13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರು ಎಫ್‌ಸಿ

| N/A | Published : Mar 30 2025, 03:06 AM IST / Updated: Mar 30 2025, 03:57 AM IST

foot ball
13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರು ಎಫ್‌ಸಿ
Share this Article
  • FB
  • TW
  • Linkdin
  • Email

ಸಾರಾಂಶ

13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಲಗ್ಗೆಯಿಟ್ಟಿದೆ. 

 ಬೆಂಗಳೂರು  : 13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಲಗ್ಗೆಯಿಟ್ಟಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0 ಗೋಲುಗಳ ಅಮೋಘ ಗೆಲುವು ಸಾಧಿಸಿದ ಬಿಎಫ್‌ಸಿ, ಉಪಾಂತ್ಯಕ್ಕೆ ಕಾಲಿಟ್ಟಿತು.

ಪಂದ್ಯದ ಆರಂಭದಿಂದಲೂ ಎದುರಾಳಿಯ ಮೇಲೆ ಹಿಡಿತ ಸಾಧಿಸಿದ ಬಿಎಫ್‌ಸಿ, ನಿರಂತರವಾಗಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ, ಗೆಲುವನ್ನು ಖಚಿತಪಡಿಸಿಕೊಂಡಿತು. 9ನೇ ನಿಮಿಷದಲ್ಲೇ ಸುರೇಶ್‌ ಸಿಂಗ್‌ ಗೋಲು ಸಿಡಿಸಿ ತಂಡದ ಖಾತೆ ತೆರೆದರೆ, 42ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಎಡ್ಗಾರ್‌ ಮೆನ್ಡೆಜ್‌ ಗೋಲು ದಾಖಲಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 2-0 ಮುನ್ನಡೆ ಹೊಂದಿದ್ದ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಇನ್ನೂ 3 ಗೋಲು ಗಳಿಸಿತು. 62ನೇ ನಿಮಿಷದಲ್ಲಿ ರ್‍ಯಾನ್‌ ವಿಲಿಯಮ್ಸ್‌, 76ನೇ ನಿಮಿಷದಲ್ಲಿ ಸುನಿಲ್‌ ಚೆಟ್ರಿ, 83ನೇ ನಿಮಿಷದಲ್ಲಿ ಪೆರೇರ್ಯಾ ಡಯಾಜ್‌ ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು.

ಬಿಎಫ್‌ಸಿಗೆ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾ ತಂಡ ಎದುರಾಗಲಿದೆ. ಎರಡು ಚರಣಗಳ ಮುಖಾಮುಖಿಯಾಗಿದ್ದು, ಮೊದಲ ಪಂದ್ಯ ಏ.2ರಂದು ಬೆಂಗಳೂರು, 2ನೇ ಪಂದ್ಯ ಏ.6ರಂದು ಗೋವಾದಲ್ಲಿ ನಡೆಯಲಿದೆ.