ಸಿಹಿಸುದ್ದಿ: ಜನವರಿಯಿಂದ ಭಾರತದಾದ್ಯಂತ ಇಪಿಎಸ್ ಪಿಂಚಣಿದಾರರಿಗೆ ದೊಡ್ಡ ಬದಲಾವಣೆ!

KannadaprabhaNewsNetwork |  
Published : Sep 05, 2024, 12:32 AM ISTUpdated : Sep 05, 2024, 04:42 AM IST
ಪಿಂಚಣಿ | Kannada Prabha

ಸಾರಾಂಶ

ಜನವರಿಯಿಂದ, ಇಪಿಎಸ್ ಪಿಂಚಣಿದಾರರು ಭಾರತದಾದ್ಯಂತ ಯಾವುದೇ ಬ್ಯಾಂಕ್ ಅಥವಾ ಶಾಖೆಯಿಂದ ಪಿಂಚಣಿ ಪಡೆಯಬಹುದು. ಈ ಕೇಂದ್ರೀಕೃತ ವ್ಯವಸ್ಥೆಯು 78 ಲಕ್ಷ ಪಿಂಚಣಿದಾರರಿಗೆ ಅನುಕೂಲವನ್ನುಂಟು ಮಾಡುತ್ತದೆ, ಇದು ಸುಲಭ ಮತ್ತು ಹೆಚ್ಚು ಹೊಂದಿಕೊಳ್ಳುವ ಪಿಂಚಣಿ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

 ನವದೆಹಲಿ : ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭವಿಷ್ಯನಿಧಿ (ಪಿಎಫ್‌) ಮಂಡಳಿ ನಡೆಸುವ 1995ರ ಅಡಿಯ ನೌಕರರ ಪಿಂಚಣಿ ಯೋಜನೆಯ (ಇಪಿಎಸ್) ಪಿಂಚಣಿದಾರರು ಜನವರಿಯಿಂದ ಭಾರತದಾದ್ಯಂತ ಯಾವುದೇ ಬ್ಯಾಂಕ್ ಅಥವಾ ಶಾಖೆಯಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಪಿಎಫ್‌ ಮಂಡಳಿ ಅಧೀನದ 78 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಈ ಘೋಷಣೆ ಮಾಡಿದ್ದು, ಇದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆಯ ಪ್ರಸ್ತಾವನೆಯನ್ನು ಪಿಎಫ್‌ ಬಗ್ಗೆ ನಿರ್ಧಾರ ಕೈಗೊಳ್ಳುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್‌ ಅನುಮೋದಿಸಿದೆ ಎಂದಿದ್ದಾರೆ.ಈವರಗೆ ಭವಿಷ್ಯನಿಧಿ ಮಂಡಳಿಯ ಪ್ರತಿ ವಲಯ/ಪ್ರಾದೇಶಿಕ ಕಚೇರಿಗಳು ಕೇವಲ 3-4 ಬ್ಯಾಂಕ್‌ಗಳೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳುತ್ತಿದ್ದವು ಹಾಗೂ ಪಿಂಚಣಿದಾರರು ಅದೇ ಬ್ಯಾಂಕ್‌ಗಳಲ್ಲಿ ಪಿಂಚಣಿ ಪಡೆಯಬೇಕಾಗಿತ್ತು.

ಆದರೆ ಇದನ್ನು ಸರಳೀಕರಿಸಿರುವ ಕೇಂದ್ರ ಸರ್ಕಾರ, ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್, ಯಾವುದೇ ಶಾಖೆ, ದೇಶದ ಎಲ್ಲಿಂದಲಾದರೂ ಪಡೆಯಬಹುದಾಗಿದೆ.

ಅಲ್ಲದೆ, ಕೇಂದ್ರೀಕೃತ ವ್ಯವಸ್ಥೆಯು ಪಿಂಚಣಿದಾರರು ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಾಗ ಅಥವಾ ಅವರ ಬ್ಯಾಂಕ್ ಅಥವಾ ಶಾಖೆಯನ್ನು ಬದಲಾಯಿಸಿದಾಗ ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲ.

ಇದೇ ವೇಳೆ, ನೌಕರರು ನಿವೃತ್ತರಾಗಿ ಪಿಂಚಣಿ ಆರಂಭವಾಗುವ ವೇಳೆ ಪರಿಶೀಲನೆಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಪಿಂಚಣಿ ಬಿಡುಗಡೆಯಾದ ತಕ್ಷಣ ಅವರ ಖಾತೆಗೆ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ
2025 ಸಾರ್ಥಕ ವರ್ಷ: ಮನ್‌ ಕಿ ಬಾತ್‌ನಲ್ಲಿ ಮೋದಿ