ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ಯುದ್ಧ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ ಈ ಯುದ್ಧ ಸದ್ಯಕ್ಕೆ ಮುಗಿಯುವುದಿಲ್ಲ. ಇನ್ನೂ ಒಂದು ತಿಂಗಳು ನಡೆಯುತ್ತದೆ’ ಎಂದಿದ್ದಾರೆ.

 ವಾಷಿಂಗ್ಟನ್: ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ಯುದ್ಧ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ ಈ ಯುದ್ಧ ಸದ್ಯಕ್ಕೆ ಮುಗಿಯುವುದಿಲ್ಲ. ಇನ್ನೂ ಒಂದು ತಿಂಗಳು ನಡೆಯುತ್ತದೆ’ ಎಂದಿದ್ದಾರೆ.

ಯುದ್ಧದ ಕಾಲಮಿತಿ ಬಗ್ಗೆ ಮಾತನಾಡಿರುವ ಟ್ರಂಪ್‌

ವಿವಿಧ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಯುದ್ಧದ ಕಾಲಮಿತಿ ಬಗ್ಗೆ ಮಾತನಾಡಿರುವ ಟ್ರಂಪ್‌, ‘ ಇದು ಯಾವಾಗಲೂ 4 ವಾರಗಳ ಪ್ರಕ್ರಿಯೆ. ನಾಲ್ಕು ವಾರಗಳಲ್ಲಿ ಮುಗಿಯುತ್ತದೆ ಎಂದು ನಾವು ಭಾವಿಸಬಹುದು. ಅಥವಾ ಅದನ್ನೂ ಮೀರಬಹುದು. ಎಷ್ಟೇ ಪ್ರಬಲವಾಗಿದ್ದರೂ 4 ವಾರ ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ.

ಇರಾನ್‌ ಜತೆ ದೀರ್ಘಕಾಲ ಯುದ್ಧಕ್ಕೂ ನಾವು ಸನ್ನದ್ಧ

ಇರಾನ್‌ ಜತೆ ದೀರ್ಘಕಾಲ ಯುದ್ಧಕ್ಕೂ ನಾವು ಸನ್ನದ್ಧ ಎಂದಿರುವ ಟ್ರಂಪ್‌, ‘ಇದು ಕಷ್ಟವಾಗುವುದಿಲ್ಲ. ನಮ್ಮಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳಿವೆ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಸಂಗ್ರಹಿಸಿದ್ದೇವೆ’ ಎಂದರು.

ಮುಂದುವರೆದಂತೆ ಇರಾನ್‌ ಜತೆಗಿನ ಮಾತುಕತೆ ಬಗ್ಗೆ ಮಾತನಾಡಿರುವ ಅವರು, ‘ಇರಾನ್‌ ಜತೆಗಿನ ಮುಂದಿನ ಮಾತು ಕತೆಗೆ ಮುಕ್ತ. ಆದರೆ ಯಾವಾಗ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. ಅವರು ಮಾತನಾಡುವುದಕ್ಕೆ ಮುಂದಾಗಿದ್ದರು. ಆದರೆ ನಾನೇ ಈ ವಾರ ಅಲ್ಲ ನೀವು ಕಳೆದ ವಾರ ಮಾತನಾಡಬೇಕಿತ್ತು ಎಂದು ತಿಳಿಸಿದ್ದೆ’ ಎಂದು ಹೇಳಿದ್ದಾರೆ.

ಇದೇ ಟ್ರಂಪ್‌ ಇರಾನ್‌ ದಾಳಿಗೆ ಅಮೆರಿಕದ ಮೂವರು ಯೋಧರು ಸಾವನ್ನಪ್ಪಿರುವ ಬಗ್ಗೆ ಒಪ್ಪಿಕೊಂಡರು. ಜತೆಗೆ ’ಅಮೆರಿಕ ಇರಾನ್‌ನಿಂದ ತಪ್ಪುಗಳನ್ನು ಹೊರಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸೇನಾ ಪರಿಣಾಮದ ದೊಡ್ಡ ಅಲೆಯನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.