ಆನ್‌ಲೈನ್‌ ಮೂಲಕ ನೀಟ್‌-ಪಿಜಿ ಪರೀಕ್ಷೆ ಸಾಧ್ಯತೆ

KannadaprabhaNewsNetwork |  
Published : Jul 01, 2024, 01:47 AM ISTUpdated : Jul 01, 2024, 07:39 AM IST
ನೀಟ್‌-ಪಿಜಿ | Kannada Prabha

ಸಾರಾಂಶ

ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಬಿಎ)ಯು ನೀಟ್-ಪಿಜಿ ಪರೀಕ್ಷೆಯನ್ನು ಮರು ನಿಗದಿ ಪಡಿಸಲು ನಿರ್ಧರಿಸಿದ್ದು, ಸೋಮವಾರ ಅಥವಾ ಮಂಗಳವಾರ ಹೊಸ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಬಿಎ)ಯು ನೀಟ್-ಪಿಜಿ ಪರೀಕ್ಷೆಯನ್ನು ಮರು ನಿಗದಿ ಪಡಿಸಲು ನಿರ್ಧರಿಸಿದ್ದು, ಸೋಮವಾರ ಅಥವಾ ಮಂಗಳವಾರ ಹೊಸ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.

ಈ ವರ್ಷ ಪರೀಕ್ಷೆಯಲ್ಲಿ ಭಾರೀ ಬದಲಾವಣೆ ತರುವುದಕ್ಕೆ ಸಂಸ್ಥೆ ಮುಂದಾಗಿದ್ದು ಈ ಹಿಂದಿದ್ದ ಸಾಂಪ್ರದಾಯಿಕ ಪೆನ್ನು-ಪುಸ್ತಕ ಆಧಾರಿತ ಪರೀಕ್ಷಾ ಕ್ರಮವನ್ನು ಕೈ ಬಿಟ್ಟು ಕಂಪ್ಯೂಟರ್‌ ಆಧಾರಿತ (ಆನ್‌ಲೈನ್‌) ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದೆ.

ನೀಟ್‌ ಯುಜಿ ವಿವಾದದ ನಡುವೆಯೇ ನೀಟ್‌ ಪಿಜಿ ಪರೀಕ್ಷೆಯನ್ನು ಇತ್ತೀಚೆಗೆ ಕೊನೇ ಕ್ಷಣದಲ್ಲಿ ಮುಂದೂಡಲಾಗಿತ್ತು. ಅಕ್ರಮ ನಡೆಯಬಹುದು ಎಂಬ ಸುಳಿವು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ನೀಟ್ ಅಕ್ರಮ: ಗೋಧ್ರಾ ಖಾಸಗಿ ಶಾಲೆ ಒಡೆಯನ ಬಂಧನ 

ಗೋದ್ರಾ: ನೀಟ್-ಯುಜಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಸಿಬಿಐ., ಗುಜರಾತ್‌ನ ಗೋಧ್ರಾ ಪಟ್ಟಣದ ಖಾಸಗಿ ಶಾಲೆಯೊಂದರ ಮಾಲಿಕನನ್ನು ಬಂಧಿಸಿದ್ದಾರೆ. ದೀಕ್ಷಿತ್ ಪಟೇಲ್‌ ಒಡೆತನದ ಜಯ್ ಜಲರಾಮ್‌ ಶಾಲೆಯಲ್ಲಿ ಮೇ 5ರಂದು ನೀಟ್‌ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಒದಗಿಸಲು ಅಭ್ಯರ್ಥಿಗಳಿಂದ ₹10 ಲಕ್ಷ ಬೇಡಿಕೆಯಿಟ್ಟ ಆರೋಪದಲ್ಲಿ ಪಟೇಲ್‌ರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದವರ 6ನೇ ವ್ಯಕ್ತಿ ಈತ. ಗುಜರಾತ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದರಿಂದ ಸಿಬಿಐ ತಂಡ ಅವರನ್ನು ಅಹಮದಾಬಾದಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ ಎಂದು ಸರ್ಕಾರಿ ವಕೀಲ ರಾಕೇಶ್ ಠಾಕೋರ್ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು