ಫುಟ್ಪಾತ್‌ ನಿರ್ಮಿಸದಿದ್ದರೆ ನಾವೇ ಧರಣಿ ಕೂರ್ತೀವಿ: ಸುಪ್ರೀಂ ಜಡ್ಜ್‌

Published : Oct 18, 2026, 09:12 AM IST
supreme court

ಸಾರಾಂಶ

ದೆಹಲಿ ಹೈಕೋರ್ಟ್ ಸಮೀಪ ಸೂಕ್ತ ಪಾದಚಾರಿ ಮಾರ್ಗ ಹಾಗೂ ಪಾದಚಾರಿ ಕ್ರಾಸಿಂಗ್ ನಿರ್ಮಿಸದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ ಅಪರೂಪದ ಪ್ರಸಂಗ ನಡೆದಿದೆ.

ನವದೆಹಲಿ: ದೆಹಲಿ ಹೈಕೋರ್ಟ್ ಸಮೀಪ ಸೂಕ್ತ ಪಾದಚಾರಿ ಮಾರ್ಗ ಹಾಗೂ ಪಾದಚಾರಿ ಕ್ರಾಸಿಂಗ್ ನಿರ್ಮಿಸದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಮೂರ್ತಿಗಳೇ ಹೈಕೋರ್ಟ್ ಮುಖ್ಯ ಗೇಟ್ ಮುಂದೆ ಧರಣಿ ಕುಳಿತುಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ ಅಪರೂಪದ ಪ್ರಸಂಗ ನಡೆದಿದೆ.

ಹೈಕೋರ್ಟ್‌ ಬಳಿ ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ತೀವ್ರ ಆಕ್ಷೇಪ

ಹೈಕೋರ್ಟ್‌ ಬಳಿ ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾ.ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ. ಕೆ.ವಿ.ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ‘ಕೇವಲ ಸಮಿತಿಗಳನ್ನು ರಚಿಸಿದರೆ ಸಾಲದು, ಸ್ಥಳದಲ್ಲೇ ವಾಸ್ತವಿಕ ಸ್ವರೂಪದಲ್ಲಿ ಕೆಲಸಗಳು ಆಗಬೇಕಿದೆ’ ಎಂದು ಸ್ಪಷ್ಟಪಡಿಸಿತು.

ದೆಹಲಿ ಹೈಕೋರ್ಟ್‌ನ ಮುಖ್ಯ ಗೇಟ್ ಬಳಿ ಬಂದು ಕುಳಿತುಕೊಳ್ಳುತ್ತೇವೆ

ಅಲ್ಲದೆ ಹೆಚ್ಚುವರಿ ಸಾಲಿಸಿಟರ್ ಜನರ ಅವರನ್ನು ಉದ್ದೇಶಿಸಿ ‘ಮುಂದಿನ ವಿಚಾರಣಾ ದಿನಾಂಕದೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ನಾವಿಬ್ಬರೂ ಬಂದು ದೆಹಲಿ ಹೈಕೋರ್ಟ್‌ನ ಮುಖ್ಯ ಗೇಟ್ ಬಳಿ ಬಂದು ಕುಳಿತುಕೊಳ್ಳುತ್ತೇವೆ. ಕೆಲಸ ಮುಗಿಯುವವರೆಗೆ ನಾವು ಮನೆಗೂ ಹೋಗುವುದಿಲ್ಲ. ಅಲ್ಲೇ ಧರಣಿ ಕೂರುತ್ತೇವೆ. ಜೊತೆಗೆ ನಿಮಗೂ ಮನೆಗೆ ಹೋಗಲು ಬಿಡುವುದಿಲ್ಲ’ ಎಂದು ಎಚ್ಚರಿಸಿದೆ.

ಜೊತೆಗೆ, ಒಂದು ವೇಳೆ ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ವಿಫಲವಾದರೆ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನೇ ಖುದ್ದಾಗಿ ನ್ಯಾಯಾಲಯಕ್ಕೆ ಕರೆಸಲಾಗುವುದು ಎಂದು ಪೀಠವು ಎಚ್ಚರಿಕೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಿನ್ನೋ ಮುನ್ನ ಹುಷಾರ್‌! ಮೇವಿನ ಹೊಟ್ಟು ಬಳಸಿ ಬಿಸ್ಕೆಟ್‌ ,ಹಾಲಿನ ಕ್ರೀಂನಲ್ಲಿ ವಿಷಕಾರಿ ಅಂಶ
ಟೋಲ್‌ ಪ್ಲಾಜಾದಲ್ಲಿ ಕೊಳಕು ಶೌಚ ಹುಡುಕಿ ₹1000 ಗೆಲ್ಲಿ!