ನವದೆಹಲಿ: ಪತ್ರಕರ್ತೆ ಸಾಗರಿಕಾ ಘೋಷ್ ಅವರಿಗೆ ಟಿಎಂಸಿ ರಾಜ್ಯಸಭೆ ಟಿಕೆಟ್ ಸಿಕ್ಕಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಈ ಹಿಂದೆ ಸಾಗರಿಕಾ ಅವರು 2018ರಲ್ಲಿ ಟ್ವೀಟ್ ಮಾಡಿ, ‘ನನಗೆ ರಾಜ್ಯಸಭೆ ಟಿಕೆಟ್ಟೂ ಬೇಡ. ಏನೂ ಬೇಡ’ ಎಂದಿದ್ದರು.
ಇನ್ನು ಅವರ ಪತಿ, ಪತ್ರಕರ್ತ ರಾಜದೀಪ ಸರದೇಸಾಯಿ ಅವರು ‘ರಾಜ್ಯಸಭೆ ಟಿಕೆಟ್ ಬಿಕರಿಗೆ ಇವೆ’ ಎಂದು ಟೀವಿ ಕಾರ್ಯಕ್ರಮ ಮಾಡಿದ್ದರು.
ಹೀಗಾಗಿ ಸಾಗರಿಕಾ ಈಗ ಟಿಕೆಟ್ ಪಡೆವ ಮೂಲಕ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ಈಗ ನಡೆದುಕೊಂಡಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.