- ಸತತ 3ನೇ ದಿನ ಕುಸಿತ
- ನಿಫ್ಟಿ 488.05 ಅಂಕ ಇಳಿಕೆ
- ಇರಾನ್ ಯುದ್ಧದ ಕರಾಳ ಎಫೆಕ್ಟ್‌ಪಿಟಿಐ ಮುಂಬೈಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷ ಮತ್ತು ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಮಾನದಂಡ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ- ಸತತ 3ನೇ ದಿನವಾದ ಶುಕ್ರವಾರ ತೀವ್ರವಾಗಿ ಕುಸಿತ ಕಂಡಿವೆ. ಇದರೊಂದಿಗೆ ಇದು ಜೂನ್ 2022ರ ನಂತರ ಪೇಟೆಯ ಪಾಲಿಗೆ ಅತಿ ಕರಾಳ ವಾರವಾಗಿದೆ ಹಾಗೂ ಒಂದೇ ವಾರದಲ್ಲಿ ಹೂಡಿಕೆದಾರರ 19 ಲಕ್ಷ ಕೋಟಿ ರು. ಕರಗಿದೆ. ಮೇಲಾಗಿ ಯುದ್ಧ ಆರಂಭವಾದ 14 ದಿನದಲ್ಲಿ 33.68 ಲಕ್ಷ ಕೋಟಿ ರು. ಪೇಟೆಯ ಸಂಪತ್ತು ಇಳಿಕೆಯಾಗಿದೆ.ಶುಕ್ರವಾರ ಸೆನ್ಸೆಕ್ಸ್, ಮಧ್ಯಂತರದಲ್ಲಿ 1,579.82 ಅಂಕ ಅಥವಾ ಶೇ.2ರಷ್ಟು ಕುಸಿತ ಕಂಡು 74,454.60 ಕ್ಕೆ ತಲುಪಿತ್ತು. ಅಂತಿಮವಾಗಿ 1,470.50 ಅಂಕ ಅಥವಾ ಶೇ.1.93 ರಷ್ಟು ಕುಸಿತ ಕಂಡು 74,563.92 ಕ್ಕೆ ತಲುಪಿತು. ಇದರಿಂದ ಹೂಡಿಕೆದಾರರು ಒಂದೇ ದಿನ 9.08 ಲಕ್ಷ ಕೋಟಿ ರು. ಹಾನಿ ಅನುಭವಿಸಿದರು.ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 488.05 ಅಂಕ ಅಥವಾ ಶೇ. 2.06 ರಷ್ಟು ಕುಸಿತ ಕಂಡು 23,151.10 ಕ್ಕೆ ತಲುಪಿತು.
===
ವಾಯುದಾಳಿ, 6 ಮಂದಿ ಸಾವು
ಪಾಕ್ ಯುದ್ಧವಿಮಾನಗಳು ಕಂದಹಾರ್‌ನಲ್ಲಿರುವ ಏರ್‌ಪೋರ್ಟ್ ಸಮೀಪದ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ನ ಇಂಧನ ಡಿಪೋ ಮೇಲೂ ದಾಳಿ ನಡೆಸಿವೆ. ಈ ಕಂಪನಿಯು ವಿಶ್ವಸಂಸ್ಥೆಯ ಹಾಗೂ ನಾಗರಿಕ ವಿಮಾನಗಳಿಗೆ ಇಂಧನ ಪೂರೈಸುವ ಕೆಲಸ ಮಾಡುತ್ತದೆ ಎಂದು ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಜುಬಿಹುಲ್ಲಾ ಮುಜಾಹಿದ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.ಆದರೆ ಪಾಕಿಸ್ತಾನ ಮಾತ್ರ ತಾನು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.
ಚೀನಾದ ವಿಶೇಷ ರಾಯಭಾರಿ ಯೂ ಶಿಯಾವೋಯೆಂಗ್ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಆರೋಪದಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದೊಳಗೆ ವಾಯು ದಾಳಿ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ಕಳೆದ ಮೂರು ವಾರಗಳಿಂದ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಇರಾಕ್‌ನಲ್ಲಿ ಅಮೆರಿಕ ವಿಮಾನ
ಪತನ: ಎಲ್ಲ 6 ಸಿಬ್ಬಂದಿ ಸಾವು- ಇಂಧನ ಮರುಪೂರಣ ವಿಮಾನ ಇದು
-ಇರಾನ್ ಬೆಂಬಲಿತ ಸಂಘಟನೆಯಿಂದ ದಾಳಿ ಹೊಣೆ
ದುಬೈ: ಅಮೆರಿಕ ವಾಯುಪಡೆಯ ಕೆಸಿ-135 ಎಂಬ ಇಂಧನ ಮರುಪೂರಣ ವಿಮಾನವೊಂದು ಪಶ್ಚಿಮ ಇರಾಕ್‌ನಲ್ಲಿ ಪತನವಾಗಿದ್ದು, ಅದರಲ್ಲಿದ್ದ ಎಲ್ಲ 6 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಶುಕ್ರವಾರ ದೃಢಪಡಿಸಿದೆ.ಇರಾನ್ ಬೆಂಬಲಿತ ಇಸ್ಲಾಮಿಕ್ ರೆಸಿಸ್ಟನ್ಸ್ ಇನ್ ಇರಾಕ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಆದರೆ ಇದನ್ನು ತಳ್ಳಿಹಾಕಿರುವ ಅಮೆರಿಕ, ‘ಇದು ಸ್ನೇಹಿ ವಾಯುಪ್ರದೇಶದಲ್ಲಿ ಸಂಭವಿಸಿದ ಘಟನೆ. ಯಾವುದೇ ಶತ್ರುದಾಳಿ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಕೆಸಿ-135 ಅಮೆರಿಕದ ಹಳೆಯದಾದ ಆದರೆ ಅತ್ಯಂತ ಮುಖ್ಯವಾದ ಇಂಧನ ಮರುಪೂರಣ ವಿಮಾನವಾಗಿದ್ದು, ಯುದ್ಧವಿಮಾನ ಮತ್ತು ಇತರ ವಿಮಾನಗಳಿಗೆ ಆಕಾಶದಲ್ಲೇ ಇಂಧನ ತುಂಬುವ ಕೆಲಸ ಮಾಡುತ್ತದೆ. ಇದು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಕಳೆದುಕೊಂಡ 4ನೇ ವಿಮಾನ ಎಂದು ವರದಿಯಾಗಿದೆ.