ಲೇಹ್: ಲಡಾಖ್‌ನ ಲೇಹ್ ಬಳಿಯ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ವೇಳೆ ಅದರಲ್ಲಿದ್ದ ಭಾರತೀಯ ಸೇನೆಯ ಮೂವರು ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ನಿಯಮಿತ ಕಾರ್ಯಾಚರಣೆ ಸಂದರ್ಭದಲ್ಲಿ ಸಿಂಗಲ್ ಎಂಜಿನ್ ಹೊಂದಿರುವ ಎಚ್‌ಎಎಲ್ ಚೀತಾ ಲೈಟ್ ಹೆಲಿಕಾಪ್ಟರ್ ಸಂಚರಿಸುತ್ತಿದ್ದಾಗ ಪತನಗೊಂಡಿದೆ. ಈ ವೇಳೆ ಓರ್ವ ಲೆಫ್ಟಿನೆಂಟ್ ಕರ್ನಲ್ , ಓರ್ವ ಮೇಜರ್ ಪೈಲಟ್ ಮತ್ತು ಪದಾತಿದಳದ ಜನರಲ್ ಆಫೀಸರ್ ಕಮಾಂಡಿಂಗ್ ಅಧಿಕಾರಿಯಿದ್ದರು. ಮೂವರು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇನ್ನು ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ.