ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ

KannadaprabhaNewsNetwork |  
Published : Jun 27, 2026, 12:30 AM IST
Azan

ಸಾರಾಂಶ

ದೇಶದ ಕೆಲ ಭಾಗಗಳು ಇಸ್ಲಾಮಾಬಾದ್‌ ರೀತಿ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಡೆನ್ಮಾರ್ಕ್‌ ಸರ್ಕಾರ, ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್‌ ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಕೋಪನ್ ಹೇಗನ್‌: ದೇಶದ ಕೆಲ ಭಾಗಗಳು ಇಸ್ಲಾಮಾಬಾದ್‌ ರೀತಿ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಡೆನ್ಮಾರ್ಕ್‌ ಸರ್ಕಾರ, ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್‌ ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಮುಸಲ್ಮಾನರಿಗೆ ಪ್ರಾರ್ಥನೆಗೆ ಕರೆ ನೀಡುವುದಕ್ಕೆ ಡೆನ್ಮಾರ್ಕ್‌ನಲ್ಲಿ ಜಾಗ ಇಲ್ಲ

ಈ ಬಗ್ಗೆ ಅಲ್ಲಿನ ವಲಸೆ ಸಚಿವ ಮೊರ್ಟೆನ್ ಬೋಡ್‌ಸ್ಕೋವ್ ಮಾತನಾಡಿದ್ದು, ‘ಮುಸಲ್ಮಾನರಿಗೆ ಪ್ರಾರ್ಥನೆಗೆ ಕರೆ ನೀಡುವುದಕ್ಕೆ ಡೆನ್ಮಾರ್ಕ್‌ನಲ್ಲಿ ಜಾಗ ಇಲ್ಲ. ಇಲ್ಲಿರುವವರಿಗೆ, ಇಸ್ಲಾಮಾಬಾದ್‌ನಲ್ಲಿದ್ದೇವೆಯೋ ಅಥವಾ ಡೆನ್ಮಾರ್ಕ್‌ನಲ್ಲಿದ್ದೇವೆಯೋ ಎಂಬ ಅನುಮಾನ ಬರುವಂತಿರಬಾರದು’ ಎಂದಿದ್ದಾರೆ.

ಆಜಾನ್‌ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ರಾಷ್ಟ್ರವ್ಯಾಪಿ ನಿರ್ಬಂಧ

ಆಜಾನ್‌ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ರಾಷ್ಟ್ರವ್ಯಾಪಿ ನಿರ್ಬಂಧ ಹೇರುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಈಗಾಗಲೇ ಅಲ್ಲಿಂದ ಸಂಸತ್ತಿಗೆ ಸಲ್ಲಿಸಲಾಗಿದೆ. ಈಗಾಗಲೇ ಮುಖ ಮುಚ್ಚುವಂತೆ ಬುರ್ಖಾ, ನಿಕಾಬ್‌ ಧರಿಸುವುದನ್ನು ಡೆನ್ಮಾರ್ಕ್‌ನಲ್ಲಿ ನಿಷೇಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! - 39 ಲಕ್ಷ ಹುದ್ದೆಯಲ್ಲಿ, 31 ಲಕ್ಷ ಮಾತ್ರ ಭರ್ತಿ
2027ರ ಸಪ್ತರಾಜ್ಯ ಚುನಾವಣೆಗೆ ಬಿಜೆಪಿ ಈಗಿಂದಲೇ ರಣತಂತ್ರ!