ಸಾರಾಂಶ
ಚೀನಾ ಜತೆಗಿನ ಆಮದು ಸುಂಕ ಕದನದ ನಡುವೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕದನ ವಿರಾಮದ ಸುಳಿವು ನೀಡಿದ್ದು, ಒಳ್ಳೆಯ ಡೀಲ್ ಕುದುರುವ ವಿಶ್ವಾಸ ಇದೆ ಎಂದು ಗುರುವಾರ ಹೇಳಿದ್ದಾರೆ.
ವಾಷಿಂಗ್ಟನ್: ಚೀನಾ ಜತೆಗಿನ ಆಮದು ಸುಂಕ ಕದನದ ನಡುವೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕದನ ವಿರಾಮದ ಸುಳಿವು ನೀಡಿದ್ದು, ಒಳ್ಳೆಯ ಡೀಲ್ ಕುದುರುವ ವಿಶ್ವಾಸ ಇದೆ ಎಂದು ಗುರುವಾರ ಹೇಳಿದ್ದಾರೆ.
ಟ್ರಂಪ್ ಬುಧವಾರ ಚೀನಾ ಮೇಲಿನ ತೆರಿಗೆ ಸುಂಕವನ್ನು ಶೇ.245ಕ್ಕೆ ಹೆಚ್ಚಿಸಿದ್ದರು. ಇದರ ಬೆನ್ನಲ್ಲೇ ಈ ಸಂಘರ್ಷ ತಪ್ಪಿಸಲು ಅಮೆರಿಕದ ಜತೆ ಚೀನಾ ಸರ್ಕಾರ ಅಧಿಕಾರಿ ಮಟ್ಟದ ಮಾತುಕತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.