ಕನ್ನಡಕದ ಬದಲು ಐ ಡ್ರಾಪ್ಸ್‌ ಬಳಕೆಗೆ ಕೇಂದ್ರ ಸರ್ಕಾರದಿಂದ ನಿಷೇಧ : ಔಷಧ ನಿಯಂತ್ರಣ ಮಂಡಳಿ ಕ್ರಮ

KannadaprabhaNewsNetwork |  
Published : Sep 12, 2024, 01:55 AM ISTUpdated : Sep 12, 2024, 05:05 AM IST
ಐ ಡ್ರಾಪ್ಸ್‌ | Kannada Prabha

ಸಾರಾಂಶ

ಓದಲು ತೊಂದರೆಯಾಗುವ ಸಮಸ್ಯೆಗೆ ಪರಿಹಾರ ಎಂದು ಪ್ರಚಾರ ಮಾಡಲಾಗುತ್ತಿದ್ದ ಐ ಡ್ರಾಪ್ಸ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ.  ನಿಯಮಗಳನ್ನು ಉಲ್ಲಂಘಿಸಿ ಔಷಧ ತಯಾರಕರು ಈ ಡ್ರಾಪ್ಸ್‌ಗಳನ್ನು ರೀಡಿಂಗ್‌ ಗ್ಲಾಸ್‌ಗೆ ಪರ್ಯಾಯ ಎಂದು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 ನವದೆಹಲಿ :  ನಲವತ್ತು ವರ್ಷದ ಆಸುಪಾಸಿನವರಿಗೆ ಸಮೀಪ ದೃಷ್ಟಿದೋಷ ಉಂಟಾಗಿ ಓದಲು ತೊಂದರೆಯಾದಾಗ ಅದಕ್ಕೆ ಕನ್ನಡಕದ ಬದಲು ಬಳಸಬಹುದು ಎನ್ನಲಾಗಿದ್ದ ಐ ಡ್ರಾಪ್ಸ್‌ಗೆ ಕೇಂದ್ರ ಸರ್ಕಾರ ಪರವಾನಗಿಯನ್ನು ಅಮಾನತುಗೊಳಿಸಿದೆ.

ಮುಂಬೈ ಮೂಲದ ಎಂಟೋಡ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ತಾನು ‘ಪಿಲೋಕ್ಯಾರ್ಪೀನ್‌ ಹೈಡ್ರೋಕ್ಲೋರೈಡ್‌ ಆಪ್ತಾಲ್ಮಿಕ್‌ ಸೊಲ್ಯುಷನ್‌’ ಎಂಬ ಐ ಡ್ರಾಪ್ಸ್‌ ತಯಾರಿಸಿದ್ದು, ಅದನ್ನು ಕಣ್ಣಿಗೆ ಹಾಕಿಕೊಂಡರೆ ರೀಡಿಂಗ್‌ ಗ್ಲಾಸ್‌ನ ನೆರವಿಲ್ಲದೆ ಓದಬಹುದು ಎಂದು ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ), ‘ನಿಮಗೆ ಈ ಔಷಧ ತಯಾರಿಸಿ, ಅದನ್ನು ದೃಷ್ಟಿದೋಷವಿರುವವರ ಚಿಕಿತ್ಸೆಗೆ ಬಳಸುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆದರೆ ನೀವು ಈ ಔಷಧ ರೀಡಿಂಗ್‌ ಗ್ಲಾಸ್‌ಗೆ ಪರ್ಯಾಯ ಎಂದು ಪ್ರಚಾರ ಮಾಡಿದ್ದೀರಿ. ಹೀಗೆ ಪ್ರಚಾರ ಮಾಡುವುದಕ್ಕೆ ನಿಮಗೆ ಅನುಮತಿ ನೀಡಿರಲಿಲ್ಲ. ಇದರಿಂದ ಜನರಿಗೆ ತಪ್ಪು ಮಾಹಿತಿ ರವಾನೆಯಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಈ ಔಷಧದ ಉತ್ಪಾದನೆ ಮತ್ತು ಮಾರಾಟಕ್ಕೆ ನೀಡಿರುವ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ’ ಎಂದು ಆದೇಶಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

SIR ವೇಳೆ ಕೈಬಿಟ್ಟ ಮತದಾರರ ಹೆಸರು ಸೇರ್ಪಡೆಗೆ ಅಭಿಯಾನ
ಇರಾನ್‌ ಕೈವಾಡ ಸಾಬೀತಾದ್ರೆ ತಕ್ಕ ಶಾಸ್ತಿ : ಟ್ರಂಪ್‌