ಸಿಎಂ ವಿಜಯ್‌-ರಾಗಾ ಭೇಟಿ : 1 ತಾಸು ಚರ್ಚೆ, ಕಾಫಿ ಟೈಂ

Published : Oct 11, 2026, 10:47 AM IST
Rahul Gandhi

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಅವರನ್ನು ಚೆನ್ನೈನ ಹೊರವಲಯದಲ್ಲಿರುವ ನೀಲಂಕರೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು 1 ತಾಸು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಚೆನ್ನೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಅವರನ್ನು ಚೆನ್ನೈನ ಹೊರವಲಯದಲ್ಲಿರುವ ನೀಲಂಕರೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು 1 ತಾಸು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಳಿಕ ಇಬ್ಬರೂ ಸಮೀಪದ ಬಾಸ್ಕ್‌ ಬೈ ಕಾಫಿ ಕೆಫೆಗೆ ತೆರಳಿ ಕ್ಯಾಪಚೀನೊ, ತಿರಮೀಸು, ಕುಕೀಸ್‌ ಹಾಗೂ ಕಾಫಿ ಸೇವಿಸಿದರು.

* ಅಪರಾಧಕ್ಕೆ ’ಮೊಗ್ಯಾಂಬೋ ಮೋದಿ’ ಬೆಲೆ ತೆರಬೇಕು: ರಾಹುಲ್‌

ಚೆನ್ನೈ: ’ಮಾಡಿದ ಅಪರಾಧಕ್ಕೆ ‘ಮೊಗ್ಯಾಂಬೋ ಮೋದಿ’ ಬೆಲೆ ತೆರುವಂತೆ ಮಾಡುತ್ತೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ. ಈ ಮೂಲಕ ‘ಮಿ.ಇಂಡಿಯಾ’ ಚಿತ್ರದಲ್ಲಿ ಅಮರೀಶ್‌ಪುರಿ ಮಾಡಿದ ಖಳನಟನ ಪಾತ್ರಕ್ಕೆ ಮೋದಿಯನ್ನು ಹೋಲಿಸಿದ್ದಾರೆ.

ಶನಿವಾರ ಸಂಜೆ ಚೆನ್ನೈನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ವಿರುದ್ಧ ಪ್ರಧಾನಿ ಮೋದಿ ಮಾಡಿದ ಅಪರಾಧಗಳಿಗೆ ಅವರು ಬೆಲೆ ತೆರುವಂತೆ ಮಾಡುತ್ತೇವೆ. ನೀವು ಯಾವುದಕ್ಕೂ ಹೆದರಬೇಕಾಗಿಲ್ಲ; ಪ್ರಜಾಪ್ರಭುತ್ವವನ್ನು ನಾಶಪಡಿಸಿದವರನ್ನು ನ್ಯಾಯದ ಮುಂದೆ ತರಲಾಗುವುದು’ ಎಂದರು.

‘ಮೋದಿ ಈಗ ಅಸ್ತಿತ್ವಕ್ಕೆ ಹೋರಾಡುತ್ತಿದ್ದಾರೆ. ಅವರ ವಿರೋಧಿ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿದೆ. ಸಮಸ್ಯೆ ಎಂದರೆ ತಮ್ಮ ಗೇಮ್ ಮುಗಿದಿದೆ ಎಂದು ಮೋದಿ ಅರ್ಥಮಾಡಿಕೊಂಡಿಲ್ಲ’ ಎಂದರು.

ದೆಹಲಿ ಜಿರಳೆ ಪ್ರತಿಭಟನೆ ಪ್ರಸ್ತಾಪಿಸಿದ ಅವರು, ‘ಇಡೀ ದೆಹಲಿ ಬಂದ್ ಆಗಿದೆ. ಪೊಲೀಸರು ಮತ್ತು ಬಿಜೆಪಿಯ ‘ಗೂಂಡಾಗಳು’ ವಿದ್ಯಾರ್ಥಿಗಳನ್ನು ಹೊಡೆಯುತ್ತಿದ್ದಾರೆ’ ಎಂದರು.

ತಮಿಳುನಾಡಿನ ಬಗ್ಗೆ ಮಾತನಾಡುತ್ತಾ ‘ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸದ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆದಿದೆ. ಮೋದಿ ಅವರು ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸದ ಮೇಲೆ ದಾಳಿ ಮಾಡಲು ನಾವು ಅನುಮತಿಸುವುದಿಲ್ಲ’ ಎಂದರು.

“ಸಂವಿಧಾನವು ಪ್ರಶ್ನೆ ಕೇಳುವ ನಿಮ್ಮ ಹಕ್ಕನ್ನು ರಕ್ಷಿಸುತ್ತದೆ

“ಸಂವಿಧಾನವು ಪ್ರಶ್ನೆ ಕೇಳುವ ನಿಮ್ಮ ಹಕ್ಕನ್ನು ರಕ್ಷಿಸುತ್ತದೆ. ಮತದಾನವು ಅಧಿಕಾರದಲ್ಲಿರುವವರಿಂದ ಉತ್ತರ ಪಡೆಯಲು ನಿಮಗೆ ಅವಕಾಶ ನೀಡುತ್ತದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಸಂವಿಧಾನದ ಅಡಿಪಾಯವನ್ನು ನಾಶಪಡಿಸುತ್ತಿದ್ದಾರೆ. ಪ್ರಶ್ನೆ ಕೇಳುವುದು ಪ್ರಗತಿಯ ಅಡಿಪಾಯ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆಗಳ ಪ್ರತಿಭಟನೆ: ಸಾರ್ವಜನಿಕರಿಗೆ ಪರದಾಟ
ಕೇಜ್ರಿ, ದೀದಿ ಸೇರಿ 4 ಮಾಜಿ ಸಿಎಂಗಳು ವಶಕ್ಕೆ