ಬೀಜಿಂಗ್: ಆನ್‌ಲೈನ್ ಊಟದ ಆರ್ಡರ್‌ಗಳನ್ನು ಡೆಲಿವರಿ ಮಾಡುವ ಕೆಲಸ ನಡುವೆ ಸಿಗುತ್ತಿದ್ದ ಸಮಯದಲ್ಲಿ ವಾಂಗ್ ಜಿಬಿಂಗ್ (56) ಎಂಬುವವರು ಬರೆದ ಕವನಗಳ ಸಂಕಲಕ್ಕೆ ಚೀನಾದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನವೆನಿಸಿಕೊಂಡಿರುವ ‘ಲು ಕ್ಸುನ್’ ಪ್ರಶಸ್ತಿ ಲಭಿಸಿದೆ.
2019ರಿಂದ ಡೆಲಿವರಿ ಕೆಲಸ ಆರಂಭಿಸಿದ್ದ ವಾಂಗ್, ಆರ್ಡರ್ ಇರದ ಸಮಯದಲ್ಲಿ ತಮ್ಮಂಥ ಗಿಗ್ ಕಾರ್ಮಿಕರ ಕಷ್ಟ, ಆಕಾಂಕ್ಷೆಗಳನ್ನು ಕವಿತೆಗಳ ರೂಪದಲ್ಲಿ ಸಣ್ಣ ಹಾಳೆಗಳಿಗಿಳಿಸುತ್ತಿದ್ದರು.
ಡೆಲಿವರಿ ಮಾಡುವವರು ವಿಳಾಸ ಹುಡುಕಲು ಪಡುವ ಕಷ್ಟದ ಬಗೆಗಿನ ಕವನವೊಂದು 2022ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 2023ರಲ್ಲಿ ಅವರ ಮೊದಲ ಸಂಕಲನ ಮುದ್ರಣವಾಯಿತು. ಬಳಿಕ 2024ರಲ್ಲಿ ಪುಸ್ತಕ ರೂಪ ಪಡೆದ ‘ಲೋ ಫ್ಲೈಟ್’ ಸಂಕಲನಕ್ಕೀಗ ಪ್ರಶಸ್ತಿ ಲಭಿಸಿದೆ.