50% ಅಗ್ನಿವೀರರಿಗೆ 4 ವರ್ಷ ಮುಗಿದ ಬಳಿಕವೂ ಕೆಲಸ ? ಕೇಂದ್ರ ಸರ್ಕಾರ ಗಂಭೀರ ಚಿಂತನೆ

KannadaprabhaNewsNetwork |  
Published : Sep 06, 2024, 01:04 AM ISTUpdated : Sep 06, 2024, 04:29 AM IST
ಅಗ್ನಿಪಥ್‌ ಯೋಜನೆ | Kannada Prabha

ಸಾರಾಂಶ

4 ವರ್ಷಗಳ ನಂತರ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಳ್ಳುವ ಬದಲು ಶೇ.50ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಸೇನಾಪಡೆಗಳು ಈ ಬಗ್ಗೆ ಶಿಫಾರಸು ಮಾಡಿದ್ದು, ವೇತನ ಮತ್ತು ಭತ್ಯೆಯಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ.

ನವದೆಹಲಿ: 4 ವರ್ಷಗಳಷ್ಟು ಅಲ್ಪಾವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆಯಲ್ಲಿ ಭಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ. 4 ವರ್ಷಗಳ ಸೇವಾವಧಿ ಮುಗಿದ ಬಳಿಕ ಈಗ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಮುಂದೆ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಸಂಭವವಿದೆ. ಜತೆಗೆ ವೇತನ, ಭತ್ಯೆಯಲ್ಲೂ ಬದಲಾವಣೆ ತರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.

ಸೇನಾಪಡೆಗಳು ತಮ್ಮ ವಿವಿಧ ಘಟಕಗಳಿಂದ ಅಗ್ನಿಪಥ ಯೋಜನೆ ಕುರಿತು ಅಭಿಪ್ರಾಯ ಸ್ವೀಕರಿಸಿದೆ. ಜತೆಗೆ ಆಂತರಿಕ ಸಮೀಕ್ಷೆ ನಡೆಸಿದೆ. ಆ ಪ್ರಕಾರ, ಶೇ.25ರಷ್ಟು ಅಗ್ನಿವೀರರನ್ನು ಮಾತ್ರವೇ ಸೇವೆಯಲ್ಲಿ ಉಳಿಸಿಕೊಳ್ಳುವುದು ತೀರಾ ಕಡಿಮೆಯಾಗುತ್ತದೆ. ಇದರಿಂದ ನಿರೀಕ್ಷಿತ ಯುದ್ಧ ಸನ್ನದ್ಧತೆಯನ್ನು ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಳ ಮಾಡಬೇಕು ಎಂದು ಸೇನಾಪಡೆಗಳು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಿವೆ ಎನ್ನಲಾಗಿದೆ. ಇದು ಜಾರಿಗೆ ಬರಲು ಒಂದಷ್ಟು ಸಮಯ ಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ.

ವಿಪಕ್ಷದ ವಿರೋಧಕ್ಕೆ ಮಣಿದ ಸರ್ಕಾರ?:

ಸೇನಾಪಡೆಗಳಿಗೆ ಅಲ್ಪಾವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳುವ ಈ ಯೋಜನೆ ಬಗ್ಗೆ ಪ್ರತಿಪಕ್ಷಗಳು ನಿರಂತರ ಟೀಕಾ ಪ್ರಹಾರ ನಡೆಸುತ್ತಿವೆ. ಈ ಯೋಜನೆಯಿಂದಾಗಿ, ಹೆಚ್ಚು ಯುವಕರು ಸೇನೆಗೆ ಸೇರುವ ದೇಶದ ವಿವಿಧ ಭಾಗಗಳಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಹಿನ್ನಡೆ ಆಗಿದೆ ಎಂಬ ವಿಶ್ಲೇಷಣೆಗಳಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಜನೆಯ ಪರಿಷ್ಕರಣೆಗೆ ಮುಂದಾಗಿರುವುದು ಗಮನಾರ್ಹ.

ಕಾಂಗ್ರೆಸ್‌ ಆಕ್ಷೇಪ:

ಈ ನಡುವೆ, ಯೋಜನೆಯಲ್ಲಿ ಬದಲಾವಣೆಯನ್ನು ನಾವು ಒಪಲ್ಲ. ಇಡೀ ಅಗ್ನಿವೀರ ಯೋಜನೆಯನ್ನೇ ರದ್ದು ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚೀನಿಯರಿಗೆ ಅಕ್ರಮ ವೀಸಾಕೇಸಲ್ಲಿ ಚಿದು ಪುತ್ರಗೆ ಸಂಕಷ್ಟ
ಈಗ ಯೂನಸ್‌ ಪದಚ್ಯುತಿಗೆ ಹದಿ ಬೆಂಬಲಿಗರ ಎಚ್ಚರಿಕೆ