ಲವ್‌ ಜಿಹಾದ್‌ಗೆ 1000 ಮುಸ್ಲಿಂ ಯುವಕರ ನೇಮಿಸಿದ್ದ ಬಾಬಾ!

Published : Jul 14, 2025, 06:25 AM IST
 Love Jihad

ಸಾರಾಂಶ

ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್‌ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್‌ ಅಲಿಯಾಸ್‌ ಛಂಗೂರ್‌ ಬಾಬಾ ನೇಮಿಸಿಕೊಂಡಿದ್ದ.  

ಲಖನೌ: ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್‌ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್‌ ಅಲಿಯಾಸ್‌ ಛಂಗೂರ್‌ ಬಾಬಾ ನೇಮಿಸಿಕೊಂಡಿದ್ದ. ಅದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷದಲ್ಲಿ 500 ಕೋಟಿ ರು.ಗಳನ್ನು ಸಹ ಪಡೆದಿದ್ದ ಎಂಬ ಸ್ಫೋಟಕ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಯುವಕರನ್ನು ಬಳಸಿಕೊಂಡು ಯುವತಿಯರು, ಬಡ ಕುಟುಂಬ ಮಹಿಳೆಯರು, ವಿದವೆಯರನ್ನು ಛಂಗೂರ್‌ ಗುರಿ ಮಾಡುತ್ತಿದ್ದ. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಇನ್ನು ಕೆಲ ಸಂದರ್ಭಗಳಲ್ಲಿ ಬಲವಂತವಾಗಿ ಮತಾಂತರಿಸುತ್ತಿದ್ದ. ಉಗ್ರ ಚಟುವಟಿಕೆ ನಡೆಸುತ್ತಿರುವವರು ಸೇರಿದಂತೆ ಒಂದು ಕೋಮಿನ ಜನರ ಜತೆ ಅವರ ಮದುವೆ ಮಾಡಲು ಯತ್ನಿಸಿದ್ದ ಎಂದು ಇತ್ತೀಚೆಗೆ ಬಾಬಾನನ್ನು ಬಂಧಿಸಿದ್ದ ಎಸ್‌ಐಟಿ ಮೂಲಗಳು ತಿಳಿಸಿವೆ.

ಈ ಕೆಲಸ ಮಾಡಿದ್ದಕ್ಕಾಗಿ ಯುವಕರಿಗೆ ಇಂಡೋ ನೇಪಾಳ ಗಡಿ ಭಾಗದಲ್ಲಿ ಹಣ ಪಾವತಿ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ಐಬಿ ಮತ್ತು ಎನ್‌ಐಎಗಳು ಛಂಗೂರ್ ಬಾಬಾನನ್ನು ವಿಚಾರಣೆ ನಡೆಸಲಿವೆ ಎಂದು ಗೊತ್ತಾಗಿದೆ.

ಐಎಸ್ಐ ಜತೆಗೂ ನಂಟಿಗೆ ಯತ್ನ:

ಬಾಬಾ ನೇಪಾಳಕ್ಕೆ ತೆರಳಿದ್ದ ಹಾಗೂ ಪಾಕ್‌ ಜತೆಗಿನ ಸಂಬಂಧವನ್ನು ಬಲಪಡಿಸಲು ಅಲ್ಲಿನ ಪಾಕ್‌ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿದ್ದ ಐಎಸ್ಐ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ಗೊತ್ತಾಗಿದೆ.

ಮತಾಂತರಕ್ಕೆ ಕೋಡ್‌ವರ್ಡ್‌:

ಇನ್ನು ಛಂಗೂರ್‌ ಬಾಬಾ ತನ್ನ ಮಸಲತ್ತುಗಳು ಹೊರಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪ್ರಾಜೆಕ್ಟ್‌, ಮಿಟ್ಟಿ ಪಲಟ್ನಾ, ಕಾಜಲ್‌ ಲಗಾನಾ ಮತ್ತು ದರ್ಶನ್‌ ಎಂಬ ಹೆಸರಿನ 4 ಕೋಡ್‌ವರ್ಡ್‌ ಬಳಸಿದ್ದ. ಈ ಕೋಡ್‌ವರ್ಡ್‌ಗಳನ್ನು ವಿಶೇಷವಾಗಿ ಹಿಂದೂ ಹೆಣ್ಣುಮಕ್ಕಳ ಮತಾಂತರಕ್ಕೆ ಬಳಕೆ ಮಾಡಿದ್ದ. ‘ಪ್ರಾಜೆಕ್ಟ್‌’ ಎಂದರೆ ಮಹಿಳೆ, ‘ಮಿಟ್ಟಿ ಪಲಟ್ನಾ’ ಅಂದರೆ ಮತಾಂತರ, ‘ಕಾಜಲ್‌ ಲಗಾನಾ’ ಎಂದರೆ ತಿರುಚುವುದು ಮತ್ತು ‘ದರ್ಶನ್‌’ ಎಂದರೆ ಛಂಗೂರ್‌ ಬಾಬಾನ ದರ್ಶನ. ಈ ರೀತಿ ಮತಾಂತರ ಪ್ರಕ್ರಿಯೆಯನ್ನು ಛಂಗೂರ್‌ ಬಾಬಾ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಯುಪಿಯಲ್ಲಿ ಬಂಧಿತ ಛಂಗೂರ್‌ನ ಬಣ್ಣ ಬಯಲು

ಹಿಂದೂ ಯುವತಿಯರ ಮತಾಂತರಕ್ಕೆ ಸಂಚು

ಮತಾಂತರ ಸಂಚಿನಲ್ಲಿ ಇತ್ತೀಚೆಗೆ ಉತ್ತರಪ್ರದೇಶ ಲಖನೌದಲ್ಲಿ ಬಂಧನಕ್ಕೊಳಗಾಗಿದ್ದ ಜಮಾಲುದ್ದೀನ್‌

ಈ ವೇಳೆ ಆತ ಪಾಕ್‌ ಸಲಹೆ, ಕೊಲ್ಲಿ ದೇಶದ 500 ಕೋಟಿ ಹಣದೊಂದಿಗೆ ಮತಾಂತರ ನಡೆಸುತ್ತಿದ್ದದ್ದು ಪತ್ತೆ

14-24ರ ವಯೋಮಾನದ ಹಿಂದೂ ಯುವತಿಯರನ್ನೇ ಗುರುತಿಸಿ ಅವರಿಗೆ ಬಾಬಾ ಗ್ಯಾಂಗ್‌ನಿಂದ ಗಾಳ

ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್‌ ಮಾಡಿ ಹಣ ಪಡೆಯುತ್ತಿದ್ದ ಬಾಬಾ

ಪ್ರೀತಿ ಪ್ರೇಮದ ನಾಟಕವಾಡಿ ಬಳಿಕ ಮದುವೆಯಾಗಿ ಬಳಿಕ ಮತಾಂತರ ಮಾಡಿ ವಂಚಿಸುತ್ತಿದ್ದ ವಂಚಕರು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಲಾಂಗೂ ಮುನ್ನ ರಾಷ್ಟ್ರಪತಿ ಹುದ್ದೆಗೆ ವಾಜಪೇಯಿ ಹೆಸರು!
ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ