7ನೇ ಕ್ಲಾಸ್‌ ಹುಡುಗಿ ಮೇಲೆ ರೇಪ್‌, ಹತ್ಯೆಗೆ 9ನೇ ಕ್ಲಾಸ್‌ ಬಾಲಕ 100 ರು.ನ ಸುಪಾರಿ

KannadaprabhaNewsNetwork |  
Published : Jan 30, 2025, 12:33 AM ISTUpdated : Jan 30, 2025, 05:28 AM IST
ರೇಪ್  | Kannada Prabha

ಸಾರಾಂಶ

7ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನದೇ ತರಗತಿಯ ವಿದ್ಯಾರ್ಥಿನಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಲು 9ನೇ ತರಗತಿ ಬಾಲಕನಿಗೆ 100 ರು.ನ ಸುಪಾರಿ ಕೊಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ ನಡೆದಿದೆ.

ಪುಣೆ: 7ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನದೇ ತರಗತಿಯ ವಿದ್ಯಾರ್ಥಿನಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಲು 9ನೇ ತರಗತಿ ಬಾಲಕನಿಗೆ 100 ರು.ನ ಸುಪಾರಿ ಕೊಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ ನಡೆದಿದೆ.

ಆದರೆ ಅದೃಷ್ಟವಶಾತ್‌ ಸುಪಾರಿ ಪಡೆದಿದ್ದ ಬಾಲಕ ಕೃತ್ಯ ಎಸಗುವ ಬದಲು ಈ ವಿಷಯವನ್ನು ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾನೆ. ಹೀಗಾಗಿ ದುರಂತ ತಪ್ಪಿದೆ. ಆದರೆ ಪ್ರಕರಣದಲ್ಲಿ ಆರೋಪಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪ್ರಿನ್ಸಿಪಾಲ್‌ ಮತ್ತು ಇಬ್ಬರು ಶಿಕ್ಷಕಿಯರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ವಿಷಯ ಬಹಿರಂಗವಾದ ಬಳಿಕ ಇದೀಗ ಮೂವರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೇಡು: ಬಾಲಕ ತನ್ನ ರಿಪೋರ್ಟ್‌ ಕಾರ್ಡಿನಲ್ಲಿ ಪೋಷಕರ ನಕಲಿ ಸಹಿ ಮಾಡಿದ್ದ ಎಂದು ವಿದ್ಯಾರ್ಥಿನಿ ಶಿಕ್ಷಕರಿಗೆ ದೂರು ನೀಡಿದ್ದಳು. ಇದಕ್ಕೆ ಕುಪಿತಗೊಂಡಿದ್ದ ಬಾಲಕ, ಪಾಠ ಕಲಿಸಲು ಆಕೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲು 9ನೇ ಕ್ಲಾಸ್‌ ಹುಡುಗನಿಗೆ 100 ರು. ಸುಪಾರಿ ನೀಡಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಚರಾಜ್ಯಗಳ ಚುನಾವಣೆ ಮುಹೂರ್ತ ಫಿಕ್ಸ್ : ಇಲ್ಲಿ ಗೆಲ್ಲೋರ್ಯಾರು ? ಸೋಲು ಯಾರಿಗೆ?
ಕಚ್ಚಾ ತೈಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ