ಸಾರಾಂಶ
ಪ್ರಧಾನಿ ಮೋದಿ ಕುರಿತ ತಮ್ಮ ಮೆಚ್ಚುಗೆಯು ನುಡಿಗಳನ್ನು ಮುಂದುವರೆಸಿರುವ ಡೊನಾಲ್ಡ್ ಟ್ರಂಪ್, ‘ನರೇಂದ್ರ ಮೋದಿ ಸುಂದರ, ಕಠಿಣ ವ್ಯಕ್ತಿತ್ವದ ಯಶಸ್ವಿ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಜೊತೆಗೆ ಭಾರತ ಮತ್ತು ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು 56ನೇ ಸಲ ವಾದ ಮಂಡಿಸಿದ್ದಾರೆ.
ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಕುರಿತ ತಮ್ಮ ಮೆಚ್ಚುಗೆಯು ನುಡಿಗಳನ್ನು ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನರೇಂದ್ರ ಮೋದಿ ಸುಂದರ, ಕಠಿಣ ವ್ಯಕ್ತಿತ್ವದ ಯಶಸ್ವಿ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಜೊತೆಗೆ ಭಾರತ ಮತ್ತು ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು 56ನೇ ಸಲ ವಾದ ಮಂಡಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಎಕನಾಮಿಕ್ ಕೋಆಪರೇಷನ್ ಶೃಂಗ ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಮೋದಿ ಅತ್ಯಂತ ಸುಂದರ ವ್ಯಕ್ತಿ. ಅವರನ್ನು ನೋಡಿದರೆ ಅವರಂಥ ಅಪ್ಪ ನನಗೂ ಇರಬೇಕು ಎಂದೆನ್ನಿಸದೇ ಇರದು. ಅವರೊಬ್ಬ ಯಶಸ್ವಿ, ಅತ್ಯಂತ ಕಠಿಣ ವ್ಯಕ್ತಿ. ಅವರೊಂದಿಗೆ ನಾನು ಅತ್ಯುತ್ತಮ ಸಂಬಂಧ’ ಎಂದು ಮೆಚ್ಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದೆ
ಜೊತೆಗೆ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದೆ. ಅದಕ್ಕೆ ಅವರು (ಮೋದಿ) ಇಲ್ಲ, ಇಲ್ಲ. ನಾವು ಒಪ್ಪಂದ ಮಾಡಿಕೊಳ್ಳಲೇಬೇಕು ಎಂದು ಪ್ರತಿಪಾದಿಸಿದರು. ಆಗ ನಾನು, ಇಲ್ಲ, ವ್ಯಾಪಾರ ಒಪ್ಪಂದ ಸಾಧ್ಯವಿಲ್ಲ. ಏಕೆಂದರೆ ನೀವು ಪಾಕ್‌ನೊಂದಿಗೆ ಯುದ್ಧ ಆರಂಭಿಸಿದ್ದೀರಿ’ ಎಂದು ಹೇಳಿದೆ. ಬಳಿಕ ಪಾಕ್ ನಾಯಕರಿಗೂ ಕರೆ ಮಾಡಿ ಇದೇ ಮಾತುಗಳನ್ನು ಸ್ಪಷ್ಟಪಡಿಸಿದೆ. ಅದಕ್ಕವರು, ಇಲ್ಲ ನಮಗೆ ಯುದ್ಧ ಮಾಡಲು ಬಿಡಿ ಎಂದರು. ಅದಾದ ಎರಡು ದಿನಗಳ ಬಳಿಕ ಎರಡೂ ದೇಶಗಳ ನಾಯಕರು ನನಗೆ ಕರೆ ಮಾಡಿ, ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿ ಯುದ್ಧ ಸ್ಥಗಿತಗೊಳಿಸಿದರು. ಇದು ಅದ್ಭುತವಲ್ಲವೇ? ಇದು ಬೈಡನ್ ಬಳಿ ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.
7 ಹೊಚ್ಚ ಹೊಸ ವಿಮಾನಗಳನ್ನು ಹೊಡೆದುರುಳಿಸಲಾಯಿತು
ಜೊತೆಗೆ ಟೋಕಿಯೋದಲ್ಲಿ ಉದ್ಯಮಿಗಳೊಂದಿಗೆ ಔತಣ ಕೂಟದ ವೇಳೆಯೂ ಇದೇ ಬಗ್ಗೆ ಪ್ರಸ್ತಾಪಿಸಿ ಟ್ರಂಪ್, ಆಪರೇಷನ್ ಸಿಂದೂರದ ವೇಳೆ 7 ಹೊಚ್ಚ ಹೊಸ ವಿಮಾನಗಳನ್ನು ಹೊಡೆದುರುಳಿಸಲಾಯಿತು.
ವಿಚಿತ್ರವೆಂದರೆ ಇಂಥದ್ದೊಂದು ಹೇಳಿಕೆಗೂ ಮುನ್ನ ಇದೇ ವಿಷಯದ ಬಗ್ಗೆ ಮಾತನಾಡಿದ್ದ ಟ್ರಂಪ್, ಕೇವಲ 24 ಗಂಟೆಯಲ್ಲಿ ನಾನು ಯುದ್ಧ ನಿಲ್ಲಿಸಿದ್ದೆ ಎಂದಿದ್ದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))