ರೈತರಿಗೆ ಸಿಹಿ ಸುದ್ದಿ: ಕಬ್ಬು ಖರೀದಿ ದರ ಕ್ವಿಂಟಲ್‌ಗೆ 340ಕ್ಕೇರಿಕೆ

KannadaprabhaNewsNetwork | Updated : Feb 22 2024, 01:11 PM IST

ಸಾರಾಂಶ

ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿಗೆ ನೀಡಿದ್ದು, ಕಬ್ಬು ಖರೀದಿ ದರವನ್ನು ಕ್ವಿಂಟಾಲ್‌ಗೆ 315 ರು. ಯಿಂದ 340 ರು.ಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ನವದೆಹಲಿ: ದೆಹಲಿ ಚಲೋ ಹೋರಾಟ ತೀವ್ರವಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಕಬ್ಬು ಖರೀದಿ ಹಂಗಾಮಿಗೆ ಸಂಬಂಧಿಸಿದಂತೆ ಖರೀದಿ ದರ ಹೆಚ್ಚಳ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಹೀಗಾಗಿ 2024ರ ಅ.1ರಿಂದ 2025ರ ಸೆ.30ರ ಅವಧಿಗೆ ಕಬ್ಬು ಖರೀದಿ ದರವನ್ನು ಕ್ವಿಂಟಲ್‌ಗೆ 315 ರು.ನಿಂದ 340 ರು.ಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಕ್ವಿಂಟಲ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. 

ರೈತರಿಗೆ ನ್ಯಾಯಸಮ್ಮತ ಮತ್ತು ಸಮಂಜಸ ಬೆಲೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

Share this article