನೆಗೆ ಮುಖ್ಯಕಾರಣ ದೈಹಿಕ ಪರೀಕ್ಷೆಗೆ ತಯಾರಿ ನಡೆಸದಿರುವುದು ಎಂದು ವೈದ್ಯರು ತಿಳಿಸಿದ್ದು, ಕೆಲವು ಅಭ್ಯರ್ಥಿಗಳು ಈ ಪರೀಕ್ಷೆ ವೇಳೆ ಸ್ಟೀರಾಯ್ಡ್‌ಅನ್ನು ತೆಗೆದುಕೊಂಡಿದ್ದರಿಂದ ಅದು ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಈ ಕುರಿತು ಅಸಹಜ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ಸಾವಿಗೆ ನಿಖರ ಕಾರಣ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. 583 ಅಬಕಾರಿ ಕಾನ್‌ಸ್ಟೇಬಲ್‌ ಪೋಸ್ಟ್‌ಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!