ಸಾರಾಂಶ
‘ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಮಗ ತೇಜಸ್ವಿ ಯಾದವ್ ಅವರನ್ನು ಬಿಹಾರ ಮುಖ್ಯಮಂತ್ರಿ ಮಾಡುವ, ಸೋನಿಯಾ ಗಾಂಧಿ ಅವರಿಗೆ ತಮ್ಮ ಪುತ್ರ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವ ಆಸೆಯಿದೆ. ಆದರೆ ಸದ್ಯ ಆ ಎರಡೂ ಹುದ್ದೆ ಖಾಲಿಯಿಲ್ಲ
ಪಟನಾ: ‘ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಮಗ ತೇಜಸ್ವಿ ಯಾದವ್ ಅವರನ್ನು ಬಿಹಾರ ಮುಖ್ಯಮಂತ್ರಿ ಮಾಡುವ, ಸೋನಿಯಾ ಗಾಂಧಿ ಅವರಿಗೆ ತಮ್ಮ ಪುತ್ರ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವ ಆಸೆಯಿದೆ. ಆದರೆ ಸದ್ಯ ಆ ಎರಡೂ ಹುದ್ದೆ ಖಾಲಿಯಿಲ್ಲ’ ಎಂದು ಅಮಿತ್ ಶಾ ವಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ,
ಇಲ್ಲಿ ನಡೆದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ ಬಿಹಾರ ವಿಧಾನಸಭಾ ಚುನಾವಣೆಗೆ ಬಿಹಾರ ಅನೇಕ ಯುವಕರಿಗೆ ಟಿಕೆಟ್ ನೀಡಿದೆ. ಆದರೆ ಆರ್‌ಜೆಡಿ ಮತ್ತು ಕಾಂಗ್ರೆಸ್ ನೀಡಿಲ್ಲ. ಏಕೆಂದರೆ ಲಾಲು ಅವರು ತಮ್ಮ ಮಗ ತೇಜಸ್ವಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸುತ್ತಾರೆ. ಸೋನಿಯಾ ತಮ್ಮ ಪುತ್ರನನ್ನು ರಾಹುಲ್ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಇಷ್ಟ ಪಡುತ್ತಾರೆ. ಆದರೆ ಆ ಎರಡೂ ಹುದ್ದೆಗಳು ಖಾಲಿ ಇಲ್ಲ ಎಂದು ಹೇಳಲು ಬಯಸುತ್ತೇನೆ’ ಎಂದರು.
ಎದುರಾಳಿಗಳ ವಿರುದ್ಧ ತಮ್ಮ ಮಾತಿನ ಚಾಟಿ
ಎದುರಾಳಿಗಳ ವಿರುದ್ಧ ತಮ್ಮ ಮಾತಿನ ಚಾಟಿ ಮುಂದುವರೆಸಿದ ಶಾ, ‘ ಪಟನಾದ ಫುಲ್ವರಿ ಷರೀಫ್‌ನಲ್ಲಿ ಪಿಎಫ್‌ಐ ಕಾರ್ಯಕರ್ತರು ಸಕ್ರಿಯರಾಗಿದ್ದರು. ಸಂಘಟನೆಯ ಸದಸ್ಯರನ್ನು ಜೈಲಿಗೆ ಹಾಕಲಾಯಿತು. ಆದರೆ ಬಿಹಾರದಲ್ಲಿ ಆರ್‌ಜೆಡಿ- ಕಾಂಗ್ರೆಸ್ ಕೂಟ ಅಧಿಕಾರಕ್ಕೆ ಬಂದರೆ ಪಿಎಫ್‌ಐ ಸದಸ್ಯರು ಜೈಲಿನಲ್ಲಿಯೇ ಇರುತ್ತಾರೆಯೇ? ’ ಎಂದು ಪ್ರಶ್ನಿಸಿದರು.
ಬಿಹಾರ ಗಬ್ಬೆದ್ದಿದೆ: ತಮ್ಮದೇ
ಸರ್ಕಾರಕ್ಕೆ ಬೈದ ದಿಲ್ಲಿ ಸಿಎಂ
ಮುಜಾಫರ್‌ಪುರ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ವಿಪಕ್ಷವನ್ನು ಟೀಕಿಸುವ ಭರದಲ್ಲಿ ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪೇಚಿಗೆ ಸಿಲುಕಿದ ಘಟನೆ ಬುಧವಾರ ನಡೆದಿದೆ.
ರೇಖಾ ಗುಪ್ತಾ ಅವರು ಇಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಬಿಹಾರ ಗಬ್ಬೆದ್ದು ನಾರುತ್ತಿದೆ. ಈ ಹಿಂದಿನ ಸರ್ಕಾರಗಳು ಬಡಜನರ ಕಾಳಜಿ ಅಭಿವೃದ್ಧಿಗೆ ಗಮನ ಕೊಡದೆ, ಕೇವಲ ತಮ್ಮದೇ ಕುಟುಂಬಗಳ ಹಿತಾಸಕ್ತಿಗೆ ಒತ್ತು ನೀಡಿದ್ದವು. ಇಲ್ಲಿನ ಯುವಕರು ಬೇರೆ ನಗರಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರ ಗುರಿಗೊಳಗಾದರು. ಬಳಿಕ ವಿಪಕ್ಷಗಳೆಡೆಗೆ ತಮ್ಮ ಭಾಷಣ ಮುಂದುವರೆಸಿದರು.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))