ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!

Published : Aug 24, 2026, 08:12 AM IST
abhijit dipke fir government school entry teachers threat latur maharashtra cjp

ಸಾರಾಂಶ

ಜೈಪುರ ಬಳಿಯ ರಾಂಪುರದ ದನದ ಕೊಟ್ಟಿಗೆಯೊಂದರಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಶಾಲೆಯೊಂದರ ದುಃಸ್ಥಿತಿಯನ್ನು ‘ಸ್ಕೂಲ್‌ ಠೀಕ್‌ ಕರೋ’ ಅಭಿಯಾನದ ಅಂಗವಾಗಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಬಿಚ್ಚಿಟ್ಟಿತ್ತು.

ಜೈಪುರ : ಜೈಪುರ ಬಳಿಯ ರಾಂಪುರದ ದನದ ಕೊಟ್ಟಿಗೆಯೊಂದರಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಶಾಲೆಯೊಂದರ ದುಃಸ್ಥಿತಿಯನ್ನು ‘ಸ್ಕೂಲ್‌ ಠೀಕ್‌ ಕರೋ’ ಅಭಿಯಾನದ ಅಂಗವಾಗಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಬಿಚ್ಚಿಟ್ಟಿತ್ತು. ಅದರ ಬೆನ್ನಲ್ಲೇ, ಅಲ್ಲಿ 18 ಲಕ್ಷ ರು. ವೆಚ್ಚದಲ್ಲಿ ಹೊಸ ಶಾಲೆ ಕಟ್ಟಡ ನಿರ್ಮಿಸುವುದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ.

ಶುಕ್ರವಾರ ಈ ಹಳ್ಳಿಗೆ ಭೇಟಿ ನೀಡಿದ್ದ ಸಿಜೆಪಿ ಕಾರ್ಯಕರ್ತರನ್ನು ಕೆಲವರು ತಡೆದು ಥಳಿಸಿದ್ದರು. ‘ಥಳಿಸಿದವರು ಬಿಜೆಪಿಗರು’ ಎಂದು ಸಿಜೆಪಿಗರು ದೂರಿದ್ದರು. ಅದಾದ ಮರುದಿನವೇ ಹೊಸ ಶಾಲೆ ನಿರ್ಮಾಣದ ಘೋಷಣೆಯಾಗಿದೆ.

ಇದಕ್ಕೆ ಸಿಜೆಪಿ ವಕ್ತಾರ ಆಶುತೋಷ್‌ ರಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ. ‘ನಾವು ಮತ ಕೇಳಲು ಹೋಗಿರಲಿಲ್ಲ. ಬದಲಿಗೆ ಶಾಲೆಯನ್ನು ಸರಿ ಮಾಡುವಂತೆ ಆಗ್ರಹಿಸಲು ಹೋಗಿದ್ದೆವು. ಇದೀಗ ನಾವು ನೀಡಿದ್ದ 2 ದಿನಗಳ ಸಮಯಾವಕಾಶದೊಳಗೆ ಸೆ.1ರಿಂದ ಕೆಲಸ ಆರಂಭಿಸುವುದಾಗಿ ಸರ್ಕಾರ ಹೇಳಿದೆ’ ಎಂದಿದ್ದಾರೆ.

ಜತೆಗೆ, ‘ಸರ್ಕಾರಕ್ಕೆ ಮಕ್ಕಳ ಭವಿಷ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಶಾಲೆಗಳನ್ನು ದುರಸ್ತಿ ಮಾಡಿಸಲಿ’ ಎಂದಿದ್ದು, ಶಾಲೆಗಳಿಗೆ ಭೇಟಿ ನೀಡಿ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಅಂತೆಯೇ, ಸುಮಾರು 3 ಸಾವಿರ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, 611 ಶಾಲೆಗಳು ಕಟ್ಟಡಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಹೇಳಿದ್ದೇನು?:

2025ರ ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ ರಾಂಪುರ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಪತ್ತೆಯಾದ ಕಾರಣ ಆ ಕಟ್ಟಡದ ಬಳಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಆ ಶಾಲೆ ದೂರವಾಗುತ್ತದೆ ಎಂಬ ಕಾರಣ ನೀಡಿ ಗ್ರಾಮಸ್ಥರು ಅದನ್ನು ವಿರೋಧಿಸಿದ್ದರು. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಶಾಲೆ ನಡೆಸಲಾಗುತ್ತಿತ್ತು.

- ಜೈಪುರ ಬಳಿಯ ರಾಂಪುರದ ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡಿದ್ದರಿಂದ ಸ್ಥಳಾಂತರಿಸಲು ಸರ್ಕಾರ ನಿರ್ಧಾರ

- ಶಾಲೆ ದೂರವಾಗುತ್ತದೆ ಎಂದು ಗ್ರಾಮಸ್ಥರ ವಿರೋಧ. ಹೀಗಾಗಿ ದನದ ಕೊಟ್ಟಿಗೆಗೆ ಸ್ಥಳಾಂತರಗೊಂಡಿದ್ದ ಶಾಲೆ

- ಸ್ಕೂಲ್‌ ಠೀಕ್‌ ಕರೋ ಅಭಿಯಾನದ ಭಾಗವಾಗಿ ಜಿರಳೆ ಪಕ್ಷದ ಕಾರ್ಯಕರ್ತರಿಂದ ಕೊಟ್ಟಿಗೆ ಶಾಲೆ ವಿರುದ್ಧ ಹೋರಾಟ

- ಸರ್ಕಾರಕ್ಕೆ 2 ದಿನ ಗಡುವು ನೀಡಿದ್ದ ಜಿರಳೆ ಪಕ್ಷ. ಈಗ ಅದೇ ಗ್ರಾಮದಲ್ಲಿ ಹೊಸ ಕಟ್ಟಡ ನಿರ್ಮಾಣ: ಸರ್ಕಾರ ಘೋಷಣೆ

- ಜಿರಳೆ ಜನತಾ ಪಕ್ಷದ ಹೋರಾಟಕ್ಕೆ ಜಯ. ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದ ಮುಖಂಡರು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!
ದೇಶಕ್ಕೆ ಇನ್ನೂ 2 ತಿಂಗಳು ಷುಗರ್‌ ಪ್ರಾಬ್ಲಂ ಸಾಧ್ಯತೆ