ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ : ಎಲ್‌ಪಿಜಿ ದರ ಹೆಚ್ಚಳ : ಎಷ್ಟಾಯ್ತು ಏರಿಕೆ ?

KannadaprabhaNewsNetwork |  
Published : Apr 08, 2025, 01:45 AM ISTUpdated : Apr 08, 2025, 05:02 AM IST
ಸಿಲಿಂಡರ್‌ | Kannada Prabha

ಸಾರಾಂಶ

ಅಗತ್ಯ ವಸ್ತುಗಳ ದರ ಹೆಚ್ಚಳದ ನಡುವೆಯೇ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅಡುಗೆ ಅನಿಲದ ದರವನ್ನು 50 ರು.ಗೆ ಏರಿಕೆ ಮಾಡಿ ಕೇಂದ್ರ ಆದೇಶಿಸಿದೆ. ಇದು ಸಾಮಾನ್ಯ ಸಿಲಿಂಡರ್‌ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ.

 ನವದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಳ ಮಾಡಿದೆ. ಆದರೆ ಈ ಏರಿಕೆಯನ್ನು ತೈಲ ಕಂಪನಿಗಳ ಭರಿಸುವ ಕಾರಣ, ಗ್ರಾಹಕರಿಗೆ ವಿತರಿಸುವ ದರದಲ್ಲಿ ಯಾವುದೇ ಬದಲಾವಣೆ ಇರದು.

 ನವದೆಹಲಿ: ಅಗತ್ಯ ವಸ್ತುಗಳ ದರ ಹೆಚ್ಚಳದ ನಡುವೆಯೇ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅಡುಗೆ ಅನಿಲದ ದರವನ್ನು 50 ರು.ಗೆ ಏರಿಕೆ ಮಾಡಿ ಕೇಂದ್ರ ಆದೇಶಿಸಿದೆ. ಇದು ಸಾಮಾನ್ಯ ಸಿಲಿಂಡರ್‌ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ.

ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದು, ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ. ಹೊಸ ದರದ ಅನ್ವಯ 14.2 ಕೇಜಿ ಅಡುಗೆ ಅನಿಲದ ದರ ₹803 ರಿಂದ ₹ 853ಕ್ಕೆ ಏರಿಕೆಯಾಗಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ₹ 503 ರಿಂದ ₹553ಕ್ಕೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ.

ಇನ್ನೊಂದೆಡೆ ದಿಲ್ಲಿ ಸೇರಿ ಹಲವು ನಗರಗಳಲ್ಲಿ ಸಿಎನ್‌ಜಿ ದರವನ್ನು 1 ಕೇಜಿಗೆ 2 ರು. ಹೆಚ್ಚಿಸಿದೆ. ಇದರಿಂದ ಸಿಎನ್‌ಜಿ ದರ 75.09 ರು.ಗೆ ಏರಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ