ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು

KannadaprabhaNewsNetwork |  
Published : Jan 11, 2026, 02:00 AM IST
Congress

ಸಾರಾಂಶ

ಯುಪಿಎ ಅವಧಿಯ ಮನರೇಗಾ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್‌ ದೇಶಾದ್ಯಂತ 45 ದಿನಗಳ ಹೋರಾಟಕ್ಕೆ ಶನಿವಾರ ಚಾಲನೆ ನೀಡಿದೆ.

ನವದೆಹಲಿ: ಯುಪಿಎ ಅವಧಿಯ ಮನರೇಗಾ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್‌ ದೇಶಾದ್ಯಂತ 45 ದಿನಗಳ ಹೋರಾಟಕ್ಕೆ ಶನಿವಾರ ಚಾಲನೆ ನೀಡಿದೆ. ಇದರ ಭಾಗವಾಗಿ ಶನಿವಾರ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿಯನ್ನು ನಡೆಸಿದೆ. 

ಹೋರಾಟವನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ

ಈ ಕುರಿತು ಎಕ್ಸ್‌ನಲ್ಲಿ ಹೋರಾಟದ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಮೋದಿ ಸರ್ಕಾರವು ಮನರೇಗ ಯೋಜನೆಯನ್ನು ಕೆಡವಿ ಕಸಿದುಕೊಂಡಿರುವ ಕೆಲಸ ಮಾಡುವ ಹಕ್ಕು, ಜೀವನೋಪಾಯ ಮ ತ್ತು ಹೊಣೆಗಾರಿಕೆಯನ್ನು ಪುನಃಸ್ಥಾಪಿಸುವವರೆಗೆ ಈ ಹೋರಾಟವನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ’ ಎಂದು ಉದ್ಘೋಷಿಸಿದ್ದಾರೆ.

ಜ.12ರಿಂದ ಫೆ.25ರವರೆಗೆ ಹೋರಾಟ:

ಹೋರಾಟದ ಹಾದಿಯು ಜ.12ರಿಂದ ಆರಂಭವಾಗಲಿದೆ. ಜ.12ರಿಂದ ಜ.29ರವರೆಗೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಣ್ಣ ಸಣ್ಣ ಸಭೆ, ಸಮಾವೇಶಗಳನ್ನು ನಡೆಸಲಾಗುತ್ತದೆ. ಜ.30ರಂದು ವಾರ್ಡ್‌ ಮಟ್ಟದಲ್ಲಿ ಶಾಂತಿಯುತ ಸಭೆ ನಡೆಯಲಿದೆ. ಇದಾದ ನಂತರ ಫೆ.7ರಿಂದ 15ರವರೆಗೆ ರಾಜ್ಯ ಮಟ್ಟದಲ್ಲಿ ವಿಧಾನಸಭಾ ಘೇರಾವ್‌ಗಳನ್ನು ಪಕ್ಷ ಆಯೋಜಿಸಲಿದೆ. ಫೆ.16ರಿಂದ ಫೆ.25ರವರೆಗೆ ದೇಶಾದ್ಯಂತ 4 ದೊಡ್ಡ ರ್‍ಯಾಲಿ ನಡೆದು ಪ್ರತಿಭಟನೆ ಸಮಾರೋಪ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!