ರಾಮಮಂದಿರ ಉದ್ಘಾಟನೆ ದಿನವವೇ ನಿಜ ಸ್ವಾತಂತ್ರ್ಯ : ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌

KannadaprabhaNewsNetwork |  
Published : Jan 14, 2025, 01:00 AM ISTUpdated : Jan 14, 2025, 04:24 AM IST
Mohan Bhagwath

ಸಾರಾಂಶ

 ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಿ ಭಾರತದ ನೈಜ ಸ್ವಾತಂತ್ರ್ಯವೆಂದು ಘೋಷಿಸಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ.

ಇಂದೋರ್‌: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಿ ಭಾರತದ ನೈಜ ಸ್ವಾತಂತ್ರ್ಯವೆಂದು ಘೋಷಿಸಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದ್ದಾರೆ. 

ಇಂದೋರ್‌ನಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಅವರಿಗೆ ‘ ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ’ ಪ್ರದಾನದ ಬಳಿಕ ಮಾತನಾಡಿದ ಅವರು‘ಹಲವಾರು ಶತಮಾನಗಳವರೆಗೆ ಶತ್ರುದಾಳಿ ಎದುರಿಸಿದ ಭಾರತಕ್ಕೆ ಮಂದಿರ ಉದ್ಘಾಟನೆ ನಂತರ ನಿಜವಾದ ಸ್ವಾತಂತ್ರ್ಯ ದೊರೆಯಿತು. ರಾಮ ಮಂದಿರ ಆಂದೋಲನವನ್ನು ಭಾರತವನ್ನು ಜಾಗೃತಗೊಳಿಸಲು ಪ್ರಾರಂಭಿಸಲಾಯಿತು. ಇದರಿಂದ ದೇಶ ತನ್ನ ಸ್ವಸಾಮರ್ಥ್ಯದ ಮೇಲೆ ನಿಂತು ಜಗತ್ತಿಗೆ ದಾರಿ ತೋರಿಸಬಹುದು’ ಎಂದರು.

ಕರ್ನಾಟಕ ರೀತಿ ಬಂಗಾಳದಲ್ಲೂ ಬಾಣಂತಿ ಸಾವು: ದೀದಿ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಕೋಲ್ಕತಾ: ಕಾಂಗ್ರೆಸ್‌ ಆಡಳಿತದ ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ಮಾಸುವ ಮುನ್ನ ಬಂಗಾಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸದ್ದು ಮಾಡುತ್ತಿದೆ. ಘಟನೆಗೆ ಸಿಎಂ ಮಮತಾ ಬ್ಯಾನರ್ಜಿ ಕಾರಣ ಎಂದು ಆರೋಪಿಸಿರುವ ವಿಪಕ್ಷ ಕಾಂಗ್ರೆಸ್‌ ರಾಜೀನಾಮೆಗೆ ಆಗ್ರಹಿಸಿದೆ.

ರಾಜ್ಯದ ವಿವಿಧೆಡೆ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಐವಿ ದ್ರವ ನೀಡಿದ ಕಾರಣ ಹಲವು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತ ಪಡಿಸಿದ್ದು, ಕಾಂಗ್ರೆಸ್‌ ಅಧ್ಯಕ್ಷ ಶುಭಾಂಕರ್‌ ಸರ್ಕಾರ್‌ ನೇತೃತ್ವದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದೆ. ಬಾಣಂತಿ ಸಾವಿಗೆ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್‌, ಆರೋಗ್ಯ ಸಚಿವ ಸ್ಥಾನಕ್ಕೆ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಹಾಗೂ ನಿರ್ಲಕ್ಷ್ಯ ತೋರಿದ ಇಲಾಖೆಯ ಅಧಿಕಾರಿಗಳನ್ನು ವಜಾಕ್ಕೆ ಆಗ್ರಹಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2028ರವರೆಗೂ ಸಿದ್ದುವೇ ಸಿಎಂ: ಬೆಂಬಲಿಗರ ಬ್ಯಾಟಿಂಗ್‌
‘ಬನ್ನಿ, ನನ್ನನ್ನೂ ಬಂಧಿಸಿ’: ಮಡುರೋ ರೀತಿ ಟ್ರಂಪ್‌ಗೆ ಕೊಲಂಬಿಯಾ ಅಧ್ಯಕ್ಷ ಸವಾಲ್‌