ವಾಣಿಜ್ಯ ರಾಜಧಾನಿ ಮುಂಬೈ ರಸ್ತೆಗಳು ವಾಹನಗಳ ವೇಗ ಮಾತ್ರವಲ್ಲದೆ, ಸಂಗೀತದ ಮಧುರ ಧ್ವನಿಯನ್ನು ಸಹ ಆಲಿಸಲಿವೆ. ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ದೇಶದ ಮೊದಲ ಮ್ಯೂಸಿಕಲ್ ರೋಡ್ ಅನ್ನು ಬುಧವಾರ ಸಿಎಂ ದೇವೇಂದ್ರ ಫಡ್ನವೀಸ್ ಉದ್ಘಾಟಿಸಿದರು. ಈ ರಸ್ತೆಯ ಮೇಲೆ ವಾಹನ ಚಲಾಯಿಸಿದ ತಕ್ಷಣ, ಸ್ಲಂ ಡಾಗ್ ಮಿಲಿಯನೇರ್‌ನ ಜೈ ಹೋ ಹಾಡು ಕೇಳುತ್ತದೆ.
- ಸಂಭಾಜಿ ರಸ್ತೆಯಲ್ಲಿ ಸಾಗಿದಾಗ ಕೇಳುತ್ತದೆ ‘ಜೈ ಹೋ’
- ವಾಹನ 60-80 ಕಿ.ಮೀ. ವೇಗದಲ್ಲಿ ಸಾಗಿದಾಗ ಸಂಗೀತ
ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ರಸ್ತೆಗಳು ವಾಹನಗಳ ವೇಗ ಮಾತ್ರವಲ್ಲದೆ, ಸಂಗೀತದ ಮಧುರ ಧ್ವನಿಯನ್ನು ಸಹ ಆಲಿಸಲಿವೆ. ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ದೇಶದ ಮೊದಲ ಮ್ಯೂಸಿಕಲ್ ರೋಡ್ ಅನ್ನು ಬುಧವಾರ ಸಿಎಂ ದೇವೇಂದ್ರ ಫಡ್ನವೀಸ್ ಉದ್ಘಾಟಿಸಿದರು. ಈ ರಸ್ತೆಯ ಮೇಲೆ ವಾಹನ ಚಲಾಯಿಸಿದ ತಕ್ಷಣ, ಸ್ಲಂ ಡಾಗ್ ಮಿಲಿಯನೇರ್‌ನ ಜೈ ಹೋ ಹಾಡು ಕೇಳುತ್ತದೆ.--
ಎಲ್ಲಿದೆ ಸಂಗೀತ ರಸ್ತೆ?
ಮುಂಬೈನ ಛತ್ರಪತಿ ಕರಾವಳಿ ಕೋಸ್ಟಲ್ ಲೈನ್ ಹೆದ್ದಾರಿಯ ಅಮರ್ಸನ್ಸ್ ಗಾರ್ಡನ್ ಮತ್ತು ಬ್ರೀಚ್ ಕ್ಯಾಂಡಿ ನಡುವಿನ ಸುಮಾರು 500 ಮೀಟರ್ ಉದ್ದದ ರಸ್ತೆಯನ್ನು ಸಂಗೀತ ರಸ್ತೆಯಾಗಿ ಪರಿವರ್ತಿಸಲಾಗಿದೆ.ಹಾಡಿನ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?
ಅತ್ಯಾಧುನಿಕ ಹಂಗೇರಿ ತಂತ್ರಜ್ಞಾನ ಬಳಸಿಕೊಂಡು, ರಸ್ತೆ ಮೇಲ್ಮೈಯಲ್ಲಿ ವಿಶೇಷ ‘ಮ್ಯೂಸಿಕಲ್ ರಿಬ್ಸ್’ (ಗ್ರೂವ್ಸ್) ಅಳವಡಿಸಲಾಗಿದೆ. ವಾಹನವು ಗಂಟೆಗೆ 60 ರಿಂದ 80 ಕಿ.ಮೀ. ವೇಗದಲ್ಲಿ ಇದರ ಮೇಲೆ ಸಾಗಿದಾಗ, ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆ ಕಂಪನಗಳನ್ನು ಉಂಟುಮಾಡುತ್ತದೆ. ಆಗ ‘ಜೈ ಹೋ’ ಹಾಡು ಕೇಳಿ ಬರುತ್ತದೆ.----
ಸುರಕ್ಷತಾ ಉದ್ದೇಶವೂ ಉಂಟು
ಈ ಯೋಜನೆಯ ಉದ್ದೇಶ ಮನರಂಜನೆ ಮಾತ್ರವಲ್ಲದೆ ರಸ್ತೆ ಸುರಕ್ಷತೆ ಉತ್ತೇಜಿಸುವುದು ಕೂಡ. ಸಂಗೀತವನ್ನು ಸ್ಪಷ್ಟವಾಗಿ ಕೇಳಲು, ಚಾಲಕನು ಗಂಟೆಗೆ 60-80 ಕಿ.ಮೀ ವೇಗ ಕಾಯ್ದುಕೊಳ್ಳಬೇಕು. ವೇಗ ಕಡಿಮೆ ಅಥವಾ ಹೆಚ್ಚಿದ್ದರೆ, ಸಂಗೀತ ವಿರೂಪಗೊಳ್ಳುತ್ತದೆ. ಇದು ಚಾಲಕರು ನಿಗದಿತ ವೇಗ ಮಿತಿಯನ್ನು ಅನುಸರಿಸಲು ಪ್ರೋತ್ಸಾಹಿಸುತ್ತದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.