ಪಾಕಿಸ್ತಾನಕ್ಕೂ ವಿಸ್ತರಿಸಿದ ಕಾಕ್ರೋಚ್‌ ಜನತಾ ಪಾರ್ಟಿ!

KannadaprabhaNewsNetwork |  
Published : May 23, 2026, 03:00 AM IST
Cockcroach

ಸಾರಾಂಶ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುವ ಉದ್ದೇಶದಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ಪಾಕಿಸ್ತಾನಕ್ಕೂ ವಿಸ್ತರಿಸಿದೆ.

ಇಸ್ಲಾಮಾಬಾದ್‌: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುವ ಉದ್ದೇಶದಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ಪಾಕಿಸ್ತಾನಕ್ಕೂ ವಿಸ್ತರಿಸಿದೆ.

ಅಲ್ಲಿ ಕಾಕ್ರೋಚ್‌ ಅವಾಮಿ ಪಾರ್ಟಿ, ಕಾಕ್ರೋಚ್‌ ಅವಾಮಿ ಲೀಗ್‌ ಹಾಗೂ ಮುತ್ತಹಿದಾ ಕಾಕ್ರೋಚ್‌ ಮೂವ್‌ಮೆಂಟ್‌ ಎಂಬ 3 ಹೆಸರಿನಲ್ಲಿ ಆನ್ಲೈನ್‌ ಅಭಿಯಾನ ಆರಂಭವಾಗಿದೆ.

ನಾವು ವ್ಯವಸ್ಥೆಯು ಜಿರಳೆಗಳೆಂದು ಪರಿಗಣಿಸಿದ ಜನರ ಧ್ವನಿ

ಒಂದು ಖಾತೆಯ ಬಯೋದಲ್ಲಿ ‘ಪಾಕಿಸ್ತಾನಕ್ಕಾಗಿ, ಯುವಕರಿಂದ, ಯುವಕರ ರಾಜಕೀಯ ರಂಗ’ ಎಂಬ ಬರೆದುಕೊಳ್ಳಲಾಗಿದೆ. ಇನ್ನೊಂದರಲ್ಲಿ, ‘ನಾವು ವ್ಯವಸ್ಥೆಯು ಜಿರಳೆಗಳೆಂದು ಪರಿಗಣಿಸಿದ ಜನರ ಧ್ವನಿ’ ಎಂದು ಬರೆಯಲಾಗಿದೆ. ಅಭಿಯಾನದ ಲೋಗೊ ಕೂಡ ಭಾರತದ್ದನ್ನೇ ಹೋಲುವ ರೀತಿಯಲ್ಲಿದೆ. ಆದರೆ ಹಸಿರು ಮತ್ತು ಬಿಳಿ ಬಣ್ಣವನ್ನು ಅಳವಡಿಸಲಾಗಿದೆ. ಜಿರಳೆಯ ಕೈಯಲ್ಲಿ ಪಾಕ್‌ ಧ್ವಜವನ್ನು ಹಿಡಿಸಲಾಗಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯವಂತಹ (ಪಿಪಿಪಿ) ಸ್ಥಾಪಿತ ರಾಜಕೀಯ ಪಕ್ಷಗಳಿಗೆ ವಿಶಿಷ್ಟ ಪರ್ಯಾಯವಾಗಿ ರೂಪುಗೊಳ್ಳುವ ರೀತಿಯಲ್ಲಿ ಇವುಗಳನ್ನು ಬಿಂಬಿಸಲಾಗುತ್ತಿದೆ.

- 3 ಹೆಸರುಗಳಲ್ಲಿ ಆನ್‌ಲೈನ್ ಅಭಿಯಾನ ಶುರು

-ಸ್ಥಾಪಿತ ರಾಜಕೀಯ ಪಕ್ಷಗಳಿಗೆ ಜಿರಳೆ ಸವಾಲು

-ಭಾರತದ ಬಳಿಕ ನೆರೆ ದೇಶದಲ್ಲೂ ಅಭಿಯಾನ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪುಟ1ಕ್ಕೆಮತ್ತೆ ತೈಲ ದರ ಏರಿಕೆ ಶಾಕ್‌- ಪೆಟ್ರೋಲ್‌ 87 ಪೈಸೆ, ಡೀಸೆಲ್‌ 91 ಪೈಸೆ । 3ನೇ ಏರಿಕೆ
51,000 ಯುವಕರಿಗೆ ಮೋದಿ ನೇಮಕಾತಿ ಪತ್ರ