‘ಗಾಂಧೀಜಿ ಕುರಿತ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಸಾರಾಂಶ

ಮಹಾತ್ಮ ಗಾಂಧಿಯವರ ಕುರಿತು 1982ರಲ್ಲಿ ಚಲನಚಿತ್ರ ಬಿಡುಗಡೆಯಾದ ಬಳಿಕವಷ್ಟೇ ಅವರ ಸಾಧನೆ ಬಗ್ಗೆ ಜಗತ್ತಿಗೆ ಪರಿಚಯವಾಯ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿಕಾರಿದೆ.

ನವದೆಹಲಿ: ಮಹಾತ್ಮ ಗಾಂಧಿಯವರ ಕುರಿತು 1982ರಲ್ಲಿ ಚಲನಚಿತ್ರ ಬಿಡುಗಡೆಯಾದ ಬಳಿಕವಷ್ಟೇ ಅವರ ಸಾಧನೆ ಬಗ್ಗೆ ಜಗತ್ತಿಗೆ ಪರಿಚಯವಾಯ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿಕಾರಿದೆ.

ಗಾಂಧೀ ಕುರಿತು ತಿಳಿಯಲು, ಜೂ.4ರ ನಂತರ ಬಿಡುವಾದಾಗ ಗಾಂಧಿ ಆತ್ಮಚರಿತ್ರೆ ಓದಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಟಾಂಗ್ ನೀಡಿದ್ದರೆ, ಆರ್‌ಎಸ್‌ಎಸ್‌ನಲ್ಲಿ ತರಬೇತಿ ಪಡೆದವರೆಲ್ಲ ಗೋಡ್ಸೆ ಅನುಯಾಯಿಗಳು ಎಂದು ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.

ಒಡಿಶಾದ ಬಾಲಾಸೋರ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್‌ ಗಾಂಧಿ, ‘ಯಾರೆಲ್ಲಾ ಆರ್‌ಎಸ್‌ಎಸ್‌ ಶಾಖೆಯಲ್ಲಿ ತರಬೇತಿ ಪಡೆದಿದ್ದಾರೋ ಅವರೆಲ್ಲರೂ ಗೋಡ್ಸೆ ಅನುಯಾಯಿಗಳು. ಅವರಿಗೆ ಗಾಂಧೀಜಿ ಬಗ್ಗೆ ಏನು ತಿಳಿದಿಲ್ಲ. ಅದರಂತೆ ಪ್ರಧಾನಿ ಮೋದಿ ಅವರಿಗೂ ಸಹ ಗಾಂಧೀಜಿ ಬಗ್ಗೆ ಏನೂ ಗೊತ್ತಿಲ್ಲ. ಅವರ ಜಗತ್ತು ಶಾಖೆಗೆ ಸೀಮಿತ .ಗಾಂಧೀಜಿಯವರ ತತ್ವಗಳನ್ನು ಪ್ರಪಂಚದ ಹಲವಾರು ದಾರ್ಶನಿಕರು, ತತ್ವಜ್ಞಾನಿಗಳು ಒಪ್ಪಿಕೊಂಡು ಚಳುವಳಿಗಳಲ್ಲಿ ಬಳಸಿಕೊಂಡಿದ್ದಾರೆ. ಅವರ ಆದರ್ಶಗಳಿಂದ ಭಾರತದ ಮಕ್ಕಳು ಸ್ಪೂರ್ತಿ ಪಡೆದಿದ್ದಾರೆ.ಅಲ್ಲದೇ ಜೂನಿಯರ್‌ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮತ್ತು ಐನ್‌ಸ್ಟೈನ್ ನಂತಹ ಹಲವಾರು ಮಂದಿ ಮಹಾತ್ಮ ಗಾಂಧೀಜಿ ತತ್ವಗಳಿಂದ ಸ್ಫೂರ್ತಿ ಪಡೆದುಕೊಂಡಿದ್ದರು’ ಎಂದು ತಿರುಗೇಟು ನೀಡಿದ್ದಾರೆ.

ಖರ್ಗೆ ಕೂಡ ಮೋದಿ ಮಾತಿಗೆ ಕಿಡಿ ಕಾರಿದ್ದು, ‘ ಮೋದಿ ಅಥವಾ ಬಿಜೆಪಿಯ ಯಾರಾದರೂ ಅಜ್ಞಾನಿಗ

Share this article