ನವದೆಹಲಿ: ಬೌದ್ಧ ಧರ್ಮಗುರು ದಲೈಲಾಮಾ ಅವರು ಭಾನುವಾರ ಸಂಜೆ ಅಸ್ವಸ್ಥರಾಗಿದ್ದು, ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ದಲೈ ಲಾಮಾ ಅವರು ಭಾನುವಾರ ಸಂಜೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಏಮ್ಸ್ ತಿಳಿಸಿದೆ. ದಲೈ ಲಾಮಾ ಅವರು ವಿಪರೀತ ಶೀತ ತೊಂದರೆಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.