ನವದೆಹಲಿ: ದೆಹಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ 17 ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾನಿಸಿದ, ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯನ್ನು ಉತ್ತರಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ತನ್ನ ವಿರುದ್ಧ ದಾಖಲಾಗುತ್ತಲೇ ಚೈತನ್ಯಾನಂದ ನಾಪತ್ತೆಯಾಗಿದ್ದ. ಈತ ಲಂಡನ್‌ನಲ್ಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಬಳಿಕ ಆತ ಆಗ್ರಾದ ತಾಜ್‌ಗಂಜ್ ಪ್ರದೇಶದ ಹೋಟೆಲ್‌ನಲ್ಲಿ ತಂಗಿದ್ದ ಖಚಿತ ಮಾಹಿತಿ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಈತ ಸೆ.27ರಂದು ಪಾರ್ಥ ಸಾರಥಿ ಹೆಸರಿನಲ್ಲಿ ಆಗ್ರಾದ ಹೋಟೆಲ್ ಬುಕ್ ಮಾಡಿದ್ದು ಎಂಬುದು ತನಿಖೆ ವೇಳೆ ಕಂಡುಬಂದಿದೆ.
ವಿಶ್ಬಸಂಸ್ಥೆಯ ರಾಯಭಾರಿ
ನಕಲಿ ಸ್ವಾಮೀಜಿ ವಂಚನೆ
- ಬೇರೆ ಬೇರೆ ಹೆಸರಲ್ಲಿ ನಕಲಿ ಪಾಸ್ಪೋರ್ಟ್ ಹೊಂದಿದ್ದ ಸ್ವಾಮೀಜಿನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ಚೈತನ್ಯಾನಂದ ಸರಸ್ವತಿ ಬಗ್ಗೆ ಬಗೆದಷ್ಟು ಕರಾಳ ಸತ್ಯಗಳು ಹೊರಬೀಳುತ್ತಿದೆ. ಈತ ತನ್ನನ್ನು ತಾನು ತಮ್ಮನ್ನು ತಾವು ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿ ಎಂದು ಬಿಂಬಿಸಿಕೊಂಡಿದ್ದ. ಮಾತ್ರವಲ್ಲದೇ ಬ್ರಿಕ್ಸ್‌ನ ಭಾರತೀಯ ವಿಶೇಷ ರಾಯಭಾರಿ ಎಂದು ಎಲ್ಲರನ್ನೂ ನಂಬಿಸಿದ್ದರು.
ಅದಕ್ಕಂತಲೇ ನಕಲಿ ವಿಸಿಟಿಂಗ್ ಕಾರ್ಡ್ ಕೂಡ ಮಾಡಿಸಿದ್ದ. ಜೊತೆಗೆ ಈತ ಎರಡು ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ. ಒಂದು ಪಾರ್ಥ ಸಾರಥಿಯ ಹೆಸರಿನಲ್ಲಿದ್ದರೆ, ಮತ್ತೊಂದು ಚೈತನ್ಯಾನಂದ ಸರಸ್ವತಿ ಎನ್ನುವ ಹೆಸರಿನಲ್ಲಿದೆ. ಮೊದಲ ಪಾಸ್ಟೋರ್ಟ್‌ನಲ್ಲಿ ತಂದೆಯ ಸ್ವಾಮಿ ಘನಾನಂದ ಪುರಿ ಎಂದು ನಮೂದಿಸಿದ್ದರು. ತಾಯಿ ಹೆಸರನ್ನು ಶಾರದಾ ಅಂಬಾ ಎಂದು ಉಲ್ಲೇಖಿಸಿದ್ದಾರೆ. ಆದರೆ 2 ನೇ ಪಾಸ್ಪೋರ್ಟ್ ನಲ್ಲಿ ಅವರು ತಂದೆಯನ್ನು ಸ್ವಾಮಿ ದಯಾನಂದ ಸರಸ್ವತಿ ಮತ್ತು ಶಾರದಾ ಅಂಬಾಲ್ ಎಂದು ಬರೆದಿದ್ದಾರೆ. ಮಾತ್ರವಲ್ಲದೇ ಜನ್ಮಸ್ಥಳವನ್ನೂ ನಕಲಿ ಮಾಡಿದ್ದು ತಮಿಳುನಾಡು, ಡಾರ್ಜಿಲಿಂಗ್ ಎಂದು ಉಲ್ಲೇಖಿಸಿದ್ದು ಕಂಡುಬಂದಿದೆ.