ಕಾಂಗ್ರೆಸ್‌ ಪರ ಉಗ್ರ ಮೂಸಾ ಪ್ರಚಾರ: ಬಿಜೆಪಿ ಆರೋಪ

KannadaprabhaNewsNetwork |  
Published : May 11, 2024, 12:00 AM ISTUpdated : May 11, 2024, 05:17 AM IST
ಮೂಸಾ | Kannada Prabha

ಸಾರಾಂಶ

ಮಹಾರಾಷ್ಟ್ರದ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಒಕ್ಕೂಟ ಎಂವಿಎ ತನ್ನ ಅಭ್ಯರ್ಥಿ ಪರ 1993 ಮುಂಬೈ ಸ್ಫೋಟದ ರೂವಾರಿ ಉಗ್ರ ಮೂಸಾನನ್ನು ಪ್ರಚಾರಕ್ಕೆ ಇಳಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ.

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಒಕ್ಕೂಟ ಎಂವಿಎ ತನ್ನ ಅಭ್ಯರ್ಥಿ ಪರ 1993 ಮುಂಬೈ ಸ್ಫೋಟದ ರೂವಾರಿ ಉಗ್ರ ಮೂಸಾನನ್ನು ಪ್ರಚಾರಕ್ಕೆ ಇಳಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಇದರ ವಿಡಿಯೋವನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸೇರಿ ಹಲವು ಬಿಜೆಪಿಗರು ಹಂಚಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ.

‘ಕಾಂಗ್ರೆಸ್‌ ಆತಂಕವಾದಿಗಳ ಜೊತೆ ಕೈ ಜೋಡಿಸಿದೆ. ಅದಕ್ಕಾಗಿ 1993ರಲ್ಲಿ 257 ಜನರನ್ನು ಬಲಿ ಪಡೆದ ಮುಂಬೈ ಸ್ಫೋಟದ ಆರೋಪಿ ಉಗ್ರ ಇಕ್ಬಾಲ್‌ ಮೂಸಾನನ್ನು ತನ್ನ ವಾಯವ್ಯ ಮುಂಬೈ ಅಭ್ಯರ್ಥಿ ಅಮೋಲ್‌ ಕೀರ್ತಿಕರ್‌ ಪರ ಪರ ಪ್ರಚಾರಕ್ಕೆ ಇಳಿದಿದೆ’ ಎಂದು ಆಪಾದಿಸಿದ್ದಾರೆ.

ನಾವು ಕಸಬ್‌ ವಿರುದ್ಧ ಹೋರಾಡಿದ ವಕೀಲರನ್ನು ಕಣಕ್ಕಿಸಿದ್ದನ್ನು ಟೀಕಿಸಿದ ಕಾಂಗ್ರೆಸ್‌ ಈಗ ಉಗ್ರನನ್ನು ಪ್ರಚಾರಕ್ಕೆ ಇಳಿಸಿದೆ. 2024ರ ಈ ಚುನಾವಣೆ ನಿಜವಾಗಿಯೂ ಬಿಜೆಪಿಯ ರಾಷ್ಟ್ರ ಸುರಕ್ಷೆ ಹಾಗೂ ಇಂಡಿಯಾ ಒಕ್ಕೂಟದ ವೋಟ್‌ ಬ್ಯಾಂಕ್‌ ಜಿಹಾದ್‌ ನಡುವಿನದ್ದಾಗಿದೆ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌