ಅಚ್ಚರಿಯ ಸಂಗತಿ : 2020ರ ಕೋವಿಡ್‌ ಲಾಕ್ಡೌನ್‌, ಚಂದ್ರನ ಮೇಲೆಯೂ ಪರಿಣಾಮ ತಾಪಮಾನ ಕುಸಿತ!

KannadaprabhaNewsNetwork |  
Published : Oct 01, 2024, 01:44 AM ISTUpdated : Oct 01, 2024, 04:50 AM IST
ಕೋವಿಡ್‌ ಲಾಕ್ಡೌನ್‌ | Kannada Prabha

ಸಾರಾಂಶ

2020ರ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.  

ಬೆಂಗಳೂರು: ಜನರ ದೈನಂದಿನ ಜೀವನದಲ್ಲಿ ತಲ್ಲಣ ಸೃಷ್ಟಿಸಿದ್ದ 2020ರ ಕೋವಿಡ್‌ ಲಾಕ್ಡೌನ್‌, ಚಂದ್ರನ ತಾಪಮಾನದ ಮೇಲೆಯೂ ಪರಿಣಾಮ ಬೀರಿತ್ತು ಎಂದು ಅಚ್ಚರಿಯ ಸಂಗತಿಯನ್ನು ವರದಿಯೊಂದು ಬಹಿರಂಗಪಡಿಸಿದೆ.

ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ಕೆ. ದುರ್ಗಾ ಪ್ರಸಾದ್‌ ಮತ್ತು ಜಿ. ಅಂಬಿಲಿ 2017ರಿಂದ 2023ರ ನಡುವೆ ಚಂದ್ರನ 6 ಭಾಗಗಳಲ್ಲಿ ರಾತ್ರಿ ವೇಳೆ ಇರುವ ತಾಪಮಾನವನ್ನು ವಿಶ್ಲೇಷಿಸಿದ್ದರು. ನಾಸಾಸ ಲೂನಾರ್‌ ಆರ್ಬಿಟರ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು.

ಆ ಸಮಯದಲ್ಲಿ ಮಾನವ ಚಟುವಟಿಕೆ ಕಡಿಮೆಯಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆ, ಭೂಮಿಯಿಂದ ಹೊರಹೋಗುವ ವಿಕಿರಣಗಳಲ್ಲಿ ಇಳಿಕೆಯಾದ ಕಾರಣ ಕಡಿಮೆ ಶಾಖ ಉತ್ಪಾದನೆಯಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

2020ರ ಅವಧಿಯಲ್ಲಿ ಕನಿಷ್ಠ 96.2 ಕೆಲ್ವಿನ್‌ ತಾಪಮಾನ ವರದಿಯಾಗಿದ್ದು, ಇದು ಕ್ರಮೇಣ 2021-2022ರ ಲಾಕ್ಡೌನ್‌ ತೆರವಿನೊಂದಿಗೆ ಏರಿಕೆಯಾಯಿತು.

‘ಈ ಅಧ್ಯಯನದಿಂದ ಮಾನವ ಚಟುವಟಿಕೆಗಳಲ್ಲಿನ ಬದಲಾವಣೆಗಳು ಭೂಮಿಯ ಹತ್ತಿರದ ಆಕಾಶಕಾಯಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಅರಿಯಲು ಸಾಧ್ಯವಾಯಿತು. ಅಂತೆಯೇ ಸೌರ ಚಟುವಟಿಕೆಗಳು ಮತ್ತು ಋತು ಬದಲಾವಣೆನ್ನೂ ಗಮನಿಸಿದ್ದು, ಅವು ಇಂತಹ ಬದಲಾವಣೆಗೆ ಕಾರಣವಾಗಿಲ್ಲ’ ಎಂದು ಪ್ರಸಾದ್‌ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ