11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿ : ಇಂದು ಬಿಎಫ್‌ಸಿ vs ಬಗಾನ್‌ ಪ್ರಶಸ್ತಿ ಕದನ

| N/A | Published : Apr 12 2025, 12:45 AM IST / Updated: Apr 12 2025, 04:22 AM IST

11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿ : ಇಂದು ಬಿಎಫ್‌ಸಿ vs ಬಗಾನ್‌ ಪ್ರಶಸ್ತಿ ಕದನ
Share this Article
  • FB
  • TW
  • Linkdin
  • Email

ಸಾರಾಂಶ

11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಟೂರ್ನಿಯ ಫೈನಲ್‌ ಪಂದ್ಯ ಶನಿವಾರ ನಡೆಯಲಿದ್ದು, ಟ್ರೋಫಿಗಾಗಿ ಬೆಂಗಳೂರು ಎಫ್‌ಸಿ ಹಾಗೂ ಮೋಹನ್‌ ಬಗಾನ್‌ ಸೂಪರ್‌ ಜೈಂಟ್ಸ್‌ ತಂಡಗಳು ಕಾದಾಡಲಿವೆ.

ಕೋಲ್ಕತಾ: 11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಟೂರ್ನಿಯ ಫೈನಲ್‌ ಪಂದ್ಯ ಶನಿವಾರ ನಡೆಯಲಿದ್ದು, ಟ್ರೋಫಿಗಾಗಿ ಬೆಂಗಳೂರು ಎಫ್‌ಸಿ ಹಾಗೂ ಮೋಹನ್‌ ಬಗಾನ್‌ ಸೂಪರ್‌ ಜೈಂಟ್ಸ್‌ ತಂಡಗಳು ಕಾದಾಡಲಿವೆ.

ಈ ಎರಡೂ ತಂಡಗಳು ತಲಾ 4ನೇ ಬಾರಿ ಫೈನಲ್‌ಗೇರಿದ್ದು, 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಬಿಎಫ್‌ಸಿ 2018-19ರಲ್ಲಿ ಕಪ್‌ ಗೆದ್ದಿದ್ದರೆ, ಬಗಾನ್ 2022–23ರಲ್ಲಿ ಚಾಂಪಿಯನ್‌ ಆಗಿತ್ತು.

ಕಳೆದ ಬಾರಿ ರನ್ನರ್‌-ಅಪ್‌ ಆಗಿದ್ದ ಬಗಾನ್‌ ಸತತ 2ನೇ ವರ್ಷವೂ ಲೀಗ್‌ ಹಂತದಲ್ಲಿ ಅಗ್ರಸ್ಥಾನಿದೆ. ಈ ವರ್ಷ ತಂಡ ಆಡಿರುವ 24 ಪಂದ್ಯಗಳ ಪೈಕಿ 17ರಲ್ಲಿ ಗೆದ್ದು, ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೇರಿದೆ. ಮತ್ತೊಂದೆಡೆ ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ, 24ರಲ್ಲಿ 11 ಪಂದ್ಯಗಳಲ್ಲಿ ಗೆದ್ದು, 3ನೇ ಸ್ಥಾನಿಯಾಗಿ ಪ್ಲೇ-ಆಫ್‌ಗೇರಿತ್ತು. ಎಲಿಮಿನೇಟರ್‌ನಲ್ಲಿ ಮುಂಬೈ ಎಫ್‌ಸಿಯನ್ನು ಮಣಿಸಿದ್ದ ತಂಡ, ಸೆಮಿಫೈನಲ್‌ನಲ್ಲಿ ಗೋವಾ ವಿರುದ್ಧ ಜಯಗಳಿಸಿದೆ.

ಪಂದ್ಯ: ಸಂಜೆ 7.30ಕ್ಕೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌-2023ರಲ್ಲಿ ಬಗಾನ್‌

ವಿರುದ್ಧವೇ ಫೈನಲ್‌ ಸೋತಿದ್ದ ಬಿಎಫ್‌ಸಿ

ಬಿಎಫ್‌ಸಿ ಹಾಗೂ ಮೋಹನ್‌ ಬಗಾನ್‌ 2ನೇ ಬಾರಿ ಐಎಸ್‌ಎಲ್‌ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. 2022-23ರ ಫೈನಲ್‌ನಲ್ಲಿ ಉಭಯ ತಂಡಗಳು ಆಡಿದ್ದವು. ಬಿಎಫ್‌ಸಿಯನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3ರಲ್ಲಿ ಸೋಲಿಸಿದ್ದ ಬಗಾನ್‌ ಚಾಂಪಿಯನ್‌ ಆಗಿತ್ತು. ಈ ಆವೃತ್ತಿಯ ಲೀಗ್‌ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಮೊದಲ ಪಂದ್ಯದಲ್ಲಿ ಬಿಎಫ್‌ಸಿ ಗೆದ್ದಿದ್ದರೆ, 2ನೇ ಪಂದ್ಯದಲ್ಲಿ ಬಗಾನ್ ಜಯಿಸಿತ್ತು.