ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕ ವರದಿ ವೋಟ್‌ ಬ್ಯಾಂಕ್‌ ಉದ್ದೇಶದ್ದು!

KannadaprabhaNewsNetwork |  
Published : Jun 29, 2024, 12:33 AM ISTUpdated : Jun 29, 2024, 05:16 AM IST
ರಣಧೀರ್‌ ಜೈಸ್ವಾಲ್‌ | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಬಿಡುಗಡೆ ಮಾಡಿರುವ ವರದಿಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ.

ನವದೆಹಲಿ: ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಬಿಡುಗಡೆ ಮಾಡಿರುವ ವರದಿಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ.

ಈ ವರದಿ ಕೇವಲ ಪಕ್ಷಪಾತ, ಮತಬ್ಯಾಂಕ್‌ ಪರಿಗಣನೆಯಿಂದ ಸಿದ್ಧಪಡಿಸಿದಂತಿದೆ ಎಂದು ತಿರುಗೇಟು ನೀಡಿದೆ.ವರದಿ ಆಧರಿಸಿ ಗುರುವಾರ ಮಾತನಾಡಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ‘ಭಾರತದಲ್ಲಿ ಮತಾಂತರ ವಿರೋಧಿ ಕಾನೂನುಗಳು, ಅಲ್ಪಸಂಖ್ಯಾತರ ವಿರುದ್ಧ ದ್ವೇಷಭರಿತ ಭಾಷಣ ಮತ್ತು ಅವರ ಮನೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವ ಸ್ದಳಗಳನ್ನು ಧ್ವಂಸಗೊಳಿಸುವ ಘಟನೆ ಹೆಚ್ಚಳವಾಗಿದೆ’ ಎಂದು ಕಳವಳ ವ್ಯಕ್ತ ಪಡಿಸಿದ್ದರು.

ಇದಕ್ಕೆ ಉತ್ತರಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ಈ ವರದಿ ಭಾರತದ ವಿರುದ್ಧ ಪೂರ್ವಕಲ್ಪಿತ ನಿರೂಪಣೆ ಮುನ್ನಡೆಸಲು ಕೆಲವು ಘಟನೆಗಳನ್ನು ಆಯ್ದುಕೊಂಡಿದೆ. ಪಕ್ಷಪಾತದಿಂದ ಕೂಡಿದೆ. ಭಾರತದ ಸಾಮಾಜಿಕ ರಚನೆಯ ಬಗ್ಗೆ ಗೊತ್ತಿಲ್ಲದೇ ಈ ವರದಿಯನ್ನು ತಯಾರಿಸಲಾಗಿದೆ. ಜೊತೆಗೆ ವೋಟ್‌ಬ್ಯಾಂಕ್‌ ಉದ್ದೇಶ ಹೊಂದಿದೆ’ ಎಂದು ಹೇಳುವ ಮೂಲಕ ವರದಿಯನ್ನು ತಿರಸ್ಕರಿಸಿದ್ದಾರೆ.

ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇದ್ದು, ಅದನ್ನು ಗುರಿಯಾಗಿಸಿ ಭಾರತ ಈ ತಿರುಗೇಟು ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಚರಾಜ್ಯಗಳ ಚುನಾವಣೆ ಮುಹೂರ್ತ ಫಿಕ್ಸ್ : ಇಲ್ಲಿ ಗೆಲ್ಲೋರ್ಯಾರು ? ಸೋಲು ಯಾರಿಗೆ?
ಕಚ್ಚಾ ತೈಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ