* ಗ್ರಾಮೀಣ ಎಲ್‌ಪಿಜಿ ಬುಕಿಂಗ್‌ಅವಧಿ 25 ದಿನಗಳಿಗೆ ಇಳಿಕೆ

KannadaprabhaNewsNetwork |  
Published : Sep 08, 2026, 02:00 AM IST
ಗ್ಯಾಸ್ | Kannada Prabha

ಸಾರಾಂಶ

ಮಧ್ಯಪ್ರಾಚ್ಯ ಕದನದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದ್ದ ಎಲ್‌ಪಿಜಿ ಬುಕಿಂಗ್‌ ಅವಧಿಯನ್ನು ಕೇಂದ್ರ ಸರ್ಕಾರ ಪುನಃ 25 ದಿನಗಳಿಗೆ ಇಳಿಸಿದೆ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ ಸೋಮವಾರ ಮಾಹಿತಿ ನೀಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ಹಿಂದಿನಂತೆ ಬುಕ್ಕಿಂಗ್ ಅವಧಿ 25 ದಿನವೇ ಉಳಿಯಲಿದೆ.

- ಕದನದ ವೇಳೆ 45 ದಿನಕ್ಕೆ ಏರಿದ್ದ ಅವಧಿ

- ನಗರಗಳ 25 ದಿನದ ಅವಧಿ ಬದಲಿಲ್ಲ

==

-ಮಧ್ಯಪ್ರಾಚ್ಯ ಕದನದ ಹಿನ್ನೆಲೆ ಬುಕಿಂಗ್‌ 45 ದಿನಗಳಿಗೆ ಏರಿಕೆ

-ಈಗ ಎಲ್‌ಪಿಜಿ ಲಭ್ಯತೆ ಕಾರಣ ಹಳೆಯ ನಿಯಮ ಮರುಜಾರಿ

==

ಪಿಟಿಐ ತಿರುವನಂತಪುರಂ

ಮಧ್ಯಪ್ರಾಚ್ಯ ಕದನದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದ್ದ ಎಲ್‌ಪಿಜಿ ಬುಕಿಂಗ್‌ ಅವಧಿಯನ್ನು ಕೇಂದ್ರ ಸರ್ಕಾರ ಪುನಃ 25 ದಿನಗಳಿಗೆ ಇಳಿಸಿದೆ ಎಂದು ಕೇಂದ್ರ ಸಚಿವ ಸುರೇಶ್‌ ಗೋಪಿ ಸೋಮವಾರ ಮಾಹಿತಿ ನೀಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ಹಿಂದಿನಂತೆ ಬುಕ್ಕಿಂಗ್ ಅವಧಿ 25 ದಿನವೇ ಉಳಿಯಲಿದೆ.

ಅಮೆರಿಕ ಮತ್ತು ಇರಾನ್‌ ಕದನದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತಗೊಂಡು ಕೇಂದ್ರ ಸರ್ಕಾರ ಬುಕಿಂಗ್‌ ಮೇಲೆ ಕಡಿವಾಣ ಹೇರಿತ್ತು. ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬುಕಿಂಗ್‌ ಅವಧಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಇದೀಗ ಎಲ್‌ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬಂದಿದೆ. ಹೀಗಾಗಿ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಿದ್ದು, ಎಲ್ಲಾ ಪ್ರದೇಶಗಳಲ್ಲೂ ಸಮಾನಾಂತರವಾಗಿ 25 ದಿನಗಳ ಬುಕಿಂಗ್‌ ಜಾರಿಗೊಳಿಸಿದೆ ಎಂದು ಗೋಪಿ ಫೇಸ್ಬುಕ್‌ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

* ದಿಲ್ಲಿ ಕಟ್ಟಡ ಕುಸಿತಕ್ಕೆ ಮೃತರ ಸಂಖ್ಯೆ 7ಕ್ಕೇರಿಕೆ
* ಮಹಿಳೆಯರ ಬಗ್ಗೆ ಕೀಳುಹೇಳಿಕೆ ಕೊಟ್ಟರೆ ಕಠಿಣ ಕ್ರಮ: ವಿಜಯ್‌ ಎಚ್ಚರಿಕೆ