- ಯೋಜನೆಯಡಿ ಇದುವರೆಗೆ 12 ಲಕ್ಷ ನೇಮಕ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ 47 ವಿವಿಧ ಸ್ಥಳಗಳಲ್ಲಿ ನಡೆದ ರೋಜ್‌ಗಾರ್ ಮೇಳದಲ್ಲಿ 51,000ಕ್ಕೂ ಹೆಚ್ಚಿನ ಯುವಜನತೆಗೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ವರ್ಚುವಲ್ ಆಗಿ ವಿತರಿಸಿದರು.
ಇದರಿಂದಾಗಿ ರೋಜ್‌ಗಾರ್ ಮೇಳ ಆರಂಭವಾದ ಬಳಿಕ ಇದುವರೆಗೆ 18 ಇದೇ ರೀತಿಯ ಕಾರ್ಯಕ್ರಮಗಳ ಮೂಲಕ 12 ಲಕ್ಷ ಮಂದಿಗೆ ನೇಮಕಾತಿ ಪತ್ರ ವಿತರಿಸಿದಂತಾಗಿದೆ.ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಇಂದು ನೇಮಕಗೊಂಡ ಯುವಕರು ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾಲುದಾರರಾಗುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪ ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ವಿಕಸಿತ ಭಾರತಕ್ಕೆ ಯುವಶಕ್ತಿ ನೆರವಾಗುತ್ತಿದೆ’ ಎಂದರು.
ಈ ನಡುವೆ, ಮೋದಿ ಅವರು ನೇಮಕಕ್ಕೆ ದಿಲ್ಲಿಯಲ್ಲಿ ವರ್ಚುವಲ್ ಆಗಿ ಚಾಲನೆ ನೀಡಿದ ಬಳಿಕ ಬೆಂಗಳೂರಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ 84 ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪತ್ರ ವಿತರಿಸಿದರು.