ಮುಸ್ಲಿಂ ಹುಡುಗನ ಜತೆ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ!

Published : Mar 12, 2026, 12:00 PM IST
monalisa-bhosle-age-controversy-after-marriage

ಸಾರಾಂಶ

ಕಳೆದ ವರ್ಷ ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಫೇಮಸ್‌ ಆಗಿದ್ದ ನೀಲಿ ಕಂಗಳ ಚೆಲುವೆ ಮೊನಾಲಿಸಾಗೆ ಕುಟುಂಬಸ್ಥರ ವಿರೋಧದ ನಡುವೆಯೂ ಬುಧವಾರ ಮುಸ್ಲಿಂ ವ್ಯಕ್ತಿಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಫೇಮಸ್‌ ಆಗಿದ್ದ ನೀಲಿ ಕಂಗಳ ಚೆಲುವೆ ಮೊನಾಲಿಸಾಗೆ ಕುಟುಂಬಸ್ಥರ ವಿರೋಧದ ನಡುವೆಯೂ ಬುಧವಾರ ಮುಸ್ಲಿಂ ವ್ಯಕ್ತಿಯ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಂಭಮೇಳದ ಬಳಿಕ ಜಾಲತಾಣದಲ್ಲಿ ಹವಾ

ಕುಂಭಮೇಳದ ಬಳಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಭೋಸ್ಲೆ, ಫರ್ಮಾನ್ ಖಾನ್‌ ಎಂಬ ಮುಸ್ಲಿಂ ಹುಡುಗನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು 6 ತಿಂಗಳಿನಿಂದ ಪ್ರೀತಿಸಿದ್ದರು. ಆದರೆ ಇದಕ್ಕೆ ಆಕೆಯ ತಂದೆ ವಿಜಯ್‌ ಸಿಂಗ್‌ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಜೋಡಿ ತವರು ರಾಜ್ಯ ಮಧ್ಯಪ್ರದೇಶದಿಂದ ಕೇರಳಕ್ಕೆ ಆಗಮಿಸಿ ಕೇರಳದ ಅರುಮನೂರ್‌ ದೇವಸ್ಥಾನದಲ್ಲಿ ವರಿಸಿದ್ದಾರೆ.

ಥಂಪನೂರು ಪೊಲೀಸ್‌ ಠಾಣೆಯಲ್ಲಿ  ದೂರು

ಈ ನಡುವೆ, ಇಲ್ಲಿಯೂ ಮೊನಾಲಿಸಾ ತಂದೆ ಬಂದು ಮಗಳನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದು, ಆ ಯತ್ನ ವಿಫಲವಾಗಿದೆ. ಇದೇ ವೇಳೆ ಮೊನಾಲಿಸಾ ಇಲ್ಲಿನ ಥಂಪನೂರು ಪೊಲೀಸ್‌ ಠಾಣೆಯಲ್ಲಿ ತಂದೆ ವಿರುದ್ಧ ಮದುವೆಗೆ ಬಲವಂತದ ಆರೋಪದಲ್ಲಿ ದೂರು ದಾಖಲಿಸಿದ್ದಾಳೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ದೇಶವ್ಯಾಪಿ ಗ್ಯಾಸ್‌ ಟ್ರಬಲ್‌ಗೆ ಹೋಟೆಲ್‌ಗಳು ಬಂದ್‌ : ಜನಜೀವನದ ಮೇಲೆ ಭಾರೀ ಹೊಡೆತ