ಪೂಜಾ ಸಮಿತಿ ಮುಖ್ಯಸ್ಥ ಬಂಧನ । ಎಸ್ಐಟಿ ತನಿಖೆಗೆ ಸಿಎಂ ಆದೇಶ
ಗಾಯಾಳುಗಳ ಭೇಟಿಯಾದ ಅಮಿತ್ ಶಾ
ಮಳೆಯಿಂದ ರಕ್ಷಣೆಗಾಗಿ ಪಂಡಾಲ್ನ ಹೊರಗಿದ್ದವರು ಒಳಗೆ ನುಗ್ಗಿದ ಕಾರಣ ಕಾಲ್ತುಳಿತ ಸಂಭವಿಸಿತ್ತು. ಘಟನೆಯ ಬೆನ್ನಲ್ಲೇ ಪೊಲೀಸರು 14 ಜನರನ್ನು ವಶಕ್ಕೆ ಪಡೆದಿದ್ದರು. ಅವರ ಪೈಕಿ ಇದ್ದ ಪೂಜಾ ಸಮಿತಿಯ ಕಾರ್ಯದರ್ಶಿ ರಾಜ್ಕುಮಾರ್ ಸಿಯೋದಾ, ಉಪಾಧ್ಯಕ್ಷರು ಶಾಂತನು ದುಬೆ, ಪಂಡಾಲ್ನಲ್ಲಿ ಬಿದಿರಿನ ರಚನೆ ಅಳವಡಿಸಿದರು ಸೇರಿದಂತೆ 7 ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಐಡಿ ಪ್ರಧಾನಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಅಧಿಕಾರಿ, ‘ತನಿಖೆಗೆ ಎಸ್ಐಟಿ ರಚಿಸಲಾಗಿದ್ದು, ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಅನುಮತಿಸಿದರೆ, ಹಾಲಿ ನ್ಯಾಯಮೂರ್ತಿಯೊಬ್ಬರನ್ನು ಈ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು. ಇಲ್ಲದಿದ್ದರೆ, ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸುತ್ತೇವೆ’ ಎಂದರು.
ಜತೆಗೆ ಮೃತರ ಮನೆಗಳಿಗೆ ಭೇಟಿ ನೀಡಿ 25 ಲಕ್ಷ ರು. ಪರಿಹಾರ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.
ಗಾಯಾಳುಗಳ ಭೇಟಿಯಾದ ಶಾ:
===
- ಘೋಷಣೆ ಮಾಡಿದವನ ಪತ್ತೆಗೆ ಪೊಲೀಸ್ ಬಲೆ--ಪ್ರತ್ಯಕ್ಷದರ್ಶಿ ಹೇಳಿದ್ದೇನು?ಕಾಲ್ತುಳಿತಕ್ಕೆ ದಿಢೀರ್ ಮಳೆ, ನಿರ್ವಹಣೆ ಕೊರತೆ ಕಾರಣ
ಆ್ಯಂಬುಲೆನ್ಸ್ ಬರಲೂ ಜಾಗ ಇರ್ಲಿಲ್ಲ: ಪ್ರತ್ಯಕ್ಷದರ್ಶಿ---ಕೋಲ್ಕತಾ: ದುರ್ಗಾ ಪೆಂಡಾಲ್ ಕಾಲ್ತುಳಿತದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಘಟನೆಯ ಮುಖ್ಯ ಕಾರಣ ಗೊತ್ತಾಗಿದೆ. ‘ಪೆಂಡಾಲ್ ಕುಸಿಯುತ್ತಿದೆ’ ಎಂದು ಪೆಂಡಾಲ್ನಲ್ಲಿದ್ದ ಮೈಕ್ ಮೂಲಕ ವ್ಯಕ್ತಿಯೊಬ್ಬರು ಘೋಷಣೆ ಕೂಗಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ತಿಳಿದುಬಂದಿದೆ.ಪೆಂಡಾಲ್ನ ವಿಡಿಯೋ ಒಂದು ಲಭ್ಯವಾಗಿದ್ದು, ಅದರಲ್ಲಿ ಯಾರೋ ಒಬ್ಬರು ಮೈಕ್ ಮೂಲಕ ‘ಪೆಂಡಾಲ್ ಕುಸಿಯುತ್ತಿದೆ. ಇಲ್ಲಿಂದ ಜನರು ಕೂಡಲೇ ಹೊರಡಬೇಕು’ ಎಂದು ಕೂಗುತ್ತಿರುವುದು ಕೇಳಿಸಿದೆ. ಆ ಘೋಷಣೆ ಮಾಡಿದವರನ್ನು ಪತ್ತೆ ಮಾಡಲು ಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳಪೆ ನಿರ್ವಹಣೆ- ಪ್ರತ್ಯಕ್ಷದರ್ಶಿ ಕಿಡಿ:ಈ ನಡುವೆ ದುರ್ಗಾ ಪೆಂಡಾಲ್ ಕಾಲ್ತುಳಿತಕ್ಕೆ, ಜನಸಂದಣಿಯ ಕಳಪೆ ನಿರ್ವಹಣೆಯೂ ಕಾರಣ ಎಂದು ತಿಳಿದುಬಂದಿದೆ. ‘ಸುಮಾರು 700 ಮೀಟರ್ ದೂರದ ವರೆಗೆ ಜನ ಸರದಿಯಲ್ಲಿ ನಿಂತಿದ್ದರು. ಆಗ ಇದ್ದಕ್ಕಿದ್ದಂತೆ ಧೋ ಎಂದು ಮಳೆ ಸುರಿಯಲಾರಂಭಿಸಿದ್ದರಿಂದ, ಪಂಡಾಲ್ನ ಹೊರಗಿದ್ದವರೆಲ್ಲಾ ಏಕಾಏಕಿ ಒಳಗೆ ನುಗ್ಗಲಾರಂಭಿಸಿದರು. ಮನೆಯಲ್ಲಿದ್ದ ನನಗೆ, ಜನ ಚೀರಾಡುವ ಸದ್ದು ಕೇಳಲಾರಂಭಿಸಿತು. ಗಾಬರಿಗೊಂಡಿದ್ದ 4 ಹುಡುಗಿಯರಿಗೆ ನಮ್ಮ ಮನೆಯಲ್ಲೇ ಆಶ್ರಯ ಕೊಟ್ಟೆವು’ ಎಂದು ಪ್ರಮೋದ್ ಗುಪ್ತಾ ಎಂಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಘಟನೆಗೆ ಸಾಕ್ಷಿಯಾದ ಇನ್ನೊಬ್ಬ ಮಹಿಳೆ ಮಾತನಾಡಿ, ‘ಮೊದಲೇ ಸಣ್ಣದಿದ್ದ ದಾರಿಯ ಬದಿಯಲ್ಲಿ ಅಂಗಡಿಗಳನ್ನು ಹಾಕಲಾಗಿದ್ದ ಕಾರಣ ಓಡಾಡಲು ಜಾಗವಿರಲಿಲ್ಲ. ಪರಿಣಾಮ ಆ್ಯಂಬುಲೆನ್ಸ್ಗಳು ಅಲ್ಲಿಗೆ ತೆರಳಲಾಗಲಿಲ್ಲ. ಹಾಗಾಗಿ ಗಾಯಾಳುಗಳನ್ನು ಎತ್ತಿಕೊಂಡೇ ಬರಲಾಯಿತು. ಜನರನ್ನು ನಿರ್ವಹಿಸಲು ಸಾಕಷ್ಟು ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ’ ಎಂದರು.