- ಜಿರಳೆ ದಹನ ಧರ್ಮಬಾಹಿರ, ರಾಜಕೀಯ: ಜನರ ಕಿಡಿ
============ನವದೆಹಲಿ: ದೇಶದಲ್ಲಿ ಜಿರಳೆ ಪಕ್ಷ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷದ ನಡುವೆಯೇ ದಸರಾ ಅಂಗವಾಗಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ರಾವಣನ ಜತೆಗೆ 30 ಅಡಿ ಜಿರಳೆ ದಹನ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಈ ರೀತಿಯ ರಾಜಕೀಯ ಸಲ್ಲದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಂಘಟಕ ಹಾಗೂ ಬಿಜೆಪಿ ಶಾಸಕ ಅಶೋಕ್ ಗೋಯೆಲ್ ಸ್ಪಷ್ಟನೆ ನೀಡಿ, ‘ಜಿರಳೆ ಅಸ್ವಚ್ಛತೆಯ ಸಂಕೇತ. ಹೀಗಾಗೇ ಅದನ್ನೂ ಅಸುರ ಎಂದು ಪರಿಗಣಿಸಿ ರಾವಣನ ಜತೆ ದಹನ ಮಾಡಲಾಗುವುದು. ಇದರಲ್ಲಿ ರಾಜಕೀಯವಿಲ್ಲ’ ಎಂದಿದ್ದಾರೆ.ಬಿಜೆಪಿ ಶಾಸಕ ಅಶೋಕ್ ಗೋಯೆಲ್ ಅವರ ನೇತೃತ್ವದ ಶ್ರೀ ಕೇಶವ ರಾಮಲೀಲಾ ಸಮಿತಿಯು ರಾವಣ, ಕುಂಭಕರ್ಣ ಮೇಘನಂದನ ದಹನದ ಜತೆಗೆ ಈ ಬಾರಿ 30 ಅಡಿಯ ಜಿರಳೆ ದಹನವನ್ನೂ ಮಾಡುವುದಕ್ಕೆ ಮುಂದಾಗಿದೆ.
ಆದರೆ ಇದಕ್ಕೆ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ‘ದಸರಾವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವನ್ನು ತೋರಿಸುತ್ತದೆ. ಇಂತಹ ಸಂಪ್ರದಾಯವನ್ನು ರಾಜಕೀಯವಾಗಿ ಏಕೆ ಬದಲಿಸಬೇಕು? ರಾವಣನನ್ನು ಸಿಜೆಪಿಗೆ ಹೋಲಿಸುವುದರಿಂದ ಹಿಂದೂಗಳ ಭಾವನೆಗೆ ನೋವುಂಟು ಮಾಡಬಹುದು’ ಎಂದಿದ್ದಾರೆಇದಕ್ಕೆ ಶಾಸಕ ಗೋಯೆಲ್ ಸ್ಪಷ್ಟನೆ ನೀಡಿದ್ದು, ‘ ಇದು ರಾಜಕೀಯ ಪ್ರೇರಿತವಲ್ಲ. ಸ್ವಚ್ಛತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜತೆಗೆ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂದೇಶವನ್ನು ಸಾರುವ ಉದ್ದೇಶ ಹೊಂದಿದೆ, ಜಿರಳೆಯು ಕೊಳಕಿನ ಸಂಕೇತ. ಸ್ವಚ್ಛ ಭಾರತ, ಸ್ವಚ್ಛ ದೆಹಲಿ ಅಭಿಯಾನಗಳಡಿಯಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ’ ಎಂದಿದ್ದಾರೆ.