ಸರ್ವಾಧಿಕಾರಿ ಟ್ರಂಪ್‌ ವಿರುದ್ಧ ಮತ್ತೆ ನೋ ಕಿಂಗ್ಸ್ ಪ್ರತಿಭಟನೆ

| N/A | Published : Oct 20 2025, 01:02 AM IST / Updated: Oct 20 2025, 05:10 AM IST

ಸಾರಾಂಶ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಲ್ಲಿ ಮತ್ತೆ ‘ನೋ ಕಿಂಗ್ಸ್‌’ (ಯಾರೂ ರಾಜನಲ್ಲ) ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಶನಿವಾರ ದೇಶಾದ್ಯಂತ ಸುಮಾರು 70 ಲಕ್ಷ ಜನ 2,500 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

  ವಾಷಿಂಗ್ಟನ್ :  ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಲ್ಲಿ ಮತ್ತೆ ‘ನೋ ಕಿಂಗ್ಸ್‌’ (ಯಾರೂ ರಾಜನಲ್ಲ) ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಶನಿವಾರ ದೇಶಾದ್ಯಂತ ಸುಮಾರು 70 ಲಕ್ಷ ಜನ 2,500 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಟ್ರಂಪ್‌ ಅವರ ವಲಸೆ ನೀತಿ, ಮಾಧ್ಯಮಗಳ ಮೇಲಿನ ನಿಯಂತ್ರಣ, ರಾಜಕೀಯ ವಿರೋಧಿಗಳ ಮೇಲಿನ ಕಠಿಣ ಕ್ರಮಗಳನ್ನು ವಿರೋಧಿಸಿ ಇದು 3ನೇ ಬಾರಿ ಜನ ಬೀದಿಗಿಳಿದಿದ್ದಾರೆ.

ವಾಷಿಂಗ್ಟನ್‌, ಬೋಸ್ಟನ್‌, ಅಟ್ಲಾಂಟಾ, ಶಿಕಾಗೊ, ಲಾಸ್‌ ಏಂಜಲೀಸ್‌ ಮೊದಲಾದ ಪ್ರಮುಖ ನಗರಗಳು ಸೇರಿದಂತೆ 2,500 ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ‘ನೋ ಕಿಂಗ್’, ‘ಪ್ರತಿಭಟಿಸುವುದಕ್ಕಿಂತ ಹೆಚ್ಚಿನ ದೇಶಭಕ್ತಿ ಮತ್ತೊಂದಿಲ್ಲ’, ‘ಫ್ಯಾಸಿಸಂ ಅನ್ನು ವಿರೋಧಿಸಿ’ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಬೃಹತ್‌ ಸಂಖ್ಯೆಯ ಜನ ಪ್ರತಿಭಟನೆಯಲ್ಲಿ ಭಾಗಿಯಾದರು.

ಕ್ಲೋನ್ ವೇಷ ಧರಿಸಿ ಟ್ರಂಪ್‌ ತಿರುಗೇಟು!ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸುವ ಮೂಲಕ ಟ್ರಂಪ್‌ ತೆರೆ ಎಳೆದಿದ್ದಾರೆ. ‘ಅವರು ನನ್ನನ್ನು ರಾಜ ಎನ್ನುತ್ತಿದ್ದಾರೆ. ಆದರೆ ನಾನು ರಾಜನಲ್ಲ’ ಎಂದಿದ್ದು, ಕ್ಲೋನ್ ವೇಷ ಧರಿಸಿ ಪ್ರತಿಭಟನಾಕಾರರನ್ನು ಟೀಕಿಸುವ ಹಲವು ಎಐ ರಚಿತ ವಿಡಿಯೋಗಳನ್ನು ಟ್ರುಥ್‌ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ.

Read more Articles on