ಮಾಧುರಿ ದೀಕ್ಷಿತ್‌ 2 ನೇ ದರ್ಜೆ ನಟಿ : ಕಾಂಗ್ರೆಸ್‌ ಶಾಸಕ ಟಿಕಾರಾಮ್ ಕೀಳು ಹೇಳಿಕೆ

KannadaprabhaNewsNetwork |  
Published : Mar 14, 2025, 01:32 AM ISTUpdated : Mar 14, 2025, 05:08 AM IST
iifa awards 2025 jaipur madhuri dixit bollywood actress fees gender pay gap women empowerment

ಸಾರಾಂಶ

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಶಾಸಕ ಟಿಕಾರಾಮ್ ಜುಲ್ಲೆ ‘ನಟಿ ಮಾಧುರಿ ದೀಕ್ಷಿತ್‌ ಅವರನ್ನು ಎರಡನೇ ದರ್ಜೆ ಗ್ರೇಡ್‌ ನಟಿ’ ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ.

ಜೈಪುರ: ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಶಾಸಕ ಟಿಕಾರಾಮ್ ಜುಲ್ಲೆ ‘ನಟಿ ಮಾಧುರಿ ದೀಕ್ಷಿತ್‌ ಅವರನ್ನು ಎರಡನೇ ದರ್ಜೆ ಗ್ರೇಡ್‌ ನಟಿ’ ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. 

ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಅವರು ಈ ರೀತಿ ಹೇಳಿದ್ದಾರೆ. ‘ಐಫಾದಿಂದ ನಾವು ಯಾವ ಪ್ರಯೋಜನವನ್ನು ಪಡೆದಿದ್ದೇವೆ? ಎಷ್ಟು ದೊಡ್ಡ ನಟ- ನಟಿಯರು ಪಾಲ್ಗೊಂಡಿದ್ದಾರೆ. ಅವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆಯೇ? ಅವರು ಯಾವುದೇ ಸ್ಥಳಗಳಿಗೆ ಹೋಗಿಲ್ಲ. ಶಾರುಖ್‌ ಹೊರತುಪಡಿಸಿ ಬೇರೆ ಯಾವ ದೊಡ್ಡ ನಟರು ಬಂದಿಲ್ಲ.

 ಅಲ್ಲಿ ಬಂದಿದ್ದವರು ಸೆಕೆಂಡ್‌ ಗ್ರೇಡ್‌ ಕಲಾವಿದರು’ ಎಂದಿದ್ದಾರೆ. ಮುಂದುವರೆದಂತೆ,‘ ದಿಲ್ ಮತ್ತು ಬೆಟಾದಂತಹ ಸಿನಿಮಾಗಳಿಂದ ಮಾಧುರಿ ದೀಕ್ಷಿತ್‌ ದೊಡ್ಡ ನಟಿಯಾಗಿದ್ದರು.ದಿಲ್ಲಿಯ ಹೋಟೆಲ್‌ನಲ್ಲಿ ಬ್ರಿಟನ್ ಮಹಿಳೆ ಮೇಲೆ ರೇಪ್‌: ಇಬ್ಬರ ಬಂಧನನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಸ್ನೇಹಿತ ಮತ್ತು ಹೋಟೆಲ್‌ ಸಿಬ್ಬಂದಿ ಸೇರಿಕೊಂಡು ಬ್ರಿಟನ್‌ ಮಹಿಳೆ ಮೇಲೆ ಹೋಟೆಲ್‌ನಲ್ಲಿ ಅತ್ಯಾಚಾರ ನಡೆಸಿದ ಹೇಯ ಕೃತ್ಯ ದೆಹಲಿಯ ಮಹಿಪಾಲ್ಪುರದಲ್ಲಿ ನಡೆದಿದೆ. 

ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.ಕಳೆದ ತಿಂಗಳು ಭಾರತಕ್ಕೆ ಬಂದಿದ್ದ ಬ್ರಿಟನ್ ಮಹಿಳೆ ಕೆಲ ಸಮಯ ಮಹಾರಾಷ್ಟ್ರ, ಬಳಿಕ ಗೋವಾದಲ್ಲಿ ತಂಗಿದ್ದರು. ಅನಂತರ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಪೂರ್ವ ದೆಹಲಿಯ ನಿವಾಸಿ ಕೈಲಾಶ್‌ ಎಂಬಾತನ ಭೇಟಿಗಾಗಿ ದೆಹಲಿಗೆ ಬಂದಿದ್ದ ಆಕೆ ಮಹಿಪಾಲ್ಪುರದ ಹೋಟೆಲ್‌ನಲ್ಲಿ ರೂಮ್ ಮಾಡಿದ್ದರು. ಈ ಸಂದರ್ಭ ಬುಧವಾರ ಹೋಟೆಲ್‌ನ ಲಿಫ್ಟ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿ, ಆ ಬಳಿಕ ಹೋಟೆಲ್ ಕೊಠಡಿಯಲ್ಲಿ ಕೈಲಾಶ್‌ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಛತ್ತೀಸಗಡ: ₹ 24 ಲಕ್ಷ ಇನಾಮು ಹೊಂದಿದ್ದ 17 ನಕ್ಸಲರು ಶರಣು

ಬಿಜಾಪುರ: ನಕ್ಸಲರ ವಿರುದ್ಧ ಛತ್ತೀಸಗಡದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ತಲೆಗೆ 24 ಲಕ್ಷ ರು. ಇನಾಮು ಹೊಂದಿದ್ದ 9 ಮಾವೋವಾದಿಗಳು ಸೇರಿದಂತೆ ಒಟ್ಟು 17 ನಕ್ಸಲರು ಬಿಜಾಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. 

ಶರಣಾದ ಎಲ್ಲಾ ನಕ್ಸಲರು ನಿಷೇಧಿತ ಮಾವೋವಾದಿ ಸಂಘಟನೆಯ ಗಂಗಲೂರು ಪ್ರದೇಶ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ಶರಣಾದವರಲ್ಲಿ ಬಿಜಾಪುರ ಜಿಲ್ಲೆಯಲ್ಲಿ 26 ಪ್ರಕರಣಗಳಲ್ಲಿ ಬೇಕಾಗಿದ್ದ, ತಲೆಗೆ 8 ಲಕ್ಷ ರು. ಇನಾಮು ಹೊಂದಿದ್ದ ಮಾವೋವಾದಿ ದಿನೇಶ್‌ ಮೋದಿಯಂ ಕೂಡ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಜಿಲ್ಲೆಯಲ್ಲಿ 65 ನಕ್ಸಲರು ಶರಣಾಗಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 792 ನಕ್ಸಲರು ಶರಣಾಗಿದ್ದರು.

ಒಡಿಶಾ: 2 ವರ್ಷದಲ್ಲಿ ಹಾವು ಕಡಿತ ಕೇಸಿಗೆ 1859 ಜನರ ಸಾವು

ಭುವನೇಶ್ವರ: 2023-34 ಮತ್ತು 2024-25ರ ಅವಧಿಯಲ್ಲಿ ಒಡಿಶಾದಲ್ಲಿ ಒಟ್ಟು 1859 ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವಾಲಯ ವಿಧಾನಸಭೆಗೆ ಮಾಹಿತಿ ನೀಡಿದೆ. ಸಚಿವ ಸುರೇಶ್‌ ಪೂಜಾರಿ ವಿಧಾನಸಭೆಗೆ ಈ ಮಾಹಿತಿ ನೀಡಿದ್ದು, ‘ಪ್ರಾಥಮಿಕ ವರದಿಯ ಪ್ರಕಾರ 2023-24ರಲ್ಲಿ 1150 ಜನರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. 709 ಮಂದಿ 2024-25ರಲ್ಲಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ’ ಎಂದಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಟಕ್‌ (161), ಗಂಜಮ್ (155), ಬಾಲಾಸೋರ್‌ (139), ಕಿಯೋಜಾರ್‌ (132), ಸುಂದರಗಢ (102) ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸಿದೆ. ಗಜಪತಿ ಜಿಲ್ಲೆಯಲ್ಲಿ ಅತಿ ಕನಿಷ್ಟ ಸಾವಾಗಿದೆ.

ಸಂಭಲ್‌ ದೇಗುಲದಲ್ಲಿ 46 ವರ್ಷಗಳ ಬಳಿಕ ಸಂಭ್ರಮದ ಹೋಳಿಸಂಭಲ್‌ (ಉತ್ತರ ಪ್ರದೇಶ): ನಗರದ ಖಗ್ಗು ಸರೈ ಪ್ರದೇಶದಲ್ಲಿಯ ಕಾರ್ತಿಕೇಯ ಮಹಾದೇವ ದೇಗುಲದಲ್ಲಿ 46 ವರ್ಷಗಳ ಬಳಿಕ ತೀವ್ರ ಭದ್ರತೆಯ ನಡುವೆ ಭಕ್ತರು ಗುರುವಾರ ಹೋಳಿ ಹಬ್ಬ ಆಚರಿಸಿದರು. 1978ರ ಗಲಭೆಯ ನಂತರ ಮುಚ್ಚಿದ್ದ ಶಿವನ ದೇಗುಲ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮತ್ತೆ ತೆರೆದಿತ್ತು. ದಶಕಗಳ ನಂತರದ ಮೊದಲ ಹೋಲಿಯಲ್ಲಿ ದೇವಾಲಯದ ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಉತ್ಸಾಹದಿಂದ ಪಾಲ್ಗೊಂಡವು. ‘ಸುಲಲಿತ ಆಚರಣೆಗೆ ದೇವಾಸ್ಥನದಲ್ಲಿ ಸಾಕಷ್ಟು ಪೊಲೀಸ್‌ ಪಡೆ ನಿಯೋಜಿಸಲಾಗಿತ್ತು’ ಎಂದು ಪೊಲೀಸ್‌ ಅಧಿಕಾರಿ ಶ್ರೀಷ್‌ ಚಂದ್ರ ಹೇಳಿದ್ದಾರೆ. ದೇಗುಲ ಶಾಹಿ ಜಾಮಾ ಮಸೀದಿ ಸನಿಹದಲ್ಲಿದೆ. ಇದು ಕೋಮು ಹಿಂಸಾಚಾರದ ಕೇಂದ್ರವೂ ಆಗಿತ್ತು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ